ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿಗೆ ಸಂಬಂಧಿಸಿದಂತೆ ಪಟ್ಟಭದ್ರ ಹಿತಾಸಕ್ತಿಗಳು ರೈತರ ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಾಗೂ ಮುಗ್ಧ ರೈತರನ್ನು ತಪ್ಪುದಾರಿಗೆ ಎಳೆಯುವಂತೆ ಮಾಡುತ್ತಿರುವ ಬಗ್ಗೆ ಮತ್ತೊಮ್ಮೆ ವಿಷಾದ ವ್ಯಕ್ತಪಡಿಸಿದ ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿದ್ದಾರೆ.
15 ಗಂಟೆಗಳ ಪ್ರಶ್ನಾವಳಿ ಅವಧಿ ಚರ್ಚೆ ಮುಗಿದ ಬಳಿಕ ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, ದೇಶದಲ್ಲಿ ಶೇ. 86ರಷ್ಟು ಎರಡು ಹೆಕ್ಟೇರ್‌ಗೂ ಕಡಿಮೆ ಭೂಮಿಯುಳ್ಳ ರೈತರಿದ್ದಾರೆ. ಅವರ ಅಭಿವೃದ್ದಿ ಜವಾಬ್ದಾರಿ ದೇಶಕ್ಕಿದೆ, ಅವರ ಕಾಳಜಿ ನಮಗೆ ಇದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಎಂದಿಗೂ ರದ್ದು ಮಾಡುವುದಿಲ್ಲ. ಹಿಂದೆಯೂ ಇತ್ತು, ಮುಂದೆಯೂ ಇರಲಿದೆ ಎಂದಿದ್ದಾರೆ.
ವಿನಾಕಾರಣ ಈ ಬಗ್ಗೆ ರೈತರಲ್ಲಿ ತಪ್ಪು ಕಲ್ಪನೆ ಮೂಡಿಸಿ ಅವರನ್ನು ತಪ್ಪು ದಾರಿಗೆ ಎಳೆಯುವುದನ್ನು ನಿಲ್ಲಿಸಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ.
ರೈತರ ಜತೆ ನಾವು ಮಾತುಕತೆಗೆ ಸಿದ್ಧರಿದ್ದೇವೆ. ಈಗಾಗಲೇ ಹಲವಾರು ಸುತ್ತಿನ ಮಾತುಕತೆಯೂ ನಡೆದಿದೆ. ಈಗ ಮತ್ತೊಮ್ಮೆ ಈ ಸದನದ ಮೂಲಕ ಆಹ್ವಾನಿಸುತ್ತಿದ್ದೇನೆ. ರೈತರ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿರುವ ಬಗ್ಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ನಾವು ಮುಂದಕ್ಕೆ ಅಡಿ ಇಡಬೇಕಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಸುಧಾರಣೆಗಳ ಅಗತ್ಯವಿದೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ಸೇರಿದಂತೆ ಇತರ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಮಾತನಾಡಿದ್ದರು. ಆದರೆ ಈಗ ನಮ್ಮ ಸರ್ಕಾರ ಜಾರಿಗೆ ತಂದಾಗ ರೈತರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಇಂದು ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಇರುವ ಶೇ. 86ರಷ್ಟು ರೈತರಿದ್ದಾರೆ. ಅಂದರ್ಥ 12 ಕೋಟಿ ರೈತರಿದ್ದಾರೆ. ಸಣ್ಣ ರೈತರ ಜೀವನವನ್ನು ಸುಧಾರಿಸುವುದು ಅಗತ್ಯ. ಅವರ ಜವಾಬ್ದಾರಿ ನಮ್ಮ ಮೇಲಿದೆ. ಅವರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡೇ ಇಂಥದ್ದೊಂದು ಕಾನೂನು ಜಾರಿಗೆ ಮಾಡಲಾಗಿದೆ ಎಂದು ಪ್ರಧಾನಿ ನುಡಿದರು.
ಭಾರತದ ರಾಷ್ಟ್ರೀಯತೆ ಸಂಕುಚಿತ ಅಥವಾ ಸ್ವಾರ್ಥಪರತೆಯಿಂದ ಕೂಡಿದ್ದಲ್ಲ. ಇದು ಆಕ್ರಮಣಕಾರಿಯೂ ಕೂಡ ಅಲ್ಲ. ಇದು ‘ಸತ್ಯಂ ಶಿವಂ ಸುಂದರಂ’ ಮೌಲ್ಯಗಳಿಂದ ಪ್ರೇರಿತವಾಗಿದೆ. ಈ ಉಲ್ಲೇಖವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ನೀಡಿದ್ದಾರೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.‌
ರಾಜ್ಯಸಭೆಯಲ್ಲಿ ದೇವೇಗೌಡರ ಪ್ರಶಂಸಿಸಿದ ಪ್ರಧಾನಿ- ಅವರಿಗೆ ಆಭಾರಿ ಎಂದ ಮೋದಿ

ಹಿಮಸ್ಫೋಟ: ರಕ್ಷಣಾ ಸಿಬ್ಬಂದಿಯೂ ನಾಪತ್ತೆ- ಸಿಗುತ್ತಲೇ ಇವೆ ಮೃತದೇಹ; ಉತ್ತರ ಪ್ರದೇಶದಲ್ಲಿ ಹೈ ‌ಅಲರ್ಟ್‌

ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಸ್ವಂತ ಮಗುವನ್ನು ಭೀಕರವಾಗಿ ಕೊಂದ ಗರ್ಭಿಣಿ ಶಿಕ್ಷಕಿ!

ಪತ್ನಿ, ಲವರ್‌ ಮಧ್ಯೆ ಸಿಲುಕಿ ಹೈರಾಣಾಗಿದ್ದೇನೆ, ಇಬ್ಬರೂ ಬೇಕು… ಏನು ಮಾಡಲಿ?

ಬಾಹ್ಯಾಕಾಶದಲ್ಲಿ ಘಮಘಮಿಸಲಿದೆ ಮೈಸೂರಿನ ಎಗ್‌ರೋಲ್ಸ್, ವೆಜ್‌ರೋಲ್ಸ್, ಇಡ್ಲಿ, ಹಲ್ವಾ‌…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + ten =
Remember me
