ಬೀಜಿಂಗ್:ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯಿಂದ ಅವರ ಜನಪ್ರಿಯತೆ ಇದೀಗ ಭಾರತದಲ್ಲಿ ಮಾತ್ರ ಹೆಚ್ಚಾಗಿಲ್ಲ, ಇದಾಗಲೇ ನಡೆಸಿರುವ ಹಲವಾರು ಸಮೀಕ್ಷೆಗಳಲ್ಲಿ ಕೆಲವು ದೇಶಗಳ ಜನರೂ ಮೋದಿ ಅವರ ಬಗ್ಗೆ ಭಾರಿ ಅಭಿಮಾನ ಹೊಂದಿರುವುದು ತಿಳಿದಿದೆ.
ಅದರೆ ಅಚ್ಚರಿಯ ಸಂಗತಿ ಎಂದರೆ, ಕರೊನಾ ವೈರಸ್‌ ಹಾಗೂ ಲಡಾಖ್‌ ಗಡಿ ವಿವಾದದ ನಂತರ ತಿರಸ್ಕರಿಸಲ್ಪಟ್ಟಿರುವ ಚೀನಾದಲ್ಲಿನ ಜನರು ಕೂಡ ಮೋದಿ ಅವರನ್ನೇ ಹೆಚ್ಚು ಪ್ರೀತಿಸುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ.
ಹೀಗೆಂದು ಭಾರತದ ಮಾಧ್ಯಮಗಳು ಹೇಳುತ್ತಿಲ್ಲ, ಬದಲಿಗೆ ಚೀನಾದ ಮೌತ್‌ಪೀಸ್ ಗ್ಲೋಬಲ್ ಟೈಮ್ಸ್ ನಡೆಸಿದ ಸಮೀಕ್ಷೆಯೇ ಹೇಳಿದೆ. ಲಡಾಖ್ ವಿವಾದದ ಮೂರು ತಿಂಗಳ ನಂತರ ಚೀನಾದ ಮೌತ್‌ಪೀಸ್ ಗ್ಲೋಬಲ್ ಟೈಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಚೀನೀಯರು ತಮ್ಮ ನಾಯಕರಿಗಿಂತ ಪಿಎಂ ಮೋದಿಯವರ ಕಾರ್ಯವೈಖರಿಯ ಬಗ್ಗೆ ಹೆಚ್ಚಿನ ಒಲವು ಹೊಂದಿರುವುದಾಗಿ ಅದರಲ್ಲಿ ವರದಿಯಾಗಿದೆ.
ಗ್ಲೋಬಲ್ ಟೈಮ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ 50 ಪ್ರತಿಶತದಷ್ಟು ಚೀನಾದ ನಾಗರಿಕರು ಬೀಜಿಂಗ್ ಮೇಲೆ ಅನುಕೂಲಕರ ಪ್ರಭಾವವನ್ನು ಹೊಂದಿದ್ದರೆ, 50 ಪ್ರತಿಶತ ಜನರು ಭಾರತದ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಈ ನಡುವೆಯೇ, ಚೀನಾದ ಅತಿದೊಡ್ಡ ಟೆಕ್ ಕಂಪನಿ ಹುವಾವೇ ಭಾರತದ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ದೊಡ್ಡ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಭಾರತವನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಭಾರತದೊಂದಿಗಿನ ತನ್ನ ಸಂಬಂಧವು ಸಾಕಷ್ಟು ಹಳೆಯದು ಎಂದು ತೋರಿಸಲು ಹುವಾವೇ ಪ್ರಯತ್ನಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಭಾರತದಲ್ಲಿ ಚೀನಾ ವಿರೋಧಿ ಭಾವನೆ ತುಂಬಾ ಹೆಚ್ಚಾಗಿದೆ ಎಂದು ಶೇಕಡಾ 70 ರಷ್ಟು ಜನರು ನಂಬಿದ್ದಾರೆ. ಅದೇ ಸಮಯದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವು ಸುಧಾರಿಸುತ್ತದೆ ಎಂದು ಶೇಕಡಾ 30 ರಷ್ಟು ಜನರು ಭಾವಿಸಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಡ್ರಗ್ಸ್‌ ನಂಟಲ್ಲಿ ಸ್ಯಾಂಡಲ್‌ವುಡ್‌! ಕೆಲ ನಟರು, ಸಂಗೀತ ನಿರ್ದೇಶಕರ ಮೇಲೆ ಎನ್‌ಸಿಬಿ ನಿಗಾ
ಭಾರತ-ಚೀನಾ ಸಂಬಂಧದಲ್ಲಿ ಅಲ್ಪಾವಧಿಗೆ ಸುಧಾರಣೆಯಾಗಲಿದೆ ಎಂದು ಶೇಕಡಾ ಒಂಬತ್ತರಷ್ಟು ಚೀನಿಯರು ನಂಬಿದ್ದರೆ, ಶೇಕಡಾ 25 ರಷ್ಟು ಜನರ ಪ್ರಕಾರ ಉಭಯ ದೇಶಗಳ ನಡುವಿನ ಸಂಬಂಧವು ದೀರ್ಘಕಾಲದವರೆಗೆ ಸದೃಢವಾಗಿರುತ್ತದೆ ಭಾವಿಸಿದ್ದಾರೆ.
ವಾಸ್ತವವಾಗಿ ಲಡಾಖ್ ಹಿಂಸಾಚಾರದ ನಂತರ ಚೀನಾದ ಕಂಪನಿಗಳು ಭಾರತ ಸರ್ಕಾರದ ಹಿಟ್‌ಲಿಸ್ಟ್‌ನಲ್ಲಿವೆ. ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ ಹುವಾವೇ ಮತ್ತು ಇತರ ಚೀನಾದ ಕಂಪನಿಗಳೊಂದಿಗಿನ ಸಂಬಂಧವನ್ನು ಹಂತಹಂತವಾಗಿ ಕೊನೆಗೊಳಿಸಲು ಭಾರತ ಬಯಸಿದೆ. ನಿಷೇಧದ ಬದಲು ಟೆಲಿಕಾಂ ಕಂಪನಿಗಳಿಗೆ ಚೀನಾದ ಗೇರ್‌ನಿಂದ ದೂರವಿರಲು ಭಾರತ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ. ಆದರೆ ಇದರ ನಡುವೆಯೇ ಚೀನಾದವರು ಪ್ರಧಾನಿ ಮೋದಿ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿರುವುದು ತಿಳಿದುಬಂದಿದೆ.
ಇನ್ನು ಹುವಾವೆ ಕುರಿತು ಹೇಳುವುದಾದರೆ, ಇದು ಈಗಾಗಲೇ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾದಲ್ಲಿ ಸಂಪೂರ್ಣ ನಿಷೇಧವನ್ನು ಎದುರಿಸುತ್ತಿದೆ. ಹುವಾವೇ ಸಿಎಫ್‌ಒ ಮೆಂಗ್ ವೆನ್‌ ಝೌ ಕೆನಡಾದಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರು ಜಾಹೀರಾತುಗಳ ಮೂಲಕ ಭಾರತದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇಲ್ಲಿದ್ದಾರೆ ಸ್ನಾತಕೋತ್ತರ ಹಾಗೂ ಪದವೀಧರ ಭಿಕ್ಷುಕರು!

ಗೆಳೆಯನ ಜತೆ ದೈಹಿಕ ಸಂಪರ್ಕ ಬೆಳೆಸಿ ಅತ್ಯಾಚಾರ ಎಂದಳು: ಹೈಕೋರ್ಟ್‌ ಮಾಡಿತು ತಕ್ಕಶಾಸ್ತಿ

ಅರ್ಚಕ ನಾರಾಯಣಾಚಾರ್‌ ಪುತ್ರಿಯರು ಹಿಂದೂಗಳಲ್ಲ: ಪರಿಹಾರದ ಚೆಕ್‌ನಿಂದ ಸತ್ಯ ಬಯಲು…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × five =
Remember me
