ನವದೆಹಲಿ:ಪಾಕಿಸ್ತಾನ, ಸಿರಿಯಾ ದೇಣಿಗೆ ಸ್ವೀಕರಿಸುತ್ತಾ, ಹಲವಾರು ದೇಶಗಳಲ್ಲಿ ಹಣದ ವ್ಯವಹಾರ ನಡೆಸುತ್ತಿರುವ ಭಾರಿ ಆರೋಪ ಹೊತ್ತು ಭಾರತದಲ್ಲಿ ನೆಲೆಸುತ್ತಿರುವ ಆಲ್ಟ್​ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್​ಗೆ ಸುಪ್ರೀಂಕೋರ್ಟ್​ ತಾತ್ಕಾಲಿಕ ಜಾಮೀನು ನೀಡಿದೆ.
ಫ್ಯಾಕ್ಟ್​ ಚೆಕ್​ ಹೆಸರಿನಲ್ಲಿ ಆಲ್ಟ್​ ನ್ಯೂಸ್ ವೆಬ್​ಸೈಟ್​ ತೆರೆದು ಹಿಂದೂ ದೇವತೆಗಳು ಹಾಗೂ ಸನ್ಯಾಸಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್​ ಮಾಡಿರುವ ಆರೋಪವೂ ಸೇರಿದಂತೆ ಕೆಲ ಆರೋಪಗಳು ಮೊಹಮ್ಮದ್ ಜುಬೇರ್​ ಮೇಲಿವೆ. ಹಿಂದೂ ಸನ್ಯಾಸಿಗಳ ವಿರುದ್ಧ ಟ್ವೀಟ್​ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ 2022ರ ಜೂನ್​ 1ರಂದು ಉತ್ತರ ಪ್ರದೇಶದ ಸೀತಾಪುರದಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದ್ದು, ಬಂಧಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾತ್ರವೇ ಜಾಮೀನು ನೀಡುತ್ತಿರುವುದಾಗಿ ಸುಪ್ರೀಂಕೋರ್ಟ್​ ಸ್ಪಷ್ಟಪಡಿಸಿದೆ. ಉಳಿದ ಯಾವುದೇ ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ಈ ಆದೇಶ ಅನ್ವಯ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.
ಈ ಕೇಸ್​ನಲ್ಲಿ ಜಾಮೀನಿನ ಹೊರತಾಗಿಯೂ ಜುಲೈ 16ರವರೆಗೆ ಈತ ದೆಹಲಿಯ ಪೊಲೀಸರ ಕಸ್ಟಡಿಯಲ್ಲಿ ಇರುವುದು ಅನಿವಾರ್ಯ. ಏಕೆಂದರೆ ಮತ್ತೊಂದು ಗಂಭೀರ ಆರೋಪದ ಮೇಲೆ 16ರವರೆಗೆ ಪೊಲೀಸರು ತನಿಖೆ ನಡೆಸಬೇಕಿದೆ. 2018ರಲ್ಲಿ ಹಿಂದೂ ದೇವತೆಯ ವಿರುದ್ಧದ ‘ಆಕ್ಷೇಪಾರ್ಹ ಟ್ವೀಟ್’ಗೆ ಸಂಬಂಧಿಸಿದ ಪ್ರಕರಣದಲ್ಲಿ ಜುಬೇರ್​ನನ್ನು ಬಂಧಿಸಲಾಗಿದೆ. ಈ ಕೇಸ್​ನಲ್ಲಿ ಇನ್ನೂ ಜಾಮೀನು ಸಿಗಲಿಲ್ಲ. ಸುಪ್ರೀಂಕೋರ್ಟ್​ ಕೂಡ ತನ್ನ ಆದೇಶದಲ್ಲಿ ಯಾವ ಕೇಸ್​ ಎಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ, ಸದ್ಯ ಜುಬೇರ್ ಕಸ್ಟಡಿಯಲ್ಲಿ ಇರಬೇಕಿದೆ.
ಯಾವುದೇ ಸಾಕ್ಷ್ಯಾಧಾರಗಳನ್ನು ನಾಶಪಡಿಸದಂತೆ, ಪೊಲೀಸ್​ ಠಾಣೆಯ ಅನುಮತಿ ಇಲ್ಲದೇ ಎಲ್ಲಿಯೂ ಹೊರಗಡೆ ಹೋಗದಂತೆ ಕೋರ್ಟ್​ ಷರತ್ತು ವಿಧಿಸಿದೆ.
2018ರಲ್ಲಿ ದಾಖಲಾದ ಕೇಸ್​ ತನಿಖೆ ವೇಳೆ ಜುಬೇರ್​ ನಡೆಸುತ್ತಿರುವ ಕಂಪೆನಿಯು ಪಾಕಿಸ್ತಾನ, ಸಿರಿಯಾ ಮತ್ತು ಇತರೆ ಗಲ್ಫ್ ದೇಶಗಳಿಂದ ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಆಲ್ಟ್ ನ್ಯೂಸ್‌ನ ಪೋಷಕ ಕಂಪೆನಿಯಾಗಿರುವ ಪ್ರವ್ಡಾ ಮೀಡಿಯಾ, ವಿವಿಧ ವರ್ಗಾವಣೆಗಳ ಮೂಲಕ 2 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಪಡೆದುಕೊಂಡಿದೆ. ಅದು ರವಾನೆಯಾಗಿರುವ ಮೊಬೈಲ್ ಫೋನ್ ಸಂಖ್ಯೆ ಅಥವಾ ಐಪಿ ವಿಳಾಸ ವಿದೇಶಗಳದ್ದಾಗಿವೆ. ಜುಬೇರ್ ಅವರು ಪ್ರವ್ಡಾ ಮೀಡಿಯಾದ ನಿರ್ದೇಶಕ ಕೂಡ ಹೌದು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕಾಕ್, ಆಸ್ಟ್ರೇಲಿಯಾ, ನಾರ್ಥ್ ಹಾಲಾಂಡ್, ಸಿಂಗಪುರ, ವಿಕ್ಟೋರಿಯಾ, ನ್ಯೂಯಾರ್ಕ್, ಇಂಗ್ಲೆಂಡ್, ರಿಯಾದ್ ಪ್ರದೇಶ, ಶಾರ್ಜಾ, ಸ್ಟಾಕ್‌ಹೋಮ್, ಅಬುದಾಬಿ, ವಾಷಿಂಗ್ಟನ್, ಕನ್ಸಾಸ್, ನ್ಯೂಜೆರ್ಸಿ, ಒಂಟಾರಿಯೋ, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಲೋವರ್ ಸಾಕ್ಸೋನಿ, ಬೆರ್ನ್, ದುಬೈ, ಸ್ಕಾಟ್ಲೆಂಡ್ ಸೇರಿದಂತೆ ವಿದೇಶಗಳು ಮತ್ತು ನಗರಗಳಿಂದ ಹಲವು ಹಣ ವರ್ಗಾವಣೆಗಳು ನಡೆದಿವೆ. ಇವುಗಳ ಮೊಬೈಲ್ ಫೋನ್ ಸಂಖ್ಯೆ ಅಥವಾ ಐಪಿ ವಿಳಾಸ ಭಾರತದ ಹೊರಗೆ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಈ ಅಂಶಗಳನ್ನು ಪರಿಗಣಿಸಿ, ಜುಬೇರ್‌ಗೆ ಯಾವುದೇ ಸಂದರ್ಭದಲ್ಲಿಯೂ ಜಾಮೀನು ನೀಡಬಾರದು ಎಂದು ಪೊಲೀಸರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ 2018ರ ಕೇಸ್​ನಲ್ಲಿ ದೆಹಲಿಯ ಹೈಕೋರ್ಟ್​ ಜಾಮೀನು ಮಂಜೂರು ಮಾಡಿಲ್ಲ. ಈಗ ಇನ್ನೊಂದು ಕೇಸ್​ನಲ್ಲಿ ಸುಪ್ರೀಂಕೋರ್ಟ್​ನಿಂದ ಜಾಮೀನು ಸಿಕ್ಕಿದೆ.
ಕಾಶ್ಮೀರಿ ಪಂಡಿತರ ನರಮೇಧವನ್ನು ಗೋಕಳ್ಳರ ಮೇಲಿನ ದಾಳಿಗೆ ಹೋಲಿಸಿದ ನಟಿಗೆ ಕೋರ್ಟ್​ನಿಂದ ಮುಖಭಂಗ

ಜಮೀರ್​ ವಿರುದ್ಧ ಎಫ್​ಐಆರ್​: ಶಾಸಕ ಸ್ಥಾನಕ್ಕೆ ಕುತ್ತು? ಇ.ಡಿ ಕೊಟ್ಟಿರೋ ಶಾಕಿಂಗ್​ ಆಸ್ತಿ ಡಿಟೇಲ್ಸ್​ ನೋಡಿ!

ಇನ್​ಸ್ಟಾಗ್ರಾಂನಲ್ಲಿ 3 ತಿಂಗಳ ಲವ್​: ಪ್ರೀತಿಗೆ ಬಿದ್ದು ಜೀವ ಕಳೆದುಕೊಂಡ ಚಿಂತಾಮಣಿ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − one =
Remember me
