ನವದೆಹಲಿ:ಏರ್‌ಟೆಲ್‌ ಗ್ರಾಹಕರ ನಂಬರ್‌ಗಳಿಗೆ ಕನ್ನ ಹಾಕಿರುವ ಹ್ಯಾಕರ್‌ಗಳು, ಗ್ರಾಹಕರ ಪ್ರತಿಯೊಂದು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಇಂಟರ್​ನೆಟ್​ ಭದ್ರತಾ ಸಂಶೋಧಕರೊಬ್ಬರು ಬಹಿರಂಗಪಡಿಸಿದ್ದಾರೆ.
ಏರ್‌ಟೆಲ್‌ನ ಗ್ರಾಹಕರಾಗಿರುವ ಜನರ ಆಧಾರ್‌ ನಂಬರ್‌, ಗ್ರಾಹಕರ ವಿಳಾಸ, ಫೋನ್‌ ನಂಬರ್‌ ಅಷ್ಟೇ ಅಲ್ಲದೇ ಫೋನ್‌ ಮೂಲಕ ಹಂಚಿಕೆಯಾಗಿರುವ ಸಂಪೂರ್ಣ ಖಾಸಗಿ ಮಾಹಿತಿ ಸೋರಿಕೆಯಾಗಿದೆ ಎಂದು ಸಂಶೋಧಕ ರಾಜಶೇಖರ್​ ರಾಜಾಹಾರಿಯಾ ಹೇಳಿದ್ದಾರೆ.
ಇಷ್ಟೇ ಅಲ್ಲದೇ, ಇವೆಲ್ಲ ಮಾಹಿತಿಗಳನ್ನು ಹ್ಯಾಕರ್ಸ್‌ ಮಾರಾಟ ಮಾಡಲು ಯತ್ನಿಸಿದರು ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ. ಇದನ್ನು ಪತ್ತೆಹಚ್ಚಿರುವ ರಾಜಶೇಖರ್‌ ಅವರು, ಈ ರೀತಿಯ ಮಾಹಿತಿಗಳನ್ನು ಕದ್ದು, ಏರ್​ಟೆಲ್​ ಕಂಪೆನಿಗೆ ಬೆದರಿಕೆ ಹಾಕಿದ್ದಾರೆ, ಅವರ ಬಳಿಯಿಂದ ಸುಮಾರು 3,500 ಬಿಟ್​ಕಾಯಿನ್​ ಹಣ ವಸೂಲಿಗೆ ಮುಂದಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಕ್ಕೆ ಜಗ್ಗದ ಕಂಪೆನಿ ಹಣ ನೀಡದಿದ್ದ ಕಾರಣ ಹ್ಯಾಕರ್‌ಗಳು ಎಲ್ಲಾ ಮಾಹಿತಿಯನ್ನು ವೆಬ್​ಸೈಟ್​ ಒಂದರಲ್ಲಿ ಮಾರಲು ಮುಂದಾಗಿದ್ದಾರೆ. ಆದರೆ ನಂತರ ಈ ವೆಬ್​ಸೈಟ್ ಅನ್ನು ತೆಗೆದುಹಾಕಲಾಗಿದೆ ಎಂದಿದ್ದಾರೆ ರಾಜ್‌ಶೇಖರ್‌.
Another Big Data Breach? A Hacker Group alleged uploaded "shell" in@airtelindiaServer. Now selling all India Airtel subscribers data including Aadhaar Number. Posted 2.5 Million as sample data. (in Jan 2021)#InfoSec#DataLeak#GDPR#databreaches#dataprotection#DataPrivacyDaypic.twitter.com/uxWopfKU0M
— Rajshekhar Rajaharia (@rajaharia)February 2, 2021

ಮೊಬೈಲ್​ ಗ್ರಾಹಕರ ಮೇಲೆ ನಿಗಾವಹಿಸುವ ಸರ್ಕಾರಿ ಏಜೆನ್ಸಿಗಳ ಮುಖಾಂತರ ಇಂಥದ್ದೊಂದು ಸೋರಿಕೆ ಆಗಿದೆ ಎಂದು ಕೆಲವು ಮೂಲಗಳು ಸ್ಪಷ್ಟಪಡಿಸಿವೆ. ಜತೆಗೆ ಈ ರೀತಿ ಸೋರಿಕೆಯಾದ ಎಲ್ಲಾ ಮಾಹಿತಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಏರ್​ಟೆಲ್​ ಗ್ರಾಹಕರಿಗೆ ಸೇರಿದ್ದು ಎಂದು ಕೂಡ ಹೇಳಲಾತ್ತಿದೆ.
ಈ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಏರ್​ಟೆಲ್​ ಸಂಸ್ಥೆ, ಗ್ರಾಹಕರ ಖಾಸಗಿತನಕ್ಕೆ ನಾವು ಹೆಚ್ಚು ಒತ್ತು ಕೊಡುತ್ತಿದ್ದೇವೆ. ಅವರ ಎಲ್ಲಾ ಮಾಹಿತಿಗಳನ್ನು ಸುರಕ್ಷಿತವಾಗಿ ಇರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮ ಕಡೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಹೇಳಿದೆ. ಈ ಬಗ್ಗೆ ಸೂಕ್ತ ಅಧಿಕಾರಿಗಳಿಗೆ ಮಾಹಿತಿ ಸಹ ನೀಡಿದ್ದೇವೆ ಎಂದು ಹೇಳಿದೆ.
ಪ್ರಿಯತಮೆ ಹೇಳಿದಂತೆ ಮನೆಯಲ್ಲಿ ಯಾರೂ ಇಲ್ಲದಾಗ ರಾತ್ರಿ ಗುಟ್ಟಾಗಿ ಮನೆಗೆ ಬಂದ… ಆಮೇಲೆ?

ಶಿರೋಮಣಿ ಅಕಾಲಿ ದಳದ ಮುಖ್ಯಸ್ಥನ ಮೇಲೆ ಗುಂಡಿನ ದಾಳಿ- ವಿಡಿಯೋದಲ್ಲಿ ಕೃತ್ಯ ಸೆರೆ

ನೋಟು ಮುದ್ರಣ ಕೇಂದ್ರದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ಮಮ್ಮಿಯ ಬಾಯಲ್ಲಿ ಸಿಕ್ತು ಚಿನ್ನದ ನಾಲಿಗೆ: ಸತ್ತ ಮೇಲೂ ವ್ಯಕ್ತಿ ಮಾತಾಡುತ್ತಾರಂತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 16 =
Remember me
