ನವದೆಹಲಿ:ಈ ಸುಂದರಿ ಮಿಸ್​ ದೆಹಲಿ ಅಂತೆ. ಸಾಮಾಜಿಕ ಕಾರ್ಯಕರ್ತೆ, ಫ್ಯಾಶನ್ ಡಿಸೈನರ್, ಏಷ್ಯಾದ ಟಾಪ್ ಟೆನ್ ವೃತ್ತಿಪರ ಪೋಕರ್ ಆಟಗಾರರಲ್ಲಿ ಒಬ್ಬಳು ಎಂದೆಲ್ಲಾ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ಈಕೆ, ತಾನು ಮಿಸ್​ ದೆಹಲಿ ಎಂದೂ ಬರೆದುಕೊಂಡಿದ್ದಾಳೆ!
ಅವಳು ದೆಹಲಿಯ ಸುಂದರಿಯಾಗಿದ್ದಳೋ, ಇಲ್ಲವೋ ಇನ್ನಷ್ಟೇ ತನಿಖೆ ಆಗಬೇಕಿದೆ. ಆದರೆ ಸದ್ಯಕ್ಕಂತೂ ಈ ಸುಂದರಿ ಪೊಲೀಸರ ಅತಿಥಿಯಾಗಿದ್ದಾಳೆ.
ತನ್ನ ಸ್ನೇಹಿತನ ಜತೆ ಮಜಾ ಮಾಡಲು ಗೋವಾಕ್ಕೆ ಹೋಗಿ 3,300 ಡಾಲರ್​ (ಸುಮಾರು 2.45 ಲಕ್ಷ ರೂಪಾಯಿ) ಹಣ ಎಗರಿಸುವಲ್ಲಿ ಯಶಸ್ವಿಯಾಗಿದ್ದ ಈಕೆ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಕಂಬಿ ಎಣಿಸುತ್ತಿದ್ದಾಳೆ.
ಅಂದಹಾಗೆ ಇವಳ ಹೆಸರು ಅಮೃತಾ ಸೇಥಿ ಹಾಗೂ ಇವಳ ಬಾಯ್​ಫ್ರೆಂಡ್​ ಹೆಸರು ಅಕ್ಷಿತ್ ಜಾಂಬ್. ಇಬ್ಬರೂ ದೆಹಲಿಯ ನಿವಾಸಿಗಳು. ಗೋವಾಕ್ಕೆ ಟ್ರಿಪ್​ಗೆ ಹೋಗಿದ್ದಾರೆ. ಟ್ರಿಪ್​ ಎಂದರೆ ಸುಮ್ಮನೆಯೆ? ಮೋಜು ಮಸ್ತಿಗಾಗಿ ಲಕ್ಷಾಂತರ ರೂಪಾಯಿ ಕದಿಯಲು ಪ್ಲ್ಯಾನ್​ ಹಾಕಿದ್ದಾರೆ.
ಇದನ್ನೂ ಓದಿ:ಅಪ್ಪನ ಜೀವಕ್ಕೆ ಕುತ್ತು ತಂದ ನೌಕರಿ- ಮಗನಿಂದಲೇ ಭೀಕರ ಹತ್ಯೆ!
ಅದರಂತೆ ಇವರು ಫಾರೆಕ್ಸ್​ ಸಂಸ್ಥೆಯ (ವಿದೇಶಿ ಕರೆನ್ಸಿ ವಿನಿಮಯ ಮಾಡುವ ಸಂಸ್ಥೆ) ಉದ್ಯೋಗಿಯನ್ನು ಟಾರ್ಗೆಟ್​ ಮಾಡಿಕೊಂಡಿದ್ದಾರೆ. ಅಮೃತಾ ಸಂಸ್ಥೆಗೆ ಕರೆ ಮಾಡಿದ್ದು, ತನ್ನ ಪರಿಚಯ (ಅಸಲಿಯೋ, ನಕಲಿಯೋ ಗೊತ್ತಿಲ್ಲ) ಮಾಡಿಕೊಂಡಿದ್ದಾಳೆ. ನಂತರ ನಮ್ಮ ಬಳಿ 2.50 ಲಕ್ಷ ರೂ. ಇದೆ. ಅದರ ಬದಲು ತಮಗೆ ಡಾಲರ್ ಬೇಕಿತ್ತು ಎಂದು ಹೇಳಿ ಐಷಾರಾಮಿ ಕ್ಲಬ್​ ಒಂದರ ವಿಳಾಸ ನೀಡಿದ್ದಾಳೆ.
ಆ ಕ್ಲಬ್​ ಹೆಸರು ಕೇಳಿದ ಸಂಸ್ಥೆ ಇವರು ನಿಜಕ್ಕೂ ಸಂಭಾವಿತರು ಎಂದುಕೊಂಡು ತನ್ನ ಉದ್ಯೋಗಿಯನ್ನು ಕಳುಹಿಸಿಕೊಟ್ಟಿದೆ. ಮನೋಜ್ ಸೂದ್ ಎಂಬ ಉದ್ಯೋಗಿ ಡಾಲರ್ ತೆಗೆದುಕೊಂಡು ಹೋಗಿದ್ದಾರೆ. ನಂತರ ಸಬೂಬು ಹೇಳಿದ ಈ ಜೋಡಿ, ನಾವು ಹಣ ವಿತ್​ಡ್ರಾ ಮಾಡಬೇಕು. ಸದ್ಯ ಸಮಸ್ಯೆ ಇದೆ. ನಂತರ ಹಣ ಕೊಡುತ್ತೇವೆ ಎಂದೆಲ್ಲಾ ಹೇಳಿದ್ದಾರೆ.
ಇವರ ನಡವಳಿಕೆ ನೋಡಿದ ಉದ್ಯೋಗಿ ಮನೋಜ್​ ಅವರಿಗೆ ಅನುಮಾನ ಬಂದಿದೆ. ಅವರು ಡಾಲರ್​ ಕೊಡಲು ನಿರಾಕರಿಸಿದಾಗ ಅವರ ಕೈನಿಂದ ಬ್ಯಾಗ್​ ಕಿತ್ತುಕೊಂಡು ಈ ಜೋಡಿ ಕಾರಿನಲ್ಲಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದೆ.
ಪೊಲೀಸರಿಗೆ ಮನೋಜ್​ ದೂರು ನೀಡಿದಾಗ, ಆ ಪ್ರದೇಶದಲ್ಲಿ ಇದ್ದ ಸಿಸಿಟಿವಿ ಫುಟೇಜ್​ ಪರಿಶೀಲನೆ ಮಾಡಿದ್ದಾರೆ ಪೊಲೀಸರು. ಅವರಿಗೆ ಕಾರಿನ ನಂಬರ್ ಸುಳಿವು ಸಿಕ್ಕಿದ್ದೇ ತಡ, ಅದರ ಬೆನ್ನಟ್ಟಿ ಹೋಗಿ ಈ ಜೋಡಿಯನ್ನು ಅರೆಸ್ಟ್​ ಮಾಡಿದ್ದಾರೆ.
ಕೇರಳದ ಮುಸ್ಲಿಂ ಬಾಹುಳ್ಯದ ಜಿಲ್ಲೆಯಲ್ಲಿ ಬಿಜೆಪಿಯಿಂದ ಹೀಗೊಂದು ದಾಖಲೆ!

ಜಾನ್​​ಸನ್​ ಪೌಡರ್​ನಿಂದ ಕ್ಯಾನ್ಸರ್​: ₹890 ಕೋಟಿ ಪರಿಹಾರಕ್ಕೆ ‘ಸುಪ್ರೀಂ’ ಆದೇಶ

‘ಐದು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್​ ಮಾಡಿದ್ದೇನೆ- ಬೇಕೆಂದಾಗ ಮಗು ಪಡೆಯುವೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + fifteen =
Remember me
