ಕರ್ನೂಲ್ ​(ಆಂಧ್ರಪ್ರದೇಶ):ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ, ಗರ್ಭಿಣಿ ಪತ್ನಿಯನ್ನು ನೋಡಲು ಊರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುವ ದಾರುಣ ಘಟನೆ ನಂದಾವರಂ ವಲಯದ ಕನಕವೀಡು ಪೇಟದಲ್ಲಿ ನಡೆದಿದೆ.
ಮನೋಹರ್​ (29) ಮೃತ ಯೋಧ. ಇವರು ರಜೆ ಪಡೆದು ಗರ್ಭಿಣಿ ಪತ್ನಿಯನ್ನು ನೋಡಲು ಬರುತ್ತಿದ್ದರು. ಮಧ್ಯಪ್ರದೇಶದಲ್ಲಿ ರೈಲಿನಿಂದ ಇಳಿದು, ಮತ್ತೊಂದು ರೈಲಿಗೆ ಹತ್ತುವಾಗ ಕಾಲು ಜಾರಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ಊರು ತಲುಪುವೆ ಎಂದು ಕರೆ ಮಾಡಿದ್ದರು ಮರಳಿದ್ದು ಶವವಾಗಿ!
ಗರ್ಭದಲ್ಲಿ ಮಗುಹೊತ್ತು ಪತಿಗಾಗಿ ಕಾಯುತ್ತಿದ್ದ ಇವರ ಪತ್ನಿ ರಮಾದೇವಿ ಗಂಡ ಸತ್ತ ಸುದ್ದಿ ಕೇಳುತ್ತಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೋಹರ್​ ಮತ್ತು ರಮಾದೇವಿ ಅವರ ಮದುವೆ ಮೂರು ವರ್ಷಗಳ ಹಿಂದೆ ನಡೆದಿತ್ತು. ಗರ್ಭಿಣಿಯಾಗಿದ್ದ ಅವರು ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ಪತಿಗಾಗಿ ಕಾದಿದ್ದರು. ಆದರೆ ಅಲ್ಲಿ ಬಂದದ್ದು ಸಾವಿನ ಸುದ್ದಿ! ಇಡೀ ಗ್ರಾಮ ಶೋಕದಲ್ಲಿ ಮುಳುಗಿದೆ.
ಬಾಸ್ಕೆಟ್‌ ಬಾಲ್‌ ಫೋಟೋ ಅಪ್‌ಲೋಡ್‌ ಮಾಡಿ ಯುವತಿಯರ ನಿದ್ದೆ ಕೆಡಿಸಿದ ನಟ ರಣ್‌ವೀರ್‌ ಸಿಂಗ್‌!

ಟಿ20 ವಿಶ್ವಕಪ್‌ ಬಹುಮಾನ ಮೊತ್ತ ಘೋಷಿಸಿದ ಐಸಿಸಿ- ಯಾರ ತೆಕ್ಕೆಗೆ ಬೀಳಲಿದೆ 12 ಕೋಟಿ ರೂ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 3 =
Remember me
