ನವದೆಹಲಿ:ತೆಲಂಗಾಣದ 23 ವರ್ಷದ ಸುಂದರಿ ಮಾನಸಾ ವಾರಣಾಸಿಗೆ 2020ರ ಮಿಸ್ ಇಂಡಿಯಾ ವರ್ಲ್ಡ್‌ ಕಿರೀಟ ಲಭಿಸಿದೆ.ಬುಧವಾರ ನಡೆದ ವಿಎಲ್​ಸಿಸಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮಾನಸಾ ಅಂತಿಮ ಸುತ್ತಿನಲ್ಲಿ ಗೆದ್ದು ಮಿಸ್ ಇಂಡಿಯಾ ವರ್ಲ್ಡ್‌ 2020 ಕಿರೀಟವನ್ನು ತಮ್ಮದಾಗಿಸಿಕೊಂಡರು. ಹರಿಯಾಣದ ಮಾಣಿಕಾ ಮಿಸ್ ಇಂಡಿಯಾ ಗ್ರ್ಯಾಂಡ್ 2020 ಆಗಿ ಆಯ್ಕೆಯಾಗಿದ್ದು, ಉತ್ತರ ಪ್ರದೇಶದ ಮಾನ್ಯ ಸಿಂಗ್ ರನ್ನರ್ ಅಪ್ ಆಗಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯುವ 70ನೇ ವರ್ಷದ ಮಿಸ್‌ ವರ್ಲ್ಡ್ ವೇದಿಕೆಯಲ್ಲಿ ಮಾನಸ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಮೂಲಕ ಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ಸ್ಪರ್ಧೆಗೆ ಭಾರತದಿಂದ ಇವರು ಆಯ್ಕೆಯಾಗಿದ್ದಾರೆ.ಇವರು ಫೆಮಿನಾ ಮಿಸ್ ಇಂಡಿಯಾ ತೆಲಂಗಾಣ 2020 ಎಂದೂ ಬಿರುದು ಪಡೆದುಕೊಂಡಿದ್ದಾರೆ.


A post shared by Femina Miss India (@missindiaorg)

ಹೈದರಾಬಾದ್​ನಲ್ಲಿ ಜನಿಸಿರುವ 23 ವರ್ಷದ ಮಾನಸಾ, ಗ್ಲೋಬಲ್ ಇಂಡಿಯನ್ ಶಾಲೆಯಲ್ಲಿ ಓದಿದ್ದು, ವಾಸವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಆರ್ಥಿಕ ಮಾಹಿತಿ ವಿನಿಮಯ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಬಾಲಿವುಡ್‌ ನಟಿಯರಾದ ನೇಹಾ ಧೂಪಿಯಾ, ಚಿತ್ರಾಂಗದಾ ಸಿಂಗ್, ನಟ ಪುಲ್ಕಿತ್ ಸಾಮ್ರಾಟ್, ಡಿಸೈನರ್ ಗಳಾದ ಫಾಲ್ಗುಣಿ ಮತ್ತು ಶೇನ್ ಪಿಕಾಕ್ ತೀರ್ಪುಗಾರರಾಗಿದ್ದರು. ಸ್ಪರ್ಧೆಯಲ್ಲಿ ಮಿಸ್ ವರ್ಲ್ಡ್ ಏಷ್ಯಾ 2019 ಸುಮನ್ ರಾವ್ ನೇತೃತ್ವ ವಹಿಸಿದ್ದರು.
ತಮಗೆ ಪುಸ್ತಕಗಳನ್ನು ಓದುವುದು, ಸಂಗೀತ ಮತ್ತು ಯೋಗ ಅಭ್ಯಾಸ ಸೇರಿದಂತೆ ಹಲವು ವಿಚಾರಗಳಲ್ಲಿ ಆಸಕ್ತಿ ಇದೆ ಎಂದಿದ್ದಾರೆ ಮಾನಸಾ. ಭರತನಾಟ್ಯ ಮತ್ತು ಸಂಗೀತ ಕಲಾವಿದೆಯೂ ಹೌದು ಇವರು.
ಒಂದು ಮಗು ನೀತಿನಿಂದ ಜನಸಂಖ್ಯೆ ಕುಸಿತ- ಚೀನಾ ಕಂಗಾಲು; ಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್​!

ಅವಳೀಗ ಎರಡು ಮಕ್ಕಳ ತಾಯಿ- ಆದ್ರೂ ನನ್​ ಗಂಡನ ಬಗ್ಗೆ ಯಾಕೋ ಅನುಮಾನ; ಏನು ಮಾಡಲಿ?

ಮುಸ್ಲಿಂ ಹೆಣ್ಣುಮಕ್ಕಳಿಗೆ 18 ವರ್ಷ ಆಗದಿದ್ದರೂ ಪ್ರೌಢಾವಸ್ಥೆಗೆ ಬಂದರೆ ಮದುವೆಗೆ ಸ್ವತಂತ್ರರು; ಹೈಕೋರ್ಟ್​

ರೈತ ಮುಖಂಡರಿಂದ ಜೀವಕ್ಕೆ ಅಪಾಯವಿದೆ- ಹಿಂಸಾಚಾರದ ಕುರಿತು ನಟ ದೀಪ್​ ಸಿಧು ಹೇಳಿರುವ ಮಾಹಿತಿ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − three =
Remember me
