ಹೈದರಾಬಾದ್‌:9ನೇ ತರಗತಿ ಓದುತ್ತಿರುವ ಬಾಲಕನೊಬ್ಬ ಕಾರು ಚಾಲನೆ ಮಾಡಿ ನಾಲ್ವರ ಸಾವಿಗೆ ಕಾರಣವಾಗಿರುವ ಭೀಕರ ಘಟನೆ ತೆಲಂಗಾಣದ ಕರೀಮ್​​ನಗರ ಜಿಲ್ಲೆಯಲ್ಲಿ ನಡೆದಿದೆ. ಫುಟ್‌ಪಾಥ್‌ಗೆ ಕಾರು ನುಗ್ಗಿಸಿರುವ ಬಾಲಕ, ಅಲ್ಲಿ ಕುಳಿತಿದ್ದ ಓರ್ವ ಬಾಲಕಿ ಹಾಗೂ ಮೂವರು ಮಹಿಳೆಯರ ಪ್ರಾಣ ಕಿತ್ತುಕೊಂಡಿದ್ದಾನೆ!
ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತರು ಇದ್ದರು. ಅದರಲ್ಲಿ ಒಬ್ಬಾತ ಕಾರು ಡ್ರೈವ್​​ ಮಾಡುತ್ತಿದ್ದ. ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡಿದ ಬಾಲಕ, ವಾಹನವನ್ನು ಫೂಟ್​ಪಾತ್​ ಮೇಲೆ ಹರಿಸಿದ್ದಾನೆ. ಅಲ್ಲಿದ್ದ ನಾಲ್ವರ ಪ್ರಾಣ ಹೋಗಿದೆ. ಇವರಲ್ಲಿ ಓರ್ವ 14 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಜಾನೆ 6.50ರ ಹೊತ್ತಿಗೆ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ದಟ್ಟವಾದ ಮಂಜು ಇತ್ತು. ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ ಬಾಲಕ ಕಣ್ಣನ್ನು ಉಜ್ಜಿಕೊಳ್ಳಲು ಸ್ಟೀರಿಂಗ್​​ನಿಂದ ಕೈ ತೆಗೆದಿದ್ದಾನೆ. ಆ ವೇಳೆ ಆರು ನಿಯಂತ್ರಣ ತಪ್ಪಿದೆ. ಗಲಿಬಿಲಿಗೊಂಡ ಬಾಲಕ ಬ್ರೇಕ್​ ಬದಲಿಗೆ ಆಕ್ಸಿಲರೇಟರ್​ ಪ್ರೆಸ್​ ಮಾಡಿದ್ದಾನೆ. ಆಗ ಕಾರು ನೇರವಾಗಿ ಫುಟ್‌ಪಾಥ್‌ ಮೇಲೆ ಕುಳಿತಿದ್ದ ಮಹಿಳೆಯರ ಮೇಲೆ ಕಾರು ಹರಿದಿದ್ದು ಅವರೆಲ್ಲಾ ಮೃತಪಟ್ಟಿದ್ದಾರೆ.
9ನೇ ತರಗತಿಯವರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕಾರು ಅಲ್ಲೇ ಬಿಟ್ಟು, ಎಲ್ಲರೂ ಓಡಿಹೋಗಿದ್ದರು. ನಂತರ ಅವರನ್ನು ಬಂಧಿಸಲಾಗಿದೆ. ಮೂವರು ಅಪ್ರಾಪ್ತರ ವಿರುದ್ಧ ಐಪಿಎಸ್​ ಸೆಕ್ಷನ್​ 304ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಡ್ರೈವ್​ ಮಾಡುತ್ತಿದ್ದ ಬಾಲಕನ ತಂದೆ ವಿರುದ್ಧವೂ ಕೇಸ್​ ದಾಖಲಾಗಿದೆ ಎಂದು ತೆಲಂಗಾಣ ಪೊಲೀಸ್‌ ಕಮಿಷನರ್ ವಿ.ಸತ್ಯನಾರಾಯಣ ತಿಳಿಸಿದ್ದಾರೆ.
ಡಿವೋರ್ಸ್‌ ನಂತ್ರವೂ ಪತ್ನಿಯ ಜತೆ ಓಡಾಡಿಕೊಂಡಿದ್ದ ಹೃತಿಕ್‌ ಇದೀಗ ಹೊಸಬಳ ಜತೆ ಹೋಟೆಲ್‌ನಲ್ಲಿ! ಯಾರೀಕೆ ನೋಡಿ…

ಪ್ರಿಯಾಂಕಾ ಗಾಂಧಿಯನ್ನು ‘ಅಕ್ಕ’ ಎನ್ನುತ್ತಿದ್ದ ನಿದಾ ಖಾನ್‌ ಬಿಜೆಪಿಗೆ! ಕಾರಣ ಬಿಚ್ಚಿಟ್ಟ ತ್ರಿವಳಿ ತಲಾಖ್‌ ಸಂತ್ರಸ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
