ನ್ಯೂಯಾರ್ಕ್‌:ಮಾಡೆಲ್‌, ವಕೀಲೆ, ವರದಿಗಾರ್ತಿಯಾಗಿ ಖ್ಯಾತಿ ಪಡೆದು 2019ರಲ್ಲಿ ಮಿಸ್‌ ಯುಎಸ್‌ಎ (ಅಮೆರಿಕ ಸುಂದರಿ) ಆಗಿಯೂ ಹೊರಹೊಮ್ಮಿದ್ದ ಚೆಸ್ಲಿ ಕ್ರಿಸ್ಟ್ 60ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಇನ್ನೂ ನಿಖರ ಮಾಹಿತಿ ಹೊರಬರಬೇಕಿದೆ.
1991ರಲ್ಲಿ ಜನಿಸಿದ್ದ ಚೆಸ್ಲಿ ಕ್ರಿಸ್ಟ್ ಫ್ಯಾಷನ್ ಲೋಕದಲ್ಲಿ ಅಪಾರ ಹೆಸರು ಮಾಡಿದ್ದರು. ಮಾತ್ರವಲ್ಲದೇ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನು ಪದವಿ ಪಡೆದು ವಕೀಲೆಯಾಗಿಯೂ ಖ್ಯಾತಿ ಪಡೆದವರು. ಅಮೆರಿಕದ ಎಕ್ಸ್‌ಟ್ರಾ ಟಿವಿ ವರದಿಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದ ಇವರು, ‘ವೈಟ್ ಕಾಲರ್ ಗ್ಲಾಮ್’ ಎಂಬ ಫ್ಯಾಷನ್​ ಬ್ಲಾಗ್​ ಸ್ಥಾಪಿಸಿ ಜಗದ್ವಿಖ್ಯಾತಿ ಗಳಿಸಿದ್ದರು.
ಫ್ಯಾಷನ್‌ ಜಗತ್ತಿನ ಹಲವರು ಆತ್ಮಹತ್ಯೆಯ ಹಾದಿ ತುಳಿಯುತ್ತಿರುವ ಹಿನ್ನೆಲೆಯಲ್ಲಿ, ಇಡೀ ಫ್ಯಾಷನ್‌ ಜಗತ್ತೀಗ ತಲ್ಲಣಗೊಂಡಿದೆ. 2021ರ ಮಿಸ್​ ಯೂನಿವರ್ಸ್ ಆಗಿರುವ ಭಾರತದ ಹರ್ನಾಜ್ ಸಂಧು ಚೆಸ್ಲಿ ಕ್ರಿಸ್ಟ್ ನಿಧನದಿಂದ ಆಘಾತವಾಗಿದೆ ಎಂದಿದ್ದಾರೆ. ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಕ್ರಿಸ್ಟ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹರ್ನಾಜ್‌ ಶೇರ್‌ ಮಾಡಿಕೊಂಡಿದ್ದಾರೆ.
“ಇದು ನಂಬಲಾಗದ ಸಂಗತಿಯಾಗಿದೆ, ನೀವು ಯಾವಾಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ರೆಸ್ಟ್​ ಇನ್​ ಪೀಸ್​ ಚೆಸ್ಲಿ” ಎಂದು ಬರೆದುಕೊಂಡಿದ್ದಾರೆ.
ಡ್ಯಾಡಿ… ಕೊನೆಯದಾಗಿ ಮುಖ ನೋಡಿಬಿಡಿ, ವಿಡಿಯೋ ಕಾಲ್‌ ಮಾಡಿ 6ನೇ ಮಹಡಿಯಿಂದ ಜಿಗಿದ ಖ್ಯಾತ ಮಾಡೆಲ್‌!

ಗ್ಯಾಂಗ್‌ರೇಪ್‌ ಮಾಡಿ ಬೆತ್ತಲೆ ಮೆರವಣಿಗೆ ನಡೆಸಿದ್ದಕ್ಕೆ ಕೊನೆಗೂ ಬಯಲಾಯ್ತು ಕಾರಣ! ತಂಗಿಯನ್ನೂ ಬಿಡದ ಕಾಮುಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + sixteen =
Remember me
