ಪ್ರಕಾಶಂ (ಆಂಧ್ರಪ್ರದೇಶ):ಮಕ್ಕಳು ಚಿಕ್ಕವರಿರುವಾಗಿ ಮೊಬೈಲ್​ ಫೋನ್​ ಹಿಡಿದುಕೊಂಡು ಮುದ್ದುಮುದ್ದು ಮಾತನಾಡಿದಾಗ ಮನೆಯವರಿಗೆ ಖುಷಿಯೋ ಖುಷಿ. ಮಗು ಸ್ವಲ್ಪ ದೊಡ್ಡದಾಗಿದ್ದರೆ ಫೋನ್​ನಲ್ಲಿ ಮೆಸೇಜ್​ ಮಾಡೋದು, ತಾನೇ ಅದರಲ್ಲಿ ಏನೋ ಕಂಡುಹಿಡಿಯುವುದು… ಹೀಗೆಲ್ಲಾ ಮಾಡಿದಾಗ ತಮ್ಮ ಮಕ್ಕಳ ಗುಣಗಾನ ಮಾಡುವ ಪಾಲಕರಿಗೇನೂ ಕಮ್ಮಿ ಇಲ್ಲ.
ಇಷ್ಟು ಹೊಗಳಿಕೆಗೆ ಉಬ್ಬಿ ಅದೇ ಮಕ್ಕಳು ಸ್ವಲ್ಪ ದೊಡ್ಡದಾದ ಮೇಲೆ ಮೊಬೈಲ್​ ದಾಸರಾಗಿಬಿಟ್ಟರೆ ಆಗ ಶುರುವಾಗತ್ತೆ ಪಾಲಕರಿಗೆ ಟೆನ್ಷನ್​. ಇದು ಒಂದು ಕಥೆಯಾದರೆ, ಇನ್ನು ಕೆಲವು ಮಕ್ಕಳು ಅವರಿವರು ಮಾಡಿದ್ದು ನೋಡಿ ಫೋನ್​ ಬಿಟ್ಟು ಮೇಲೆ ಏಳಲ್ಲ. ಅದರಲ್ಲಿಯೂ ಇದೀಗ ಆನ್​ಲೈನ್​ ಕ್ಲಾಸ್​ ಬೇರೆ. ತಮ್ಮ ಮಕ್ಕಳಿಗೆ ಮೊಬೈಲ್​ ಕೊಡಿಸಲ್ಲ ಎಂದು ಪಣ ತೊಟ್ಟ ಉದ್ಯೋಗಸ್ಥ ಪಾಲಕರೂ ಅನಿವಾರ್ಯವಾಗಿ ಮನೆಯಲ್ಲಿ ಇರುವ ಮಕ್ಕಳಿಗೆ ಹೊಸ ಫೋನ್​ ಕೊಡಿಸಬೇಕಾಗಿದೆ!
ವಿಷಯ ಏನೇ ಇರಲಿ. ಆದರೆ ಫೋನ್​ನಲ್ಲಿಯೇ ಸದಾ ಆ್ಯಕ್ಟೀವ್​ ಆಗಿರುವ, ಫೋನು ಬಿಟ್ಟು ಮೇಲೇಳದ ಮಕ್ಕಳನ್ನು ಬೈಯುವುದು, ಹೊಡೆಯುವುದು ಮಾಡುವುದು ಇಂದಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. ಹೀಗೆ ಮಕ್ಕಳನ್ನು ಹೊಡೆದು-ಬಡೆದು ಅಥವಾ ಬೈಯುತ್ತಿರುವ ಕಾರಣಕ್ಕೆ ಅದೆಷ್ಟೋ ಸೂಕ್ಷ್ಮ ಮನಸ್ಸಿನ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಗಳು ವರದಿಯಾಗಿವೆ. ಇನ್ನು ಕೆಲವು ಮಕ್ಕಳು ಮನೆಬಿಟ್ಟು ಹೋಗಿದ್ದಾರೆ. ಕೆಲವು ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯರ ವರದಿಗಳನ್ನು ನೋಡಿದಾಗ ಇದೇ ಫೋನ್​ ಗಲಾಟೆಯಲ್ಲಿಯೇ ಅವರು ಮನೆಬಿಟ್ಟು ಹೋಗಿರುವುದು ತಿಳಿದುಬಂದಿದೆ.
ಇದನ್ನೂ ಓದಿ:ಅಮೆರಿಕದ 231 ವರ್ಷಗಳಲ್ಲೇ ಹೊಸ ದಾಖಲೆ ಬರೆದ ಜಿಲ್ ಬೈಡೆನ್​
ಅಂಥದ್ದೇ ಆಘಾತಕಾರಿ ವಿಷಯವೊಂದು ಇದೀಗ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಒಂದೇ ದಿನ ನಾಲ್ವರು ಬಾಲಕಿಯರು ಮನೆಬಿಟ್ಟು ಓಡಿ ಹೋಗಿದ್ದಾರೆ. ಇದಕ್ಕೆ ಕಾರಣ ಕೂಡ ಸ್ಮಾರ್ಟ್​ಫೋನ್​! ಈ ಎಲ್ಲಾ ಬಾಲಕಿಯರದ್ದೂ ಒಂದೇ ಕಥೆ. ಫೋನ್​ನಲ್ಲಿಯೇ ಸದಾ ಮುಳುಗುತ್ತಿದ್ದ ಅವರನ್ನು ಅವರವರ ಪಾಲಕರು ಗದರಿಸಿ, ಹೊಡೆದು ಮಾಡಿರುವ ಕಾರಣ, ಮನೆಬಿಟ್ಟು ಹೋಗಿರುವುದು ತಿಳಿದುಬಂದಿದೆ.
ಈ ನಾಲ್ವರು ಬಾಲಕಿಯರ ಪಾಲಕರು ಬೈಯುತ್ತಿದ್ದುದರಿಂದ ಕೋಪಿಸಿಕೊಂಡು ಮನೆಬಿಟ್ಟು ಹೋಗುವ ಪ್ಲ್ಯಾನ್​ ಹಾಕಿ ಹೋಗಿದ್ದಾರೆ.ಅತ್ತ ಮಕ್ಕಳು ಕಾಣಿಸಿದೇ ಕಂಗಾಲಾಗಿ ಹೋದ ಪಾಲಕರು ದೂರು ದಾಖಲಿಸಿದ್ದಾರೆ. ನಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ ಕೌಶಲ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಎಲ್ಲಾ ಠಾಣೆಗಳ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸಿದರು.
ಸಿಸಿಟಿವಿ ಸೇರಿದಂತೆ ಎಲ್ಲ ಉನ್ನತ-ತಂತ್ರಜ್ಞಾನವನ್ನು ಬಳಸಿದಾಗ ನೆರೆಯ ಗುಂಟೂರು ಜಿಲ್ಲೆಯಲ್ಲಿ 81 ಕಿ.ಮೀ ದೂರದಲ್ಲಿರುವ ವಿನುಕೊಂಡದಲ್ಲಿ ಬಾಲಕಿಯರನ್ನು ಅಲ್ಲಿಯ ಪೊಲೀಸರು ಪತ್ತೆಹಚ್ಚಿದ್ದಾರೆ. ನಂತರ ಬಾಲಕಿಯರನ್ನು ವಿಚಾರಿಸಿದಾಗ ಅವರು ವಿಷಯ ತಿಳಿಸಿದ್ದಾರೆ.
ಬಾಲಕಿಯರು ನಾಪತ್ತೆಗೊಂಡು ನಾಲ್ಕೇ ಗಂಟೆಗಳಲ್ಲಿ ಅವರ ಪಾಲಕರಿಗೆ ಮಕ್ಕಳನ್ನು ಒಪ್ಪಿಸಲಾಗಿದೆ. ಸದ್ಯ ಈ ಪ್ರಕರಣ ಸುಖಾಂತ್ಯವಾಗಿದೆ. ಆದರೆ ಎಲ್ಲ ಸಲವೂ ಹೀಗಾಗಲು ಸಾಧ್ಯವಿಲ್ಲ ಅಲ್ಲವೆ?
ಕೊನೇ ಕ್ಷಣದಲ್ಲಿ ಮೋದಿಗೆ ತಪ್ಪಿಹೋಯ್ತು ಡಿಸಿಎಂ ಪಟ್ಟ!

ಕಾಂಗ್ರೆಸ್ ಮುಖಂಡ ಅಹಮ್ಮದ್​ ಪಟೇಲ್ ಸ್ಥಿತಿ ಗಂಭೀರ: ಐಸಿಯುಗೆ ಶಿಫ್ಟ್​

ಪ್ರೀತಿಯ ನಾಯಿಗೆ 19 ಅಡಿ ಎತ್ತರದ ಚಿನ್ನದ ಪ್ರತಿಮೆ ಗಿಫ್ಟ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × three =
Remember me
