ಕೊಚ್ಚಿ:It’s time to go… (ಹೋಗುವ ಕಾಲ ಬಂತು)… ಹೀಗೆಂದು ನಿನ್ನೆಯಷ್ಟೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು 2019ರ ‘ಮಿಸ್‌ ಕೇರಳ‘ ಕಿರೀಟ ಮುಡಿಗೇರಿಸಿಕೊಂಡಿದ್ದ 24 ವರ್ಷದ ಅನ್ಸಿ ಕಬೀರ್.
ನಿನ್ನೆ ರಾತ್ರಿ ಭೀಕರ ಕಾರು ಅಪಘಾತದಲ್ಲಿ ನಿನ್ನೆ ತಡರಾತ್ರಿ 2019ರಲ್ಲಿ ಇದೇ ಬ್ಯೂಟಿ ಸ್ಪರ್ಧೆಯಲ್ಲಿ ರನ್ನರ್ಸ್‌ ಅಪ್‌ ಆಗಿ ಮಿಂಚಿದ್ದ ಅಂಜನಾ ಶಾಜನ್ (25) ಜತೆ ಅನ್ಸಿ ಕೂಡ ದಾರುಣ ಸಾವು ಕಂಡಿದ್ದಾರೆ.
ಇವರಿಬ್ಬರೂ ತ್ರಿಶೂರ್​ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ನಿನ್ನೆ ತಡರಾತ್ರಿ ಕೊಚ್ಚಿಯ ವೈಟಿಲ ಪ್ರದೇಶದಲ್ಲಿ ಇವರ ಕಾರೂ ಅಪಘಾತಕ್ಕೀಡಾಗಿದೆ. ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿದೆ.
ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಇದ್ದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ, ಅನ್ಸಿ ಹಾಗೂ ಅಂಜನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ಅವರ ಇನ್ಸ್‌ಟ್ರಾಗ್ರಾಂ ಪೋಸ್ಟ್‌ ವೈರಲ್‌ ಆಗುತ್ತಿದ್ದು, ಅದರಲ್ಲಿ ಅವರು ತಮ್ಮ ವಿಡಿಯೋ ಒಂದನ್ನು ಶೇರ್‌ ಮಾಡಿದ್ದಾರೆ. ಬಿಳಿಯ ಡ್ರೆಸ್‌ ತೊಟ್ಟು ಹಸಿರಿನ ಸಿರಿಯ ನಡುವೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಅದಾಗಿದ್ದು, ಅದಕ್ಕೆ ಅವರು ಕೊಟ್ಟ ಕ್ಯಾಪ್ಷನ್‌ ಹೋಗುವ ಕಾಲ ಬಂದಿದೆ ಎಂದು!
ಇದನ್ನು ಅವರು ಯಾವ ಅರ್ಥದಲ್ಲಿ ಬರೆದುಕೊಂಡಿದ್ದರೋ ತಿಳಿಯದು. ಅದರೆ ವಿಧಿಯಾಟದಂತೆ ಆ ಪೋಸ್ಟ್‌ ನಿಜವಾಗಿ ಹೋಗಿದೆ. ಅಪಘಾತದಲ್ಲಿ ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ. ಅವರ ಇನ್‌ಸ್ಟಾಗ್ರಾಮ್‌ ಓದಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ಇನ್‌ಸ್ಟಾಗ್ರಾಂ ವಿಡಿಯೋ ಇಲ್ಲಿದೆ ನೋಡಿ:


A post shared by Ansi Kabeer (@ansi_kabeer)

ಭೀಕರ ರಸ್ತೆ ಅಪಘಾತ: ದಾರುಣ ಸಾವು ಕಂಡ ‘ಮಿಸ್‌ ಕೇರಳ’, ‘ಮಿಸ್‌ ರನ್ನರ್ಸ್‌ ಅಪ್‌’

ಡಾ.ರಾಜ್‌ಕುಮಾರ್‌ ಉರುಫ್‌ ಮುತ್ತುರಾಜನಾದ ನಾನು ನನ್ನ ಮಗ ಮಾಸ್ಟರ್‌ ಲೋಹಿತನ ಹೆಸರನ್ನು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − five =
Remember me
