ನವದೆಹಲಿ:ಗ್ರಾಹಕ ಸೇವಾ ಸಿಬ್ಬಂದಿ ತಮ್ಮ ಕೆಟ್ಟುಹೋಗಿರುವ ಸ್ಮಾರ್ಟ್‌ಫೋನ್‌ ಅನ್ನು ಬದಲಿಸಿ ಕೊಟ್ಟಿಲ್ಲ ಹಾಗೂ ಕೆಟ್ಟದಾಗಿ ನಡೆಸಿಕೊಂಡರು ಎಂಬ ಕಾರಣದಿಂದ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
40 ವರ್ಷದ ಭೀಮ್ ಸಿಂಗ್ ಎಂಬುವವರು ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಭೀಮ್‌ಸಿಂಗ್‌ ಅವರು ತಮ್ಮ ಸೊಸೆಗಾಗಿ ಒಂದು ಪ್ರತಿಷ್ಠಿತ ಕಂಪೆನಿಯ ಸ್ಮಾರ್ಟ್‌ಫೋನ್‌ ಖರೀದಿ ಮಾಡಿದ್ದರು. ಆಕೆಯ ಆನ್‌ಲೈನ್‌ ಕ್ಲಾಸ್‌ಗಾಗಿ ಈ ಫೋನ್‌ ಖರೀದಿ ಮಾಡಲಾಗಿತ್ತು.
ದೆಹಲಿಯ ರೋಹಿಣಿಯ ಎಂ2ಕೆ ಮಾಲ್‌ನಲ್ಲಿರುವ ಸೇವಾ ಕೇಂದ್ರಕ್ಕೆ ಧಾವಿಸಿದ ಅವರು ಫೋನ್‌ ರಿಪೇರಿ ಮಾಡಿಕೊಡುವಂತೆ ಕೋರಿಕೊಂಡರು. ಆದರೆ ಸೇವಾ ಕೇಂದ್ರ ಫೋನ್‌ ರಿಪೇರಿ ಮಾಡಿಕೊಡಲು ಸಿದ್ಧವಿರಲಿಲ್ಲ. ಅದೂ ಅಲ್ಲದೆ ಅವರು ಭೀಮ್ ಸಿಂಗ್ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಇಲ್ಲೊಂದು ಜಿಂಕೆಮರಿ ಇದೆ… ಹುಡುಕಿದರೆ ನೀವೇ ಗ್ರೇಟ್‌…
ಅನೇಕ ಬಾರಿ ಸೇವಾ ಕೇಂದ್ರಕ್ಕೆ ಹೋದರೂ ಯಾವುದೇ ಪ್ರಯೋಜನ ಆಗಲಿಲ್ಲ. ಮಾತ್ರವಲ್ಲದೇ ಅಲ್ಲಿ ಕುಳಿತುಕೊಂಡಿದ್ದ ಸಿಬ್ಬಂದಿ ಕೆಟ್ಟದಾಗಿ ವರ್ತಿಸಿರುವುದಾಗಿ ಆರೋಪಿಸಲಾಗಿದೆ. ಫೋನ್ ರಿಪೇರಿಗಾಗಿ ಒಂದು ವಾರ ನಿರಂತರವಾಗಿ ಸೇವಾ ಕೇಂದ್ರ ಸುತ್ತಿದರೂ ಪ್ರಯೋಜನ ಆಗಿಲ್ಲ.
ನೀವು ಹೀಗೆಲ್ಲಾ ನಡೆದುಕೊಳ್ಳಬೇಡಿ ಎಂದು ಭೀಮ್‌ ಸಿಂಗ್‌ ಹೇಳಿದ್ದರಂತೆ. ನೀವು ಹೀಗೆಲ್ಲಾ ಸುತ್ತಿಸುವ ಸಾಯುವುದೇ ಒಳ್ಳೆಯದು ಎಂದರಂತೆ. ಆಗ ಆ ಸಿಬ್ಬಂದಿ ನಿಮಗೆ ಅದು ಒಳ್ಳೆಯದು ಎಂದೆನಿಸಿದರೆ ಹೋಗಿ ಬೆಂಕಿ ಹಚ್ಚಿಕೊಳ್ಳಿ ಎಂದಿದ್ದಾರೆ.
ತುಂಬಾ ನೊಂದುಕೊಂಡ ಭೀಮ್‌ ಸಿಂಗ್‌ ಅವರು ಕಾರಿನ ಬಳಿ ತೆರಳಿದ ಭೀಮ್ ಸಿಂಗ್ ಕಾರಿನಲ್ಲಿದ್ದ ಪೆಟ್ರೋಲ್ ತಂದು ಸೇವಾ ಕೇಂದ್ರದಲ್ಲಿಯೇ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತಕ್ಷಣವೇ ಸುತ್ತಮುತ್ತಲಿನ ಜನರು ಬೆಂಕಿಯನ್ನು ನಂದಿಸಿದರು. ಆದರೆ ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಹೋರಾಟ ನಡೆಸಿದ್ದಾರೆ ಎನ್ನಲಾಗಿದೆ.
ತಾಳ್ಮೆ ಪರೀಕ್ಷಿಸಿದರೆ ಸುಮ್ಮನಿರಲ್ಲ: ಪಾಕಿಗಳ ಎದೆ ನಡುಗಿಸುವ ತಿರುಗೇಟು ಹೇಗಿದೆ ನೋಡಿ…

10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × 2 =
Remember me
