ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ರದೇಶ ಸಲ್ಮಾನ್‌ ಎಂಬ ವ್ಯಕ್ತಿ ಈತ.22 ವರ್ಷದ ಸಲ್ಮಾನ್‌ ನಿನ್ನೆ ಪೊಲೀಸ್‌ ಠಾಣೆಗೆ ಕರೆ ಮಾಡಿ ಪ್ರಧಾನಿ ಮೋದಿಯವರನ್ನು ತಾನು ಕೊಲೆ ಮಾಡುತ್ತಿರುವುದಾಗಿ ಹೇಳಿದ್ದಾನೆ. ನಂತರ ಕರೆ ಕಟ್‌ ಮಾಡಿದ್ದಾನೆ. ಈ ದೂರವಾಣಿ ಸಂಖ್ಯೆಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ನಂತರ ಆತನನ್ನು ಪೊಲೀಸ್‌ ಠಾಣೆಗೆ ಕರೆತಂದ ನಂತರ ಕರೆ ಮಾಡಿರುವ ಕಾರಣ ಹೇಳಿದ್ದಾನೆ. ಇದನ್ನು ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ. ಕೆಲವು ಸಣ್ಣಪುಟ್ಟ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡು ಜೈಲುವಾಸಿಯಾಗಿದ್ದ ಈತನಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಹೊರಗಡೆ ಯಾವುದೇ ಕೆಲಸ ಇಲ್ಲದ ಕಾರಣ ಪುನಃ ಜೈಲಿಗೆ ಹೋಗಲು ಬಯಸಿದ್ದ. ಬೇರೆ ಏನು ಕಾರಣ ಹೇಳಬೇಕು ಎಂದು ನನಗೆ ತಿಳಿಯಲಿಲ್ಲ. ಜೈಲಿಗೆ ವಾಪಸ್‌ ಬರಬೇಕಿತ್ತು. ಅದಕ್ಕಾಗಿ ಪ್ರಧಾನಿಯವರಿಗೆ ಕೊಲೆ ಮಾಡುವ ಬೆದರಿಕೆ ಹಾಕಿದೆ ಎಂದು ಹೇಳಿದ್ದಾನೆ. ಹೀಗೆ ಮಾಡಿದರೆ ನನ್ನನ್ನು ಪುನಃ ಜೈಲಿಗೆ ಹಾಕುವ ವಿಷಯ ತಿಳಿದಿತ್ತು. ಅದಕ್ಕಾಗಿಯೇ ಮಾಡಿರುವುದಾಗಿ ಹೇಳಿದ್ದಾನೆ.ಸದ್ಯ ಈತ ಪೊಲೀಸರ ವಶದಲ್ಲಿದ್ದು, ಈತನನ್ನು ನೋಡಿದ್ರೆ ಡ್ರಗ್‌ ಎಡಿಕ್ಟ್‌ ಎಂದು ತಿಳಿದುಬರುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರಧಾನಿಯವರಿಗೆ ಕೊಲೆ ಬೆದರಿಕೆ ವಿಷಯ ಆಗಿರುವ ಕಾರಣ, ಗುಪ್ತಚರ ಅಧಿಕಾರಿಗಳು ಈತನ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕೇಸ್‌ ಮುಗಿಸುತ್ತಿಲ್ಲ ಎಂಬ ಸಿಟ್ಟಿನಿಂದ ಜಡ್ಜ್‌ ಮೇಲೆ ಚಪ್ಪಲಿ ಎಸೆದವನಿಗೆ 9 ವರ್ಷಗಳ ನಂತರ ಶಿಕ್ಷೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 2 =
Remember me
