ಲಖನೌ:‘ನಾವು ಪ್ರತಿಜ್ಞೆಯೊಂದಿಗೆ ಮುನ್ನಡೆಯುತ್ತಿದ್ದೇವೆ… ನಮ್ಮ ತನು-ಮನವನ್ನು ಅರ್ಪಿಸಲು ನಿರ್ಧರಿಸಿದ್ದೇವೆ… ಆಕಾಶದೆತ್ತರಕ್ಕೆ ಹೋಗಲು ಮತ್ತು ನವಭಾರತ ನಿರ್ಮಾಣ ಮಾಡಲು…’‍- ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾಡಿರುವ ಟ್ವೀಟ್‌. ತಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ ಜತೆಗಿರುವ ಅಪರೂಪದ ಫೋಟೋ ಒಂದನ್ನು ಶೇರ್‌ ಮಾಡಿರುವ ಯೋಗಿ, ಈ ಕವನ ಬರೆದಿದ್ದಾರೆ.
56ನೇ ಡಿಜಿಪಿ-ಐಜಿಪಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಲಖನೌಗೆ ತೆರಳಿದ್ದರು. ಅಲ್ಲಿ ಯೋಗಿಯವರ ಜತೆ ಮಾತುಕತೆ ನಡೆಸಿದ ಬಳಿಕ ಇಂದು ದೆಹಲಿಗೆ ವಾಪಸ್​ ಬರಲಿದ್ದಾರೆ.ಈ ಸಮಯದಲ್ಲಿ ಆದಿತ್ಯನಾಥ್​ ಅವರು ತಾವು ಪ್ರಧಾನಿ ಮೋದಿಯವರೊಂದಿಗೆ ಇರುವ ಎರಡು ಫೋಟೋಗಳನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದು, ಈ ಕವನ ಬರೆದಿದ್ದಾರೆ. ಯೋಗಿ ಆದಿತ್ಯನಾಥ್​ ಅವರ ಹೆಗಲ ಮೇಲೆ ಮೋದಿ ಕೈಹಾಕಿ ಏನನ್ನೋ ಹೇಳುತ್ತಿರುವಂತೆ ಈ ಫೋಟೋಗಳು ಇವೆ.
ನವಭಾರತ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂದು ಕ್ಯಾಪ್ಷನ್​ ಕೊಟ್ಟು ಕವನ ಬರೆದಿದ್ದಾರೆ. ಇದಕ್ಕೆ ಪ್ರಶಂಸೆಗಳ ಸುರಿಮಳೆಯೂ ಬಂದಿದೆ, ಜತೆಗೆ ಕೆಲವು ವ್ಯಂಗ್ಯ ಟೀಕೆಗಳೂ ಬಂದಿವೆ. ಸಮಾಜವಾದಿ ಪಕ್ಷ ಈ ಟ್ವೀಟ್‌ ನೋಡಿ ವ್ಯಂಗ್ಯವಾಡಿದೆ. ಎಸ್​ಪಿ ವಕ್ತಾರ ಅನುರಾಗ್​ ಭಡೌರಿಯಾ ಪ್ರತಿಕ್ರಿಯೆ ನೀಡಿದ್ದು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವೇ ಹೆಚ್ಚಾಗಿದೆ. ಹಾಗಾಗಿ ಈ ಬಾರಿ ಅಖಿಲೇಶ್​ ಅವರೇ ಗೆಲ್ಲಬಹುದು ಎಂದು ಪ್ರಧಾನಿ ಮೋದಿ, ಯೋಗಿ ಜೀ ಅವರಿಗೆ ಹೇಳುತ್ತಿರಬಹುದು ಎಂದು ಅಣಕಿಸಿದ್ದಾರೆ.
ಇಲ್ಲಿದೆ ನೋಡಿ ಟ್ವೀಟ್‌
हम निकल पड़े हैं प्रण करकेअपना तन-मन अर्पण करकेजिद है एक सूर्य उगाना हैअम्बर से ऊँचा जाना हैएक भारत नया बनाना हैpic.twitter.com/0uH4JDdPJE
— Yogi Adityanath (@myogiadityanath)November 21, 2021

ಷಾರ್ಟ್ಸ್‌ ಧರಿಸಿ ಬಂದ ಗ್ರಾಹಕನನ್ನು ಒಳಗೆ ಬರಲು ಬಿಡದ ಎಸ್‌ಬಿಐ: ಪ್ಯಾಂಟ್‌ ಹಾಕಿಬನ್ನಿ ಎಂದು ವಾಪಸ್‌ ಕಳಿಸಿದ ಸಿಬ್ಬಂದಿ!

ಹುತಾತ್ಮ ಪತಿಯ ಮುಂದೆ ಮಾಡಿದ ಪ್ರತಿಜ್ಞೆ ಈಡೇರಿಸಿದ ವೀರನಾರಿ: ಅಮ್ಮನ ಮುಂದೆ 11 ವರ್ಷದ ಪುತ್ರಿ ಮಾಡಿದಳೊಂದು ಶಪಥ…

ನಿನ್ನಿಂದಲೇ ನಾನು ಹುಷಾರಾಗಿದ್ದು… ‘ಕರ್ನಾಟಕದ ಅಳಿಯ’ನಿಗೂ ನೀನೇ ಕಾರಣ… ರಾಘವೇಂದ್ರ ರಾಜ್‌ಕುಮಾರ್‌ ಭಾವನಾತ್ಮಕ ಟ್ವೀಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
