ಬ್ರೆಜಿಲ್‌:ಲೈಫ್‌ ಇನ್ಶುರೆನ್ಸ್‌, ಮೆಡಿಕಲ್‌ ಇನ್ಶುರೆನ್ಸ್‌ ಇವೆಲ್ಲವೂ ಕಾಮನ್‌. ಕೆಲವರು ಮನೆಗೆ, ವಾಹನಗಳಿಗೆ ವಿಮೆ ಮಾಡಿಸುವುದೂ ಸಹಜ. ಆದರೆ ಇಲ್ಲೊಬ್ಬ ಮಾಡೆಲ್‌, ತನ್ನ ಹಿಂದಿನ ಭಾಗ ಅಂದರೆ ಪೃಷ್ಠಕ್ಕೆ ವಿಮೆ ಮಾಡಿಸಿದ್ದಾಳೆ, ಜಾಲತಾಣದಲ್ಲಿ ಈಗ ಈಕೆಯದ್ದೇ ಸದ್ದು.
ಒಂದೆರಡಲ್ಲ, ಬರೋಬ್ಬರಿ 13 ಕೋಟಿ ರೂಪಾಯಿ ವಿಮೆಯನ್ನು ತನ್ನ ಈ ಅಂಗಕ್ಕೆ ಮಾಡಿಸಿದ್ದಾರೆ. ಬ್ರೆಜಿಲಿಯನ್‌ ರೂಪದರ್ಶಿಯಾಗಿರುವ ನಥೀ ಕೀಹಾರಾ ಹೀಗೊಂದು ಸುದ್ದಿಮಾಡಿದ್ದಾಳೆ. ಅಷ್ಟಕ್ಕೂ ಈಕೆಗೆ ತನ್ನ ಈ ಅಂಗದ ಮೇಲೆ ಏಕಿಷ್ಟು ಮೋಹ ಎಂದು ಕೇಳಬಹುದು. ಸೌಂದರ್ಯ ಸ್ಪರ್ಧೆಗಳಲ್ಲಿ ಕೆಲವೊಂದು ಅಂಗಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಈಕೆಯ ಪೃಷ್ಠವನ್ನು ಗುತುರಿಸಿ, ಅಕೆಗೆ ಮಿಸ್‌ ಬಮ್‌ಬಮ್‌ (ಪೃಷ್ಠ ಸುಂದರಿ)-2021 ಎಂದು ಬಿರುದು ನೀಡಲಾಗಿದೆ. ಈ ಮೂಲಕ ಅತ್ಯಂತ ಕಿರಿಯ ಪೃಷ್ಠ ಸುಂದರಿ ಎಂಬ ಖ್ಯಾತಿ ಇವಳದ್ದಾಗಿದೆ.

ಇದಕ್ಕೆ ಕಾರಣವೂ ಇದೆ. ಅದೇನೆಂದರೆ, 35 ವರ್ಷ ವಯಸ್ಸಿನ ನಥಿಯ ಈ ಭಾಗ ಬ್ರೆಜಿಲ್‍ನಲ್ಲಿ ಅತಿ ದೊಡ್ಡದಾಗಿದೆಯಂತೆ. ಅಲ್ಲಿರುವ ಯುವತಿಯ ಪೃಷ್ಠ ಇಷ್ಟು ದೊಡ್ಡದಾಗಿ ಇರುವುದಿಲ್ಲವಂತೆ. ಅದಕ್ಕಾಗಿಯೇ ವಿಶೇಷವಾಗಿರುವ ನನ್ನ ಈ ಅಂಗಕ್ಕೆ 13 ಕೋಟಿ ರೂ. ವಿಮೆ ಮಾಡಿಸಿದ್ದೇನೆ ಎಂದಿದ್ದಾರೆ ಈ ಸುಂದರಿ.
ಸದ್ಯ ಈಕೆಯ ಪೃಷ್ಠ 126 ಸೆಂಟಿಮೀಟರ್ ಇದೆ. ಅದನ್ನು 130 ಸೆಂ.ಮೀ ಅನ್ನು ಹೊಂದುವುದು ನನ್ನ ಗುರಿ. ಈಗಿರುವ ಅಳತೆ ನನಗೆ ಅಷ್ಟು ತೃಪ್ತಿಕರವಾಗಿಲ್ಲ ಎಂದಿದ್ದಾಳೆ. ನನ್ನ ಪೃಷ್ಠವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ನನ್ನ ದೇಹವನ್ನು ಕಾಪಾಡಿಕೊಳ್ಳಲು ನಾನು ಸಾಕಷ್ಟು ತರಬೇತಿ ನೀಡುತ್ತೆನೆ. ತಾಯ್ತನದ ನಂತರ ಜಿಮ್‍ನಲ್ಲಿ ತೂಕ, ಆಹಾರದ ಮೇಲೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದೆ ಎಂದು ಹೇಳಿಕೊಂಡಿದ್ದಾಳೆ.
ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ… ವಿಐಪಿಗಳಂತೆ ಅಂತ್ಯಸಂಸ್ಕಾರ

‘ಈಜೋದನ್ನು, ಮೀನು ಹಿಡಿಯೋದನ್ನು ಚಡ್ಡಿದೋಸ್ತ್‌ಗೆ ಕಲಿಸಿದ್ದೆ… 30ಕ್ಕೆ ಬರ್ತೇನೆ, ನಾಟಿಕೋಳಿ ಸಾಂಬಾರ್‌ ಮಾಡು ಎಂದಿದ್ರು… ’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − one =
Remember me
