ವಾಷಿಂಗ್ಟನ್:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಅಭೂತಪೂರ್ವ ಬೆಳವಣಿಗೆಯೊಂದು ಕಂಡುಬಂದಿದೆ.
ಅದೇನೆಂದರೆ ಅಮೆರಿಕಕ್ಕೆ ಈ ಹಿಂದೆ ಭಾರತದಿಂದ ಸಾಗಿಸಲ್ಪಟ್ಟಿರುವ 157 ಪುರಾತನ ಕಲಾಕೃತಿಗಳು ಭಾರತಕ್ಕೆ ವಾಪಸ್‌ ಬಂದಿದೆ! ಕಂಚಿನ ನಟರಾಜ ಸೇರಿದಂತೆ ಭಾರತದ ಐತಿಹಾಸಿಕ ಪರಂಪರೆಯುಳ್ಳ ಹಲವಾರು ಕಲಾಕೃತಿಗಳನ್ನು ಇದು ಒಳಗೊಂಡಿದೆ. 10ನೇ ಶತಮಾನದ ರೇವಾಂತ ಕಲ್ಲಿನ ವಿಗ್ರಹ, 12ನೇ ಶತಮಾನದ ತಾಮ್ರದ ನಟರಾಜನ ವಿಗ್ರಹ, 11 ಮತ್ತು 14ನೇ ಶತಮಾನದ ಪುರಾತತ್ವ ವಸ್ತುಗಳು ಕಲಾಕೃತಿಗಳು, ಟೆರಾಕೋಟಾ ಹೂದಾನಿ ಸೇರಿದಂತೆ 45 ಪ್ರಾಚೀನ ವಸ್ತುಗಳು ಇದರಲ್ಲಿದ್ದು, ಅಮೆರಿಕವು ಇದನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಈ ವಸ್ತುಗಳು ಹೆಚ್ಚಾಗಿ 11 ನೇ ಶತಮಾನದಿಂದ 14 ನೇ ಶತಮಾನದ ಅವಧಿಗೆ ಸೇರಿವೆ. 157 ಕಲಾಕೃತಿಗಳಲ್ಲಿ ಅರ್ಧದಷ್ಟು ಕಲಾಕೃತಿಗಳು (71) ಸಾಂಸ್ಕೃತಿಕವಾದರೆ, ಉಳಿದ ಅರ್ಧವು ಹಿಂದೂ ಧರ್ಮ (60), ಬೌದ್ಧ ಧರ್ಮ (16) ಮತ್ತು ಜೈನ ಧರ್ಮಕ್ಕೆ (9) ಸಂಬಂಧಿಸಿದ ಪ್ರತಿಮೆಗಳು ಇವೆ.
ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಪ್ರಧಾನಿ ಮೋದಿಯವರು ಅಮೆರಿಕ ಪ್ರವಾಸಕ್ಕೂ ಮುನ್ನ ಹೇಳಿದ್ದರು. ಈ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಜತೆ ಅವರು ಮಾತುಕತೆಯನ್ನು ನಡೆಸಿದ್ದಾರೆ. ಇದರ ಬೆನ್ನಲ್ಲೇ ಇಂಥದ್ದೊಂದು ಮಹತ್ವದ ಬೆಳವಣಿಗೆ ಕಂಡಿದ್ದು, ಭಾರತಕ್ಕೆ ಸೇರಿರುವ ಪುರಾತನ ವಸ್ತುಗಳು ಮರಳಿ ಭಾರತಕ್ಕೆ ಸೇರಲಿವೆ.
ಕಲಾಕೃತಿಗಳಲ್ಲಿ ಇನ್ನೂ ಏನೇನಿವೆ?ಕಂಚಿನ ವಿಗ್ರಹಗಳಾದ ಶಿವ ಪಾರ್ವತಿ, ಲಕ್ಷ್ಮಿ ನಾರಾಯಣ, ಬುದ್ಧ, ವಿಷ್ಣು, 24 ಜೈನ ತೀರ್ಥಂಕರರು, ಕಂಕಲಮೂರ್ತಿ, ಬ್ರಾಹ್ಮಿಯಾ ಮತ್ತು ನಂದಿಕೇಶಗಳು ಇವೆ. ಹಿಂದೂಧರ್ಮದ ಧಾರ್ಮಿಕ ಶಿಲ್ಪಗಳು (ಮೂರು ತಲೆ ಬ್ರಹ್ಮ, ಸೂರ್ಯ ಚಾಲನೆಯ ರಥ, ವಿಷ್ಣು, ದಕ್ಷಿಣಾಮೂರ್ತಿ ಶಿವ, ನೃತ್ಯ ಗಣೇಶ ಇತ್ಯಾದಿ), ಬೌದ್ಧ ಧರ್ಮ (ಸ್ಥಾಯಿ ಬುದ್ಧ, ಬೋಧಿಸತ್ವ ಮಜುಶ್ರೀ, ತಾರಾ) ಮತ್ತು ಜೈನ ಧರ್ಮ (ಜೈನ ತೀರ್ಥಂಕರ, ಪದ್ಮಾಸನ ತೀರ್ಥಂಕರ, ಜೈನ) ಹಾಗೂ ಇತರ ಕಲಾಕೃತಿಗಳಾದ ನಿರಾಕಾರ ದಂಪತಿ, ಚೌರಿ ಹೊತ್ತವರು, ಡ್ರಮ್ ಬಾರಿಸುವ ಮಹಿಳೆ ಇತ್ಯಾದಿಗಳಿವೆ.
VIDEO: ಶ್ವೇತ ಭವನದಲ್ಲಿ ಮೋದಿ: ಕಮಲಾ ಹ್ಯಾರೀಸ್‌ಗೆ ಸರ್‌ಪ್ರೈಸ್ ಗಿಫ್ಟ್‌- ಬೈಡೆನ್‌ ಜತೆ ಮಾತುಕತೆ

ಮದುವೆಯಾಗದೇ ನೊಂದ ನಾನು ವಿವಾಹಿತನಿಂದ ಎಲ್ಲ ಕಳೆದುಕೊಂಡೆ- ಬದುಕಲಾಗುತ್ತಿಲ್ಲ, ಪ್ಲೀಸ್‌ ದಾರಿ ತೋರಿ…

ಶ್ರೀಮಂತರ ಮಕ್ಕಳ ಹಣದ ಅಮಲಿಗೆ ಬೆಂಗಳೂರಲ್ಲಿ ಮತ್ತೆ ಅಪಘಾತ- ಜಾಲಿ ರೈಡ್‌ಗೆ ಕ್ಯಾಬ್‌ ನಜ್ಜುಗುಜ್ಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 11 =
Remember me
