ವಾರಣಾಸಿ:ಕೆಲವರು ಗೋವು ಮತ್ತು ಸೆಗಣಿಯ ಬಗ್ಗೆ ಮಾತನಾಡುವುದನ್ನೇ ಅಪರಾಧ ಎಂಬಂತೆ ಬಿಂಬಿಸುತ್ತಿದ್ದಾರೆ. ಹೀಗೆ ಮಾತನಾಡುವವರಿಗೆ ಗೋವು ’ಪಾಪ’ ಎನಿಸಿರಬಹುದು, ಆದರೆ ನಮಗದು ತಾಯಿಯ ಸಮಾನ. ಅದಕ್ಕಾಗಿಯೇ ಅದನ್ನು ಗೋಮಾತೆ ಎಂದು ಕರೆಯುವುದು. ಗೋವುಗಳನ್ನು ಗೇಲಿ ಮಾಡುವವರು ಜಾನುವಾರುಗಳಿಂದ ದೇಶದ 8 ಕೋಟಿ ಕುಟುಂಬಗಳು ಜೀವನ ನಡೆಸುತ್ತಿದೆ ಎಂಬುದನ್ನು ಮರೆಯುತ್ತಿರುವುದು ವಿಷಾದನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಉತ್ತರ ಪ್ರದೇಶದ ವಾರಣಾಸಿಯಲ್ಲಿ 2,095 ಕೋಟಿ ರೂಪಾಯಿಗಳ 27 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಉತ್ತರಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಆಹಾರ ಪಾರ್ಕ್‍ನಲ್ಲಿ ಬನಾಸ್ ಡೈರಿ ಸಂಕುಲ್‍ಗೆ, ರಾಮನಗರದ ಹಾಲು ಉತ್ಪಾದಕರ ಸಹಕಾರಿ ಯೂನಿಯನ್ ಪ್ಲಾಂಟಿನ ಜೈವಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ಮಾಡಿದರು. ನಂತರ ಮಾತನಾಡಿದ ಪ್ರಧಾನಿ, ಗೋವುಗಳಿಂದ ಆಗುತ್ತಿರುವ ಪ್ರಯೋಜನಗಳ ಬಗ್ಗೆ ವಿವರಣೆ ನೀಡಿದರು. ಉತ್ತರ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯ ಮಾತ್ರವಲ್ಲ, ಡೈರಿ ಕ್ಷೇತ್ರದ ವಿಸ್ತರಣೆಯಲ್ಲೂ ಮುಂದಿರುವುದು ನನಗೆ ಖುಷಿ ತಂದಿದೆ ಎಂದರು.
‘ಹೈನುಗಾರಿಕೆ, ಪಶುಸಂಗೋಪನೆಯಿಂದಾಗಿ ರೈತರ ಸ್ಥಿತಿ ಬದಲಾಗಿದೆ. ಶ್ವೇತ ಕ್ರಾಂತಿಯಿಂದಾಗಿ ರೈತಾಪಿ ವರ್ಗದವರು ಸುಖ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಕಳೆದ ಆರೇಳು ವರ್ಷಗಳಿಗೆ ಹೋಲಿಸಿದರೆ ಭಾರತದಲ್ಲಿ ಹಾಲಿನ ಉತ್ಪಾದನೆಯು ಸುಮಾರು ಶೇ.45ರಷ್ಟು ಹೆಚ್ಚಾಗಿದೆ. ಇಂದು, ಭಾರತವು ವಿಶ್ವದ ಹಾಲಿನ ಸುಮಾರು ಶೇ.22ರಷ್ಟನ್ನು ಉತ್ಪಾದಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ಕೃಷಿಯ ಕುರಿತು ಮಾತನಾಡಿದ ಮೋದಿ ‘ನಮ್ಮ ದೇಶದಲ್ಲಿ ಹಿಂದಿನಿಂದಲೂ ಇದ್ದುದು ನೈಸರ್ಗಿಕ ಕೃಷಿ, ಆದರೆ ಕಾಲಕ್ರಮೇಣ ರಾಸಾಯನಿಕ ಆಧಾರಿತ ಕೃಷಿಯೇ ವ್ಯಾಪಕವಾಯಿತು. ಭೂಮಿ ತಾಯಿಯ ಪುನರುಜ್ಜೀವನಕ್ಕಾಗಿ, ನಮ್ಮ ನೆಲವನ್ನು ರಕ್ಷಿಸಲು, ಮುಂದಿನ ಪೀಳಿಗೆಯ ಭವಿಷ್ಯವನ್ನು ಭದ್ರಪಡಿಸಲು ನಾವು ಮತ್ತೊಮ್ಮೆ ನೈಸರ್ಗಿಕ ಕೃಷಿಯತ್ತ ಮುಖಮಾಡಬೇಕು ಎಂದರು.
ಇದೇ ವೇಳೆ ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೂ ಅವರು ಚಾಲನೆ ನೀಡಿದರು. ಜತೆಗೆ, ಬನಾಸ್ ಡೈರಿಗೆ ಸಂಬಂಧಿಸಿದ 1.7 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ರೂ 35-ಕೋಟಿ ಬೋನಸ್‍ಗಳನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು.
ಜೈಲಿನಲ್ಲಿದ್ದೇ ಸಂಪಾದಿಸಿದ 215 ಕೋಟಿ ರೂ! ಬಾಲಿವುಡ್‌ ಬೆಡಗಿಯರು ಈತನ ಬುಟ್ಟಿಗೆ… ಖತರ್ನಾಕ್‌ ಖದೀಮನ ರೋಚಕ ಸ್ಟೋರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
