ಮಧುರೈ:ಈಗ ಎಲ್ಲೆಲ್ಲೂ ಕರೊನಾ ಹಾವಳಿ ಇರುವ ಕಾರಣ, ಮಕ್ಕಳನ್ನು ಹೊರಗಡೆ ಆಡಲು ಪಾಲಕರು ಬಿಡುತ್ತಿಲ್ಲ. ಆದರೆ ಮನೆಯೊಳಕ್ಕೇ ಮಕ್ಕಳ ಕಾಟವನ್ನೂ ತಾಳಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ, ಮಕ್ಕಳಿಗೆ ಮೊಬೈಲ್​ ಫೋನ್​ ಕೊಟ್ಟು ಮನೆಯೊಳಕ್ಕೇ ಆಡಿಕೋ ಎನ್ನುತ್ತಿದ್ದಾರೆ ಬಹುತೇಕ ಪಾಲಕರು.
ಇದೇ ರೀತಿ, ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯೊಂದರಲ್ಲಿನ ಅಮ್ಮನೂ ತನ್ನ ಮಗನಿಗೆ ಹಾಗೇ ಹೇಳಿದ್ದಾಳೆ. ಆದರೆ ಆಮೇಲೆ ಮಗ ಮಾಡಿದ್ದನ್ನು ನೋಡಿ ಕಕ್ಕಾಬಿಕ್ಕಿಯಾಗಿ, ತಲೆತಲೆ ಚಚ್ಚಿಕೊಂಡಿದ್ದಾಳೆ ಈ ಅಮ್ಮ.
ಅಷ್ಟಕ್ಕೂ ಆಗಿದ್ದೇನೆಂದರೆ, 12 ವರ್ಷದ ಮೇಲಕಿದಾರಂ ಎಂಬ ಬಾಲಕನ ತಾಯಿ ಕರೊನಾ ಕಾರಣದಿಂದ ಮಗನನ್ನು ಹೊರಗಡೆ ಆಡಲು ಕಳುಹಿಸಲು ಹೆದರಿದರು. ಅದಕ್ಕಾಗಿಯೇ ತಮ್ಮ ಮೊಬೈಲ್​ನಲ್ಲಿ ಗೇಮಿಂಗ್​ ಅಪ್ಲಿಕೇಷನ್​ ಹಾಕಿಸಿಕೊಟ್ಟರು. ಅದಕ್ಕೆ ತಂದೆ ಸೆಂಥಿಲ್​ ಕುಮಾರ್​ ಕೂಡ ಓಕೆ ಅಂದರು. ಮಗನೋ ಇಡೀ ಲೋಕವನ್ನೇ ಮರೆತು ಗೇಮಿಂಗ್​ನಲ್ಲಿ ಹಗಲು ರಾತ್ರಿ ಮುಳುಗುತ್ತಿದ್ದ.
ಏನೋ ಒಂದು ಆಡುತ್ತಿದ್ದಾನೆ, ತಮಗೆ ಡಿಸ್ಟರ್ಬ್​ ಮಾಡುತ್ತಿಲ್ಲವಲ್ಲ ಎಂದು ಪಾಲಕರು ಅಂದುಕೊಂಡು ಸುಮ್ಮನಾಗಿದ್ದರು.
ಇದನ್ನೂ ಓದಿ:ಕರೊನಾದಿಂದ ಮೃತಪಟ್ಟ 155 ಮಂದಿ ಆರೋಗ್ಯ ಕಾರ್ಯಕರ್ತರಿಗೆ 50 ಸಾವಿರ ವಿಮಾ ಹಣ
ಆದರೆ ಅದೊಂದು ದಿನ ಹಣದ ಅವಶ್ಯಕತೆ ಇದ್ದಾಗ, ಬಾಲಕನ ತಾಯಿ ಎಟಿಎಂಗೆ ಹೋಗಿದ್ದಾಗ ಬೆವೆತು ಹೋದರು. ಏಕೆಂದರೆ ಅವರ ಖಾತೆಯಲ್ಲಿ ಮೊದಲು 97 ಸಾವಿರ ರೂಪಾಯಿಗಳು ಇದ್ದವು. ಆದರೆ ಈಗ ನೋಡಿದರೆ ಕೇವಲ ಏಳುಸಾವಿರ ರೂಪಾಯಿಗಳು! 90 ಸಾವಿರ ಹೇಗೆ ನಾಪತ್ತೆಯಾಯಿತು ಎಂದು ಕಕ್ಕಾಬಿಕ್ಕಿಯಾದರು.ನಂತರ ವಿಚಾರ ಮಾಡಿದಾಗ ಹಣವನ್ನು ನೀಡುವ ಗೇಮಿಂಗ್​ ಅಪ್ಲಿಕೇಷನ್​ ಡೌನ್​ಲೋಡ್​ ಮಾಡಿಕೊಂಡಿದ್ದ 12 ವರ್ಷದ ಬಾಲಕ, ತನ್ನ ಅಮ್ಮನ ಖಾತೆಯಿಂದ ಆನ್​ಲೈನ್​ ಮೂಲಕ 90 ಸಾವಿರ ಗುಳುಂ ಮಾಡಿದ್ದ! ಮೊಬೈಲ್​ನಲ್ಲಿಯೇ ಹೇಗೋ ಓಟಿಪಿ ಬರುತ್ತಿತ್ತು. ಅದನ್ನೇ ಬಳಸಿಕೊಂಡು ಹಣವನ್ನು ಖರ್ಚು ಮಾಡಿದ್ದ.
ಇ-ಸೇವಾ ಕೇಂದ್ರವನ್ನು ನಡೆಸುತ್ತಿರುವ ಸೆಂಥಿಲ್ ಕುಮಾರ್, ತಮಗೆ ಬೇಕಾಗಿರುವ ಸಾಮಗ್ರಿಗಳನ್ನು ಆನ್‌ಲೈನ್‌ನಲ್ಲಿ ತರಿಸಿಕೊಳ್ಳುತ್ತಿದ್ದರು. ಆದ್ದರಿಂದ ಆನ್​ಲೈನ್​ನಲ್ಲಿ ಹೇಗೆ ಸಾಮಗ್ರಿ ತರಿಸಿಕೊಳ್ಳುವುದು ಎಂದು ಮಗನಿಗೆ ಹೇಳಿದ್ದರು. ಇದರಿಂದಾಗಿ ಆತನಿಗೆ ಚಿಕ್ಕವಯಸ್ಸಿನಲ್ಲಿಯೇ ಆನ್​ಲೈನ್​ ವ್ಯವಹಾರಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅದನ್ನೇ ಬಳಸಿಕೊಂಡು ಅಮ್ಮನ ಖಾತೆಯಿಂದ 90 ಸಾವಿರ ರೂಪಾಯಿ ಖರ್ಚು ಮಾಡಿದ್ದ. ನಂತರ ಓಟಿಪಿ ಮತ್ತು ಹಣ ವಿತ್​ಡ್ರಾ ಕುರಿತಂತೆ ಮೊಬೈಲ್​ಗೆ ಬರುತ್ತಿದ್ದ ಮೆಸೇಜ್​ಗಳನ್ನು ಡಿಲೀಟ್​ ಮಾಡಿ ಅಮ್ಮನಿಗೆ ಫೋನ್​ ನೀಡುತ್ತಿದ್ದ!
ಮಗನಿಗೆ ತಿಳಿವಳಿಕೆ ಹೇಳಲಾಗಿದೆ. ಅವನು ಈ ರೀತಿ ತಪ್ಪು ಮುಂದೆ ಮಾಡುವುದಿಲ್ಲ ಎಂದು ಹೇಳಿದ್ದಾನೆ. ನಾವೇ ಮಾಡಿದ ತಪ್ಪು ಇದು. ಆನ್​ಲೈನ್​ ಚಟದಿಂದ ಆತನನ್ನು ದೂರ ಮಾಡುವುದು ಬಹಳ ಕಷ್ಟವಾಯಿತು. ಆಮೇಲೆ ತಪ್ಪು ಮಾಡಿರುವುದಕ್ಕೆ ಶಿಕ್ಷೆಯ ರೂಪದಲ್ಲಿ 1 ರಿಂದ 90,000 ವರೆಗಿನ ಅಂಕಿಗಳನ್ನು ಬರೆಯುವಂತೆ ಮಗನಿಗೆ ಹೇಳಿದೆವು. ನಂತರ ಆತ ಬರೆಯಲು ಶುರು ಮಾಡಿದ. ಎಷ್ಟು ಬರೆದರೂ 3.500 ಸಂಖ್ಯೆಗಿಂತ ಆತನಿಗೆ ಬರೆಯುವುದು ಕಷ್ಟವಾಯಿತು. ಇದರಿಂದ ಮೊಬೈಲ್​ ಆಟವೇ ಬಿಡುವುದು ಲೇಸೆಂದು ಬಗೆದು ಅದನ್ನೀಗ ಬಿಟ್ಟಿದ್ದಾನೆ. ತನ್ನ ತಪ್ಪಿನ ಅರಿವು ಅವನಿಗೆ ಆಗಿದೆ ಎಂದು ಸೆಂಥಿಲ್​ಕುಮಾರ್​ ಹೇಳುತ್ತಾರೆ.
ಹೊಸ ಕೃಷಿ ಕಾನೂನು: ವಾಸ್ತವವೇನು? ಗಾಳಿಮಾತುಗಳೇನು? ಪ್ರಧಾನಿ ಏನು ಹೇಳಿದ್ದಾರೆ ನೋಡಿ…

ತೋಟ, ಹೊಳೆಗಳಲ್ಲಿ ಉಗ್ರರಿಂದ ಭೂಗತ ಬಂಕರ್​ನಿರ್ಮಾಣ! ಸ್ಫೋಟಕ ಮಾಹಿತಿ ಬಹಿರಂಗ

70 ವರ್ಷಗಳ ನಂತರ ವಿದ್ಯುತ್​ ಕಂಡ ಗಡಿ ಭಾಗ: ಸಂತಸದಲ್ಲಿ ತೇಲಾಡಿದ ಜನರು

d
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + 13 =
Remember me
