ನವದೆಹಲಿ:ವಿಜ್ಞಾನಕ್ಕೂ ನಿಲುಕದ ಹಲವಾರು ಸಂಗತಿಗಳಿವೆ, ತಲೆತಲಾಂತರಗಳಿಂದ ಬಂದಿರುವ ನಮ್ಮ ಹಲವಾರು ಸಂಪ್ರದಾಯಗಳನ್ನು ಸಂಶೋಧಕರು, ವಿಜ್ಞಾನಿಗಳು ಒಪ್ಪದೇ ಇರುವುದು ಇಂದು, ನಿನ್ನೆಯ ಮಾತಲ್ಲ. ಯಾವುದು ಸರಿಯಲ್ಲ, ಇದರಿಂದ ಏನಾಗುತ್ತದೆ ಎಂದೆಲ್ಲಾ ಮೂದಲಿಸಿದವರೇ ಇದೀಗ ಅದೇ ಸರಿ, ಅದೇ ವೈಜ್ಞಾನಿಕವಾದದ್ದು ಎಂದು ಒಪ್ಪಿಕೊಂಡಿರುವುದೂ ಗುಟ್ಟಾಗಿ ಉಳಿದಿಲ್ಲ.
ಅದೇನೆ ಇರಲಿ… ಇದೀಗ ಅಂಥದ್ದೇ ಒಂದು ವಿಷಯ ಸೆಗಣಿಯಿಂದ ತಯಾರಿಸಲಾಗಿರುವ ಮೊಬೈಲ್​ ಚಿಪ್​ನದ್ದು. ಸೆಗಣಿಯಿಂದ ತಯಾರಿಸಲಾಗಿರುವ ಚಿಪ್‌ನಿಂದ ಮೊಬೈಲ್‌ನಿಂದ ಹೊರಹೊಮ್ಮುವ ವಿಕಿರಣ ಕಡಿಮೆ ಮಾಡಬಹುದು ಎಂದು ರಾಷ್ಟ್ರೀಯ ಕಾಮಧೇನು ಆಯೋಗ ಹೇಳಿತ್ತು. ಇಂಥದ್ದೊಂದು ಚಿಪ್​ ಕಳೆದ ವಾರ ಬಿಡುಗಡೆ ಮಾಡುವ ಮೂಲಕ ಮಾನವನ ದೇಹಕ್ಕೆ ಹಾನಿಯಾಗುವ ವಿಕಿರಣಗಳನ್ನು ತಡೆಗಟ್ಟಬಹುದು ಎಂದು ಹೇಳಿತ್ತು.
ಸೆಗಣಿ ವಿಕಿರಣ ವಿರೋಧಿಯಾಗಿದ್ದು, ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೊಂದು ರೇಡಿಯೇಷನ್‌ ಚಿಪ್‌ ಆಗಿದ್ದು, ಮೊಬೈಲ್‌ ಫೋನ್‌ಗಳ ರೇಡಿಯೇಷನ್‌ ತಡೆಯಲು ಇವನ್ನು ಮೊಬೈಲ್‌ನಲ್ಲಿ ಬಳಸಬಹುದು. ಖಾಯಿಲೆಗಳಿಂದಲೂ ಇದು ರಕ್ಷಿಸಲಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ:₹680 ಕೋಟಿ ಅಕ್ರಮ- ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜ್ ಅಮಾನತು
ಈ ವಾದವನ್ನು ಇದೀಗ ಕೆಲವು ವಿಜ್ಞಾನಿಗಳು ಒಪ್ಪುತ್ತಿಲ್ಲ. ಅವರಿಗೆ ಸಾಕ್ಷಿ ಬೇಕಿದೆ, ಇದರ ಬಗ್ಗೆ ಸಂಶೋಧನಾ ವರದಿ ಬೇಕಂತೆ! ಸೆಗಣಿಯಿಂದ ಮಾಡಿರುವ ಚಿಪ್​ ಮೊಬೈಲ್ ರೇಡಿಯೇಷನ್‌ನ್ನು ಕಡಿಮೆ ಮಾಡುತ್ತದೆ ಎಂಬ ನಿಮ್ಮ ಹೇಳಿಕೆಯನ್ನು ಸಾಬೀತುಪಡಿಸಿ ಎಂದು 600ಕ್ಕೂ ಹೆಚ್ಚು ವಿಜ್ಞಾನಿಗಳು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ಕಥಿರಿಯಾ ಅವರಿಗೆ ಪತ್ರ ಬರೆದಿದ್ದಾರೆ.
ಹೀಗೆ ಯಾವುದೇ ಆಧಾರವಿಲ್ಲದೆಯೇ ನೀವು ಪತ್ರಿಕಾಗೋಷ್ಠಿ ಮಾಡಿದ್ದೀರಿ. ಆಧಾರರಹಿತವಾಗಿ ಸೆಗಣಿಯ ಬಗ್ಗೆ ಹೇಳಿರುವುದು ಅಂಧಶ್ರದ್ಧೆಯನ್ನು ಪ್ರೋತ್ಸಾಹಿಸಿದಂತೆ. ಇದು ಸಂವಿಧಾನ ವಿರೋಧಿಯಾಗಿದೆ ಎಂದು ಪತ್ರದಲ್ಲಿ ವಿಜ್ಞಾನಿಗಳು ಹೇಳಿದ್ದಾರೆ.
ಇದನ್ನು ಎಲ್ಲಿ ಪ್ರಯೋಗ ಮಾಡಲಾಗಿದೆ, ಯಾವ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಅಧ್ಯಯನದ ಪ್ರಮುಖ ಸಂಶೋಧಕರು ಯಾರು ಎಂದೆಲ್ಲಾ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಇದೀಗ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆಯೋ ನೋಡಬೇಕಿದೆ.
ಎಲ್ಲರೂ ‘ಐಟಂ’ಗಳೇ ಎಂದ ಕಾಂಗ್ರೆಸ್​- ಮಗಳನ್ನು ಹೀಗೆ ಕರೆದ್ರೆ ಸೋನಿಯಾ ಸುಮ್ಮನಿರ್ತಿದ್ರಾ ಎಂದ ಸಚಿವೆ!

ಆರ್​ಆರ್​ನಗರ: ಮತ್ತೆ ಶುರುವಾಯ್ತಾ ಅಕ್ರಮ? ಮತದಾರರಿಗೆ ಫೋನ್​ಕಾಲ್​!

ಸಚಿವೆಯನ್ನು ‘ಐಟಂ’ ಎಂದು ಕರೆದು ವಿವಾದ ಎಳೆದುಕೊಂಡ ಮಾಜಿ ಸಿಎಂ

ಲಡಾಖ್​ ಗಡಿಯೊಳಗೆ ನುಸುಳಿದ ಚೀನಿ ಸೈನಿಕ- ಬೆಚ್ಚಗಿನ ಆಹಾರ, ಬಟ್ಟೆ ನೀಡಿದ ಯೋಧರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
