ಬೆಂಗಳೂರು:ರಾಜಸ್ಥಾನದಲ್ಲಿ‌ ನಡೆದ ಕನ್ಹಯ್ಯಲಾಲ್ ಕೊಲೆ ಆರೋಪಿಯಲ್ಲಿ ಒಬ್ಬ ಬಿಜೆಪಿ ನಾಯಕರ ಜೊತೆ ನಿಂತಿದ್ದ ಫೋಟೊ ಹರಿಬಿಟ್ಟು ಕೊಲೆಗಡುಕ ಬಿಜೆಪಿಯವನು ಎಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪಕ್ಕೆ‌ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.
ಬಾಟ್ಲಾ ಹೌಸ್ ಶೂಟ್ ಔಟ್ ಪ್ರಕರಣವನ್ನು ನೆನಪಿಸಿರುವ ಅವರು ಸೋನಿಯಾ ಗಾಂಧಿ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪ್ರಲ್ಹಾದ ಜೋಷಿ, ಬಿಜೆಪಿಗೆ ಭಯೋತ್ಪಾದಕರ ಜೊತೆ ನಂಟಿದೆ ಎಂದು ಕಾಂಗ್ರೆಸ್ ಆರೋಪ ಮಾಡ್ತಾ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸೋನಿಯಾ ಗಾಂಧಿ ಅಧಿಕಾರದಲ್ಲಿ ಇದ್ದಾಗ, ಮನಮೋಹನ್ ಸಿಂಗ್ ಸುಮ್ನೆ ಹೆಸರಿಗೆ ಪ್ರಧಾನಿ ಆಗಿದ್ದರು. ಅಧಿಕಾರ ನಡೆಸುತ್ತಾ ಇದ್ದದ್ದು ಸೋನಿಯಾ ಗಾಂಧಿ. ಆ ಸಮಯದಲ್ಲಿ ಬಾಟ್ಲಾ ಹೌಸ್​ನಲ್ಲಿ ಭಯೋತ್ಪಾದಕರ ಮೇಲೆ‌ ಶೂಟ್ ಔಟ್ ಆದಾಗ ಒಬ್ಬ ಭಯೋತ್ಪಾದಕ ಸತ್ತು ಹೋಗಿದ್ದ. ಆಗ ಸೋನಿಯಾ ಗಾಂಧಿ ಭಯೋತ್ಪಾದಕ ಸತ್ತಿದ್ದಕ್ಕೆ ಕಣ್ಣೀರು ಹಾಕಿದ್ದರಂತೆ. ಮಾತ್ರವಲ್ಲ ರಾಹುಲ್ ಗಾಂಧಿ ಅಫ್ಜಲ್ ಗುರು ಜೊತೆ ಫೋಟೊ ತೆಗೆಸಿಕೊಂಡವರು. ಇಂಥವರು ಇಂದು ಬಿಜೆಪಿ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ಮಾಡಿದರು.
ಸೋನಿಯಾ ಗಾಂಧಿ ಆಪ್ತ ಸಹಾಯಕ 71 ವರ್ಷದ ಮಾಧವನ್​ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು!

ಅಗ್ನಿಪಥ್​ v/s ಕಾಂಗ್ರೆಸ್​- ಎಲ್ಲಿದ್ದೆ ಇಲ್ಲೀ ತನಕ…ಈಗ್ಯಾಕೆ ಬಂದ್ಯಯ್ಯ: ವಿಂಗ್​ ಕಮಾಂಡರ್​ ಹೇಳಿದ್ದೇನು ನೋಡಿ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 + 1 =
Remember me
