ಮುಂಬೈ:ಈ ಚಿತ್ರದಲ್ಲಿ ಕಾಣಿಸುತ್ತಿರುವ ಮುಗ್ಧಮುಖದ ಬೊಗಸೆಕಂಗಳ ಐದು ತಿಂಗಳ ಮಗುವಿನ ಹೆಸರು ಟೀರಾ. ಆದರೆ ಈ ನಗುವಿನ ಹಿಂದೆ ಭಯಾನಕ ಕಾಯಿಲೆ ಮನೆಮಾಡಿದೆ. ಈ ಪುಟಾಣಿ ಇದೀಗ ಅಪರೂಪದ ಕಾಯಿಲೆಯಿಂದಾಗಿ ಜೀವನ್ಮರಣಗಳ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಸುಮಾರು 16 ಕೋಟಿ ಮೌಲ್ಯದ ಔಷಧ ಈ ಮಗುವಿನ ಜೀವಕ್ಕಾಗಿ ಬೇಕಿದೆ. ಅದನ್ನು ಈಕೆಯ ಪಾಲಕರು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಿದೆ. ಈ ಮಗುವಿಗೆ ಜೀವ ನೀಡಲು ಕೇಂದ್ರ ಸರ್ಕಾರ ನೆರವಾಗಿದ್ದು, ಔಷಧಿಯ ಆಮದಿಗೆ ತಗುಲುತ್ತಿರುವ ಆರು ಕೋಟಿ ರೂಪಾಯಿಗಳ ಜಿಎಸ್​ಟಿಯನ್ನು ಮನ್ನಾ ಮಾಡಿದೆ.
ಅಂದಹಾಗೆ ಟೀರಾ, ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಸ್ಪೈನಲ್​ ಮಸ್ಕ್ಯುಲಾರ್​ ಅಸ್ಟ್ರಾಫಿಸ್​ (Spinal Muscular Astrophys -SMA) ಎಂಬ ಕಾಯಿಲೆ ಇದಾಗಿದೆ. ಈಕೆಯ ಚಿಕಿತ್ಸೆಗೆ ಬಲುದುಬಾರಿ ಮೊತ್ತ ಬೇಕಿದೆ. ಮಗುವಿನ ಜೀನ್ ಬದಲಿಸಿ ಚಿಕಿತ್ಸೆ ನೀಡಬೇಕಿದೆ. ಇದಕ್ಕೆ ತಗಲುವ ಔಷಧ ಲಭ್ಯವಿರುವುದು ಅಮೆರಿಕದಲ್ಲಿ ಮಾತ್ರ. ಅದನ್ನು ತರಿಸಿಕೊಳ್ಳಲು ಈಕೆಯ ಪಾಲಕರು ಇದಾಗಲೇ ಕ್ರೌಡ್-ಫಂಡಿಂಗ್ ಮೂಲಕ 16 ಕೋಟಿ ರೂಪಾಯಿಯನ್ನು ಸಂಗ್ರಹಿಸಿದ್ದಾರೆ. ಆದರೆ ಈ ಔಷಧಕ್ಕೆ 6 ಕೋಟಿ ರೂಪಾಯಿ ಹೆಚ್ಚುವರಿ ಜಿಎಸ್​ಟಿ ಕಟ್ಟುವ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ಅವರು ಪ್ರತಿಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ದೇವೇಂದ್ರ ಫಡ್ನವೀಸ್ ಅವರ ಮೊರೆ ಹೋಗಿದ್ದರು. ಫಡ್ನವೀಸ್​ ಅವರು ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪಾಲಕರು ಬರೆದಿರುವ ಮನವಿ ಪತ್ರವನ್ನು ರವಾನೆ ಮಾಡಿದ್ದರು. ತೆರಿಗೆ ವಿನಾಯಿತಿಗೆ ಪರಿಶೀಲನೆ ಮಾಡುವಂತೆ ಕೋರಿದ್ದರು.
ಪಾಲಕರ ಈ ಕೋರಿಕೆಯನ್ನು ಸರ್ಕಾರ ಪುರಸ್ಕರಿಸಿದ್ದು, ಆರು ಕೋಟಿ ರೂಪಾಯಿ ಜಿಎಸ್​ಟಿಯನ್ನು ಮನ್ನಾ ಮಾಡಲಾಗಿದೆ.
ಕಾರಿನ ಹ್ಯಾಂಡ್​ಬ್ರೇಕ್​ ಹಾಕದೇ ಮೂತ್ರವಿಸರ್ಜನೆಗೆ ಹೋದ ಚಾಲಕ- ನಾಲ್ವರ ದುರ್ಮರಣ

ತಂಗಿಯ ಮದುವೆಗೆ ಮೃತಪಟ್ಟ ತಂದೆಯನ್ನು ಕರೆತಂದ ಅಕ್ಕ- ಸಹೋದರಿ ಪ್ರೀತಿಗೆ ವಿವಾಹ ಮಂಟಪದಲ್ಲಿ ಕಣ್ಣೀರಧಾರೆ

ಸುಪ್ರಸಿದ್ಧ ನಟಿ ಮರ್ಲಿನ್‌ ಮನ್ರೋಳನ್ನು ನೆನಪಿಸಿದ ಗೂಬೆ- ವಿಡಿಯೋ ವೈರಲ್​

ಏಳು ತಿಂಗಳಲ್ಲಿ ಮೂರು ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − ten =
Remember me
