ಫಾಲ್ಘರ್‌ (ಮಹಾರಾಷ್ಟ್ರ):ಮೊಬೈಲ್‌ ನೆಟ್‌ವರ್ಕ್‌ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಳೆ ಬರುತ್ತಿರುವಾಗಲೇ ಮರವೇರಿದ್ದ ಬಾಲಕನೊಬ್ಬ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್​​ ಜಿಲ್ಲೆಯಲ್ಲಿ ನಡೆದಿದೆ. ಈತನ ಜತೆಗೆ ಮರವೇರಿದ್ದ ಮೂವರು ಬಾಲಕನ್ನು ಕೆಳಕ್ಕೆ ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಜಾನುವಾರು ಮೇಯಿಸಲು ಹೋಗಿದ್ದ 12-15 ವರ್ವ ವಯಸ್ಸಿನ ಬಾಲಕರು ಮೊಬೈಲ್‌ ಫೋನ್‌ನಲ್ಲಿ ಬಳಸಿದ್ದರು. ಆದರೆ ಅವರಿಗೆ ನೆಟ್‌ವರ್ಕ್‌ ಸಿಗಲಿಲ್ಲ. ಆಗಲೇ ಜೋರು ಮಳೆ ಶುರುವಾಗಿತ್ತು. ಗುಡುಗು ಮಿಂಚು ಕೂಡ ಬರುತ್ತಿತ್ತು. ಇದನ್ನು ಲೆಕ್ಕಿಸದ ಬಾಲಕರು ಮರವೇರಿದ್ದಾರೆ.
ಇದೇ ಸಮಯದಲ್ಲಿ ಸಿಡಿಲು ಬಡಿದಿದೆ. ಅದು 15 ವರ್ಷದ ಬಾಲಕನಿಗೆ ನೇರವಾಗಿ ಬಡಿದಿದ್ದು ಅವನು ಅಲ್ಲಿಯೇ ಮೃತಪಟ್ಟರೆ, ಉಳಿದ ಮೂವರಿಗೆ ಭಾರಿ ಗಾಯಗಳಾಗಿವೆ. ದಹನು ತಾಲೂಕಿನ ಮಂಕರ್​ಪಾಡ ಎಂಬಲ್ಲಿ ಈ ಘಟನೆ ನಡೆದಿದ್ದು, ಬಾಲಕರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಹಶೀಲ್ದಾರ್​ ರಾಹುಲ್​ ಸಾರಂಗ್​ ಮಾಹಿತಿ ನೀಡಿದ್ದಾರೆ.
ಮೃತ ಬಾಲಕನನ್ನ 15 ವರ್ಷದ ರವೀಂದ್ರ ಕೋರ್ದಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಇನ್ನುಳಿದ ಬಾಲಕರು ಸಹ 14 ರಿಂದ 16 ವರ್ಷ ಪ್ರಾಯದವರಾಗಿದ್ದಾರೆ.
ಓಟಿಪಿಯೂ ಬರದೇ ಶಿಕ್ಷಕಿ ಖಾತೆಯಿಂದ 3.22 ಲಕ್ಷ ರೂ. ಮಾಯ! ಸಿಕ್ಕಿಬಿದ್ದ ಕಳ್ಳನ ಕಂಡು ಕಣ್‌ಕಣ್‌ ಬಿಟ್ಟ ಪೊಲೀಸರು!

ಹಿಂಸೆ ಕೊಡುವ ಗಂಡನನ್ನು ಮನೆಯಿಂದ ಹೊರಹಾಕಬಹುದೆ? ಕಾನೂನಲ್ಲಿ ಏನಿದೆ ಮೇಡಂ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
