ಮುಂಬೈ:ಮಹಿಳೆಯರ ಸ್ಫೂರ್ತಿಯ ಚಿಲುಮೆ, ‘ಲೇಡಿ ಸಚಿನ್​ ತೆಂಡೂಲ್ಕರ್’​ ಎಂದೇ ಖ್ಯಾತಿ ಪಡೆದ ಕ್ರಿಕೆಟ್​ ತಾರೆ ಮಿಥಾಲಿ ರಾಜ್​ ತಮ್ಮ 23 ವರ್ಷಗಳ ಅಮೋಘ ಕ್ರಿಕೆಟ್ ಕೆರಿಯರ್‌ಗೆ ಗುಡ್​ಬೈ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಭಾರಿ ಶಾಕ್​ ಕೊಟ್ಟಿದ್ದಾರೆ. ಇವರು 12 ಟೆಸ್ಟ್, 232 ಏಕದಿನದ ಅಂತಾರಾಷ್ಟ್ರೀಯ ಪಂದ್ಯ ಮತ್ತು 89 ಟಿ-20 ಆಟಗಳನ್ನು ಆಡಿದ್ದಾರೆ.
ಭಾರತ ಮಹಿಳಾ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕಿಯಾಗಿದ್ದ ಮಿಥಾಲಿ ರಾಜ್, 2002ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ಮಹಿಳಾ ತಂಡದ ನಾಯಕಿಯಾಗಿ ಎರಡು ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು. ಇದೀಗ ನಿಮ್ಮ ಆಶೀರ್ವಾದದೊಂದಿಗೆ ಜೀವನದ ಎರಡನೇ ಇನ್ನಿಂಗ್ಸ್​ ಆರಂಭಿಸಲಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ.
ಸ್ವಂತ ದೇಶವನ್ನು ಪ್ರತಿನಿಧಿಸುವುದು ಅತ್ಯುನ್ನತ ಗೌರವದ ಪ್ರಯಾಣವು ಉನ್ನತ ಮಟ್ಟದಿಂದ ತುಂಬಿತ್ತು. ಈ ಪ್ರಯಾಣದ ಪ್ರತಿಯೊಂದು ಘಟನೆಯೂ ನನಗೆ ವಿಶಿಷ್ಟವಾದದ್ದನ್ನು ಕಲಿಸಿತು. ಕಳೆದ 23 ವರ್ಷಗಳು ಅತ್ಯಂತ ಹೆಚ್ಚು ಉತ್ಕೃಷ್ಟವಾಗಿತ್ತು. ನನ್ನ ಜೀವನದ ಪೂರೈಸುವ, ಸವಾಲಿನ ಮತ್ತು ಆನಂದದಾಯಕ ವರ್ಷಗಳಾಗಿದ್ದವು’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರತಿ ಬಾರಿ ನಾನು ಮೈದಾನಕ್ಕೆ ಕಾಲಿಟ್ಟಾಗ, ಭಾರತವನ್ನು ಗೆಲ್ಲಿಸಲು ಸಹಾಯ ಮಾಡುವ ಉದ್ದೇಶದಿಂದ ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ. ತ್ರಿವರ್ಣ ಧ್ವಜವನ್ನು ಪ್ರತಿನಿಧಿಸಲು ನನಗೆ ನೀಡಿದ ಅವಕಾಶವನ್ನು ನಾನು ಯಾವಾಗಲೂ ಗೌರವಿಸುತ್ತೇನೆ ಎಂದಿದ್ದಾರೆ.
ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 2005ರಲ್ಲಿ ಮೊದಲ ಬಾರಿಗೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಸಾಧ್ಯವಾಗಿರಲಿಲ್ಲ. 2017ರಲ್ಲಿ ಕೂಡ ಮಹಿಳಾ ಕ್ರಿಕೆಟ್ ತಂಡವು ಎರಡನೇ ಬಾರಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಇಂಗ್ಲೆಂಡ್ ಎದುರು ಸೋಲು ಕಂಡಿತ್ತು. ಇನ್ನು ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವು ನಾಕೌಟ್ ಹಂತಕ್ಕೇರಲು ವಿಫಲವಾಗಿತ್ತು. ಇದರ ಬೆನ್ನಲ್ಲೇ ಮಿಥಾಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೂಡ ತೆರೆಮರೆಗೆ ತೆರೆದಿತ್ತು.
ನಾಳೆ ಹಸೆಮಣೆಯಲ್ಲಿ ನಟಿ ನಯನತಾರಾ, ವಿಘ್ನೇಶ್ ಜೋಡಿ​: ಕೊನೇ ಕ್ಷಣ ತಿರುಪತಿಯಲ್ಲಿ ಮದ್ವೆ ಕ್ಯಾನ್ಸಲ್​!
ಗಂಡ-ಹೆಂಡ್ತಿ ಮಧ್ಯೆ ಜಗಳ ತಂದಿಟ್ಟ ಮ್ಯಾಗಿ! ಬಳ್ಳಾರಿ ಯುವಕನ ಕಷ್ಟ ನೋಡಲಾಗದೇ ಡಿವೋರ್ಸ್​ ಕೊಟ್ಟ ಕೋರ್ಟ್​
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 2 =
Remember me
