ನವದೆಹಲಿ:ಕರ್ನಾಟಕದ ಚನ್ನಪಟ್ಟಣ ಗೊಂಬೆಗಳ ಕುರಿತು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದರು.
ಚೀನಾದಿಂದ ಆಮದಾಗುತ್ತಿರುವ ಆಟಿಕೆಗಳನ್ನು ಬಹಿಷ್ಕರಿಸಿ ನಮ್ಮದೇ ರಾಜ್ಯದಲ್ಲಿ ತಯಾರಾಗುತ್ತಿರುವ ಆಟಿಕೆಗಳತ್ತ ಗಮನ ಕೊಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು. ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳು ಇದ್ದಾರೆ ಎನ್ನುವ ಸಮಯದಲ್ಲಿ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಉಲ್ಲೇಖಿಸಿದ್ದರು.
Good initiative to showcase India’s talent, traditions and toys.https://t.co/2V9dC83HkL
— Narendra Modi (@narendramodi)February 16, 2021

ಇದೀಗ ಈ ಗೊಂಬೆಗಳನ್ನು ರೈಲು ನಿಲ್ದಾಣದಲ್ಲಿ ಪ್ರದರ್ಶಿಸಲು ರೈಲ್ವೆ ಇಲಾಖೆ ಸಿದ್ಧವಾಗಿದ್ದು ಈ ಬಗ್ಗೆ ಮೋದಿ ಬಹಳ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಭಾರತವು ಆತ್ಮ ನಿರ್ಭರತೆಯತ್ತ ಸಾಗುತ್ತಿದೆ. ಕರ್ನಾಟಕದ ಚನ್ನಪಟ್ಟಣ ನಿಲ್ದಾಣದಲ್ಲಿ ಸ್ಥಳೀಯ ಆಟಿಕೆ ಗೊಂಬೆಗಳು, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿದೆ. ಇದು ಸ್ಥಳೀಯ ಆಟಿಕೆ ಉತ್ಪಾದನೆಗೆ ಉತ್ತೇಜನ ನೀಡುತ್ತದೆ ಎಂದು ನಿನ್ನೆ ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಟ್ವೀಟ್ ಮಾಡಿದ್ದರು.
ಇದಕ್ಕೆ ಕಮೆಂಟ್‌ ಮಾಡಿರುವ ಪ್ರಧಾನಿ ಮೋದಿ, ಭಾರತದ ಪ್ರತಿಭೆ, ಸಂಪ್ರದಾಯಗಳು ಮತ್ತು ಆಟಿಕೆಗಳನ್ನು ಪ್ರದರ್ಶಿಸಲು ಇದು ಉತ್ತಮ ಅಂಶವಾಗಿದೆ ಎಂದು ಶ್ಲಾಘಿಸಿದ್ದಾರೆ. ಚೀನಾದ ಆಟಿಕೆಯ ಬದಲು ಭಾರತದ ಆಟಿಕೆಗಳ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿರುವ ಬಗ್ಗೆ ಪ್ರಧಾನಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ತಿಂಗಳು ನನ್ನ ಮದುವೆ- ಎಲ್ಲರೂ ಬನ್ನಿ: ಸಂಜನಾ ಆಹ್ವಾನ; ಆದರಿದು ಬುದ್ಧಿವಂತರಿಗೆ ಮಾತ್ರ!

ಹಾಲಿನ ವ್ಯವಹಾರ ನಡೆಸಲು 30 ಕೋಟಿ ರೂ. ಹೆಲಿಕಾಪ್ಟರ್‌ ಖರೀದಿ!

ನಿವೃತ್ತ ಮುಖ್ಯ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ, ಸಂವಿಧಾನ ತಜ್ಞ ರಾಮಾ ಜೋಯಿಸ್‌ ಇನ್ನಿಲ್ಲ

ದೆಹಲಿಗೆ ಹಾರಿದ ಸಿದ್ದರಾಮಯ್ಯ- ರಾಜ್ಯಕ್ಕೆ ರಾಹುಲ್‌ ಬರುವ ಮೊದಲೇ ಸಿಕ್ರೇಟ್‌ ಮಾತುಕತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 3 =
Remember me
