ಗ್ವಾಲಿಯರ್‌:ಅಪ್ಪ- ಅಮ್ಮ ಬೈದರೆಂದು ಒಮ್ಮೊಮ್ಮೆ ಮಕ್ಕಳು ಎಂತೆಂಥ ಘೋರ ಕೃತ್ಯಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಭಯಾನಕ ಘಟನೆಯೇ ಸಾಕ್ಷಿಯಾಗಿದೆ. ತಂದೆ ಬೈದರು ಎಂಬ ಕಾರಣಕ್ಕೆ ನೊಂದುಕೊಂಡ 17 ವರ್ಷದ ಬಾಲಕ ಕಬ್ಬಿಣದ ಮೊಳೆಗಳನ್ನೇ ನುಂಗಿದ್ದಾನೆ!
ಇಂಥದ್ದೊಂದು ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ಧನಂಜಯ ಎಂಬ ಬಾಲಕ ಇಂಥ ಒಂದು ದುಸ್ಸಾಹಸಕ್ಕೆ ಇಳಿದಿದ್ದಾನೆ.
ಇದು ಕೆಲವು ದಿನಗಳ ಹಿಂದೆ ನಡೆದಿರುವ ಘಟನೆಯಾಗಿದೆ. ಈತನ ತಂದೆ ಯಾವುದೋ ಕಾರಣಕ್ಕೆ ಬೈದಿದ್ದಾರೆ. ಆಗ ಧನಂಜಯ ಮನೆಯಲ್ಲಿದ್ದ 21 ಕಬ್ಬಿಣದ ಮೊಳೆಗಳನ್ನು ನುಂಗಿದ್ದಾನೆ. ಆದರೆ ಈ ವಿಷಯ ಮನೆಯವರಿಗೆ ಗೊತ್ತೇ ಇರಲಿಲ್ಲ. ಇದ್ದಕ್ಕಿದ್ದಂತೆಯೇ ಈತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಾಲಕರಿಗೂ ಇದು ಏನು ಎಂದು ತಿಳಿಯಲಿಲ್ಲ, ಬಾಲಕನೂ ಬಾಯಿ ಬಿಡಲಿಲ್ಲ.
ಹೊಟ್ಟೆ ನೋವು ಜಾಸ್ತಿಯಾದಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಸ್ಕ್ಯಾನಿಂಗ್‌ ಮಾಡಿದಾಗ ಸಿಕ್ಕಾಪಟ್ಟೆ ಮೊಳೆಗಳು ಕಾಣಿಸಿಕೊಂಡಿವೆ. ವೈದ್ಯರು ಕೂಡ ಇದು ಏನೆಂದು ತಿಳಿಯದೇ ಒಮ್ಮೆಲೇ ದಂಗಾಗಿದ್ದಾರೆ. ಏಕೆಂದರೆ ಇಷ್ಟೊಂದು ಮೊಳೆಗಳು ಹೊಟ್ಟೆಯಲ್ಲಿ ಹೋಗಲು ಹೇಗೆ ಸಾಧ್ಯ ಎಂದು ಅವರೂ ಅಂದುಕೊಂಡಿದ್ದಾರೆ. ಬಳಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಿದಾಗ ಹೊಟ್ಟೆಯಲ್ಲಿ ನಿಜವಾಗಿಯೂ ಇರುವುದು ಮೊಳೆಗಳೇ ಎಂದು ತಿಳಿದಿದೆ.
ಅಚ್ಚರಿಯಿಂದ ವೈದ್ಯರು ವಿಷಯ ಹೇಳಿದಾಗ ಬಾಲಕ ಬಾಯಿಬಿಟ್ಟಿದ್ದಾನೆ. ಎರಡೂವರೆ ಗಂಟೆಗಳ ಸತತ ಶಸ್ತ್ರಚಿಕಿತ್ಸೆ ನಡೆಸಿ ಮೊಳೆಗಳನ್ನು ಕೊನೆಗೂ ಹೊರತೆಗೆಯಲಾಗಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕುರಾನ್‌ ವಿರುದ್ಧ ಸಮರಸಾರಿದ್ದ ವಕ್ಫ್‌ ಬೋರ್ಡ್‌ ಅಧ್ಯಕ್ಷನ ಹಿನ್ನೆಲೆಯೇ ರೋಚಕ: ಹಿಂದೂಧರ್ಮ ಅಪ್ಪಿದ ಈ ರಿಜ್ವಿ ಯಾರು?

ಅಪ್ಪು ಕನಸಿನ ‘ಗಂಧದ ಗುಡಿ’ ಕುರಿತು ಸಿಎಂ ಮಾಡಿರುವ ಟ್ವೀಟ್‌ಗೆ ಅಶ್ವಿನಿ ಪ್ರತಿಕ್ರಿಯೆ ಹೀಗಿದೆ…

VIDEO: ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 5 =
Remember me
