ಲಂಡನ್:ಸಹೋದ್ಯೋಗಿಯೊಬ್ಬರಿಗೆ ಕಚೇರಿಯಲ್ಲಿಯೇ ಮುತ್ತು ಕೊಟ್ಟು ಆರೋಗ್ಯ ಸಚಿವರೊಬ್ಬರು ಕೆಲಸ ಕಳೆದುಕೊಂಡಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.
ಮ್ಯಾಟ್ ಹಾನ್‌ಕಾಕ್ ಮುತ್ತು ಕೊಟ್ಟ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾರೆ. ಅಂದಹಾಗೆ ಇವರು ಎಲ್ಲರ ಎದುರು, ಕಚೇರಿಯ ಅವಧಿಯಲ್ಲಿ ಮುತ್ತು ಕೊಟ್ಟಿದ್ದಕ್ಕೆ ಈ ಶಿಕ್ಷೆಯಲ್ಲ, ಬದಲಿಗೆ ಕರೊನಾ ನಿಯಮ ಉಲ್ಲಂಘನೆ ಮಾಡಿದರು ಎನ್ನುವ ಕಾರಣಕ್ಕೆ! ಆರೋಗ್ಯ ಸಚಿವರಾಗಿದ್ದಕೊಂಡು ಕರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇವರ ರಾಜೀನಾಮೆ ಪಡೆಯಲಾಗಿದೆ.
ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲರಿಗೂ ಬುದ್ಧಿಹೇಳುವ ಆರೋಗ್ಯ ಸಚಿವರು ಹೀಗೆ ಮಾಡಿದ್ದು ತಪ್ಪು ಎನ್ನುವುದು ಇದಕ್ಕೆ ಕಾರಣ. ಈ ಸಚಿವರು ಚುಂಬಿಸಿದ ಫೋಟೋಗಳು ವೈರಲ್ ಆಗಿದ್ದವು. ನಂತರ ಈ ಬಗ್ಗೆ ಅವರಿಗೆ ಸಮಜಾಯಿಷಿ ಕೇಳಿದಾಗ ಕರೊನಾ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ನಂತರ ರಾಜೀನಾಮೆ ನೀಡಿದ್ದಾರೆ. ಇವರ ಜಾಗಕ್ಕೆ ಪಾಕಿಸ್ತಾನದ ಸಂಸತ್ ಸದಸ್ಯ ಸಾಜಿದ್ ಜಾವಿದ್ ಬ್ರಿಟನ್ ನೂತನ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಮೋದಿ ಸಂಪುಟಕ್ಕೆ ಜುಲೈನಲ್ಲಿ ಸರ್ಜರಿ? 27 ಹೊಸ ಮುಖಗಳು… ರೇಸ್‌ನಲ್ಲಿ ಯಾರಿದ್ದಾರೆ ನೋಡಿ…

ಮೊಬೈಲ್‌ ಖರೀದಿಗೆ ಬಾಲಕಿ ಮಾರಿದಳು 12 ಮಾವಿನಹಣ್ಣು – ಸಿಕ್ಕಿದ್ದು 1.20 ಲಕ್ಷ ರೂ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + thirteen =
Remember me
