ನವದೆಹಲಿ: ಮೊಬೈಲ್‌ ಪಾಸ್‌ವರ್ಡ್‌ ನೀಡಲಿಲ್ಲ ಎಂಬ ಕಾರಣಕ್ಕೆ ಬಿಬಿಎ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಗೆಳೆಯನನ್ನು ಕೊಲೆ ಮಾಡಿ ಶವವನ್ನು ಅಜ್ಞಾತ ಸ್ಥಳದಲ್ಲಿ ಎಸೆದುಬಂದ ಭಯಾನಕ ಘಟನೆ ವಾಯವ್ಯ ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ನಡೆದಿದೆ.
ಮಯಾಂಕ್‌ ಸಿಂಗ್‌ ಎಂಬ ವಿದ್ಯಾರ್ಥಿ 12ನೇ ತರಗತಿಯ ವಿದ್ಯಾರ್ಥಿಯಾಗಿರುವ ತನ್ನ ಸ್ನೇಹಿತರನ ಕೊಲೆ ಮಾಡಿದ್ದಾನೆ. ಶವವನ್ನು ಎಸೆದ ಜಾಗದಲ್ಲಿ ಆತನ ಜತೆಗೆ ಟೆಡ್ಡಿಬೇರ್‌ ಹಾಗೂ ಡ್ರಗ್ಸ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಕೊಲೆಯಾದ ವಿದ್ಯಾರ್ಥಿ ಬಳಿ ಐಫೋನ್‌ ಇತ್ತು. ಅದನ್ನು ನೋಡಲು ಇಚ್ಛಿಸಿದ್ದ ಮಯಾಂಕ್‌ ಅದನ್ನು ತೆರೆಯಲು ಪಾಸ್‌ವರ್ಡ್‌ ಕೇಳಿದ್ದಾನೆ. ಆದರೆ ಅದನ್ನು ನೀಡಲು ವಿದ್ಯಾರ್ಥಿ ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಯಾಂಕ್‌ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಆರೋಪಿ ರೋಹಿಣಿಯ ಮಹಾರಾಜ ಅಗ್ರಸೇನ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್‌ನಲ್ಲಿ ಓದುತ್ತಿದ್ದು, ಕೊಲೆ ಮಾಡಿದ ನಂತರ ಉತ್ತರ ಪ್ರದೇಶದ ಪಿಲ್ಖುವದಲ್ಲಿ ತಲೆಮರೆಸಿಕೊಂಡಿದ್ದ. ಸಿಸಿಟಿವಿ ಆಧರಿಸಿ ಆತನನ್ನು ಪತ್ತೆ ಹಚ್ಚಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಯುವನ ಪಾಲಕರು ತಮ್ಮ ಮಗ ಮನೆಗೆ ಬರದದ್ದನ್ನು ಕಂಡು ದೂರು ದಾಖಲು ಮಾಡಿದ್ದರು. ನಂತರ ಪೊಲೀಸರು ಹುಡುಕಾಟ ನಡೆಸಿದಾಗ ನಿರ್ಜನ ಸ್ಥಳದಲ್ಲಿ ಶವ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿದ ನಂತರ ಆತ ಸತ್ಯಾಂಶ ಬಾಯಿ ಬಿಟ್ಟಿದ್ದಾನೆ.
ಹೆಣ್ಣುಮಕ್ಕಳನ್ನು ಕಂಡರೆ ಹಿಂದೆ ಮುಂದೆ ಯೋಚನೆ ಮಾಡಬೇಕಲ್ವೆ?

‘ಇಲ್ಲಿಂದ ಹುಲ್ಲು ಹಾಕಿದ್ರೆ ಅಲ್ಲಿಂದ ಹಾಲು ಬರತ್ತೆ’ ಎಂದ ಜಾಹೀರಾತು ಕಂಪೆನಿಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತರು!

ತಂಗಿಯ ಜತೆ ಮಂಚದಲ್ಲಿ ಚಕ್ಕಂದ- ನಾಲ್ಕನೇ ಗಂಡನಿಂದ ‘ಡ್ರಗ್ಸ್‌ ರಾಣಿ’ಯ ದುರಂತ ಅಂತ್ಯ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four + ten =
Remember me
