ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಪುನರ್‌ರಚನೆಯಾಗಲಿರುವ ಬಗ್ಗೆ ವರದಿಯಾಗಿದೆ. ಈ ಕುರಿತಂತೆ ಇದುವರೆಗೆ ಯಾರೂ ಬಾಯಿಬಿಡದಿದ್ದರೂ, ಜುಲೈ ಮೊದಲನೆಯ ವಾರದಲ್ಲಿಯೇ ಈಗಿರುವ ಸಂಪುಟಕ್ಕೆ ಸರ್ಜರಿಯಾಗಲಿದ್ದು, ಹೊಸ ಮುಖಗಳ ಪರಿಚಯವಾಗಲಿದೆ ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.
ಈಗಿರುವ ಕೆಲವು ಸಚಿವರು ಸ್ಥಾನ ಕಳೆದುಕೊಳ್ಳಲಿದ್ದು, 27 ಹೊಸಬರಿಗೆ ಪ್ರಧಾನಿ ಮೋದಿ ಜಾಗ ನೀಡಲಿದ್ದಾರೆ ಎನ್ನಲಾಗಿದೆ. ಯಾರೆಲ್ಲಾ ಸ್ಥಾನ ಕಳೆದುಕೊಳ್ಳಲಿದ್ದಾರೆ, ಯಾರಿಗೆ ಸ್ಥಾನ ಸಿಗಲಿದೆ ಎಂಬ ಬಗ್ಗೆ ಇದುವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಗಮನದಲ್ಲಿಟ್ಟುಕೊಂಡು ಸಂಪುಟ ಪುನಾರಚನೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮಧ್ಯಪ್ರದೇಶದ ಪ್ರಭಾವಿ ಕಾಂಗ್ರೆಸ್‌ ನಾಯಕರಾಗಿದ್ದು, ಈಚೆಗೆ ಬಿಜೆಪಿ ಸೇರಿಕೊಂಡಿರುವ ಜ್ಯೋತಿರಾದಿತ್ಯ ಸಿಂಧ್ಯ, ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ, ರಾಜಸ್ಯಭಾ ಸದಸ್ಯ ಸುಶೀಲ್‌ ಮೋದಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದರ್‌ ಯಾದವ್‌ ಅವರ ಹೆಸರು ಹೊಸ ಸಚಿವ ಸಂಪುಟದಲ್ಲಿ ಕೇಳಿಬರುತ್ತಿದೆ.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾಔಣೆ ನಡೆಯಲಿದೆ. ಆದ್ದರಿಂದ ಅಲ್ಲಿನ ನಾಯಕರಿಗೆ ಜಾಸ್ತಿ ಅವಕಾಶ ಸಿಗುವ ಸಾಧ್ಯತೆಯಿದೆ. ಆದ್ದರಿಂದ ಉತ್ತರಪ್ರದೇಶದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌, ಪಕಜ್‌ ಚೌಧರಿ, ವರುಣ್‌ ಗಾಂಧಿ, ಅನುಪ್ರಿಯ ಪಾಟೀಲ್‌ ಮತ್ತು ರಾಜ್ಯಸಭಾ ಸದಸ್ಯ ಅನಿಲ್‌ ಜೈನ್‌ ಹೆಸರು ಈ ಭಾಗದಿಂದ ಕೇಳಿಬರುತ್ತಿದೆ.
ಇದರ ಜತೆಗೆ ಅಸ್ಸಾ ಮುಖ್ಯಮಂತ್ರಿಯಾಗಿದ್ದ ಸುರ್ಬಾನಂದ್‌ ಸೋನಾವಾಲ್‌, ಮಹಾರಾಷ್ಟ್ರದ ಸಿಎಂ ಆಗಿದ್ದ ನಾರಾಯಣ್‌ ರಾಣೆ, ಸಂಸದ ಪ್ರೀತಮ್‌ ಮುಂದೆ, ಬಿಜೆಪಿ ಹಿರಿಯ ನಾಯಕ ಕೈಲಾಸ್‌ ವಿಜಯ್‌ ವರ್ಗಿಯಾ, ಬಿಜೆಪಿ ವಕ್ತಾರ ಸಜೈದ್‌ ಜಾಫರ್‌ ಹೆಸರೂ ಕೇಳಿಬಂದಿದೆ.
ಒಡಿಶಾ ಸಂಸದ ಅಶ್ವಿನ್ ವೈಷ್ಣವ್, ದೆಹಲಿಯಿಂದ ಸಂಸದೆ ಮೀನಾಕ್ಷಿ ಲೇಖಿ, ಬಂಗಾಳದ ಮಾಜಿ ರೈಲ್ವೇ ಸಚಿವ ದಿನೇಶ್ ತ್ರಿವೇದಿ, ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದ ಪಶುಪತಿ ಪರಾಸ್, ರಾಜ್ಯ ಸಭಾ ಸದಸ್ಯ ಅನಿಲ್ ಜೈನ್, ರಾಜಸ್ಥಾನದಿಂದ ಕಿರಿಯ ಸಂಸದ ಚೌಧರಿ, ರಾಹುಲ್ ಕಸ್ವಾನ್ ಮತ್ತು ಸಿಕಾರ್ ಸಂಸದ ಸುಮೇಧಾನಂದ ಸರಸ್ವತಿ, ಜೆಡಿಯು ನಾಮನಿರ್ದೇಶನಗಳಾದ ಆರ್.ಸಿ.ಪಿ. ಸಿಂಗ್ ಮತ್ತು ಸಂತೋಷ್ ಕುಮಾರ್, ಲಡಾಖ್‌ನ ಸಂಸದ ಜಮ್ಯಾಂಗ್‌ ನಮ್‌ಸ್ಯಾಲ್‌, ಹರಿಯಾಣದ ಸಂಸದರಾದ ಸುನೀತಾ ಡುಗ್ಗಲ್‌ ಮುಂತಾದವರ ಹೆಸರು ಕೂಡ ಸಂಭಾವ್ಯ ಪಟ್ಟಿಯಲ್ಲಿದೆ.
ಇನ್ನು ಕರ್ನಾಟಕದ ವಿಷಯ ಹೇಳುವುದಾದರೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೆಸರು ಕೇಳಿಬರುತ್ತಿದೆ.
ಕೋರ್ಟ್‌ನಲ್ಲಿ ಕೇಸ್‌ ಇರುವುದು ತಿಳಿಯದೇ ಭೂಮಿ ಕೊಂಡಾಗಿದೆ, ಈಗ ಕಾನೂನಿನಡಿ ದಾರಿಗಳೇನು?

ಭೀಕರ ಅಪಘಾತ- ಬಿಗ್‌ಬಾಸ್‌ ಖ್ಯಾತಿಯ ನಟ ಮಹೇಶ್‌ ಪ್ರಜ್ಞಾಹೀನ: ಐಸಿಯುನಲ್ಲಿ ಚಿಕಿತ್ಸೆ

ಲವರ್‌ ಜತೆ ಓಡಿಹೋಗಿದ್ದಕ್ಕೆ ಜೈ ಎಂದ ಕೋರ್ಟ್‌- ಆದೇಶ ಕೇಳಿ ಸುಸ್ತಾದ ಗುಟ್ಕಾಪ್ರಿಯ ಪತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 13 =
Remember me
