ಮಿಜೋರಾಂ:ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರ ಮಗಳು ವೈದ್ಯರ ಮೇಲೆ ಹಲ್ಲೆ ಮಾಡಿದ್ದು, ವಿಡಿಯೋ ಭಾರಿ ವೈರಲ್​ ಆಗಿದೆ. ಇದಕ್ಕಾಗಿ ಖುದ್ದು ಮುಖ್ಯಮಂತ್ರಿಗಳೇ ಕ್ಷಮೆ ಕೋರುವ ಘಟನೆ ನಡೆದಿದೆ.
ಮಿಲಾರಿ ಚಾಂಗ್ಟೆ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಮಗಳು ಮಾಡಿದ ತಪ್ಪಿಗೆ ಭಾರಿ ಅವಮಾನ ಅನುಭವಿಸಿದ ಮುಖ್ಯಮಂತ್ರಿಗಳು, ಈ ಕೃತ್ಯವನ್ನು ತಾನು ಯಾವುದೇ ರೀತಿಯಲ್ಲಿ ಸಮರ್ಥಿಸುವುದಿಲ್ಲ, ಇಡೀ ವೈದ್ಯಕೀಯ ವೃಂದ ಹಾಗೂ ರಾಜ್ಯದ ಜನತೆಯ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಆಗಸ್ಟ್ 17 ರಂದು ಸಿಎಂ ಪುತ್ರಿ ಮಿಲಾರಿ ಚಾಂಗ್ಟೆ ಅವರು ಮಿಜೋರಾಂನ ರಾಜಧಾನಿಯಲ್ಲಿ ಅತ್ಯಂತ ಜನಪ್ರಿಯ ಚರ್ಮದ ಚಿಕಿತ್ಸಾಲಯ ಒಂದಕ್ಕೆ ಹೋಗಿದ್ದರು. ಚರ್ಮರೋಗ ವೈದ್ಯರು ಇವರು. ಈ ವೈದ್ಯರನ್ನು ನೋಡುವ ಪೂರ್ವದಲ್ಲಿ ಅಪಾಯಿಂಟ್​ಮೆಂಟ್​ ಕಡ್ಡಾಯವಾಗಿತ್ತು. ಆದರೆ ಮುಖ್ಯಮಂತ್ರಿಯ ಮಗಳಾದ ತನಗೆ ಇವೆಲ್ಲಾ ಬೇಡ ಎನ್ನುವ ಕಾರಣಕ್ಕೋ ಏನೋ, ನೇರವಾಗಿ ಮಿಲಾರಿ ಆಸ್ಪತ್ರೆಗೆ ಹೋಗಿದ್ದರು.
ಆದರೆ ವೈದ್ಯರಾಗಿರುವ ಡಾ. ಜೋನುನಾಸಂಗ ಅವರು ಅಪಾಯಿಂಟ್​ಮೆಂಟ್​ ಇಲ್ಲದೇ ತಾವು ರೋಗಿಯನ್ನು ನೋಡುವುದಿಲ್ಲ ಎಂದಿದ್ದಾರೆ. ಇದರಿಂದ ಮಿಲಾರಿ ಅವರ ಪಿತ್ತ ನೆತ್ತಿಗೇರಿದೆ. ಕೂಡಲೇ ಒಳಗೆ ನುಗ್ಗಿ ವೈದ್ಯರ ಕೆನ್ನೆಗೆ ಹೊಡೆದಿದ್ದಾರೆ. ಇದು ಅಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.
ಇಷ್ಟಾಗುತ್ತಿದ್ದಂತೆಯೇ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು 800 ಕ್ಕೂ ಹೆಚ್ಚು ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಿಜೋರಾಂನ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಶನಿವಾರ ತಮ್ಮ ಕೆಲಸದ ಸ್ಥಳಗಳಿಗೆ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೂಡಲೇ ಮುಖ್ಯಮಂತ್ರಿಗಳು ಕ್ಷಮೆ ಕೋರಿದರು. ತಮ್ಮ ಪುತ್ರಿಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳದ ಭಾರತೀಯ ವೈದ್ಯಕೀಯ ಸಂಘಕ್ಕೂ ಅವರು ಧನ್ಯವಾದ ಸಲ್ಲಿಸಿದರು.(ಏಜೆನ್ಸೀಸ್​)
ಇಲ್ಲಿದೆ ನೋಡಿ ವಿಡಿಯೋ
Mizoram CM’s daughter Milari Chhangte caught on camera assaulting a doctor reportedly because he refused to see her without an appointment. Her father, the CM, has ‘apologised’. But why hasn’t she been arrested? Docs protesting in Aizawlpic.twitter.com/O70f0Lb8VP— Shiv Aroor (@ShivAroor)August 21, 2022
Mizoram CM’s daughter Milari Chhangte caught on camera assaulting a doctor reportedly because he refused to see her without an appointment. Her father, the CM, has ‘apologised’. But why hasn’t she been arrested? Docs protesting in Aizawlpic.twitter.com/O70f0Lb8VP
ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಮ್ಮೆ ಆಘಾತ: ಪಿಎಸ್​ಐ ಬೆನ್ನಲ್ಲೇ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಬಯಲು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six + twenty =
Remember me
