ನಾಗ್ಪುರ:ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆ ನೀಡಿದ್ದು, ಇದು ಕೆಲವರಲ್ಲಿ ಸಂಚಲನ ಸೃಷ್ಟಿಮಾಡಿದೆ.
ಆರ್‌ಎಸ್‌ಎಸ್‌ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಈ ವಿಷಯ ಪ್ರಸ್ತಾಪಿಸಿದರು. ಕೆಲವು ಸ್ಥಳಗಳ ಮೇಲೆ ನಾವು ವಿಶೇಷ ಭಕ್ತಿ ಹೊಂದಿದ್ದೇವೆ. ನಾವು ಅವುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಪ್ರತಿ ದಿನವೂ ನಾವು ಹೊಸ ವಿಷಯಗಳನ್ನು ಕೆದಕಬಾರದು. ವಿವಾದವನ್ನು ಏಕೆ ಪ್ರಚೋದಿಸಬೇಕು? ನಮಗೆ ಜ್ಞಾನವಾಪಿ ಕುರಿತು ಭಕ್ತಿ ಇದೆ. ಅದಕ್ಕಾಗಿ ಕೆಲವೊಂದನ್ನು ಮಾಡುತ್ತಿದ್ದೇವೆ. ಅದು ಸರಿ. ಆದರೆ ಪ್ರತಿ ಮಸೀದಿಯಲ್ಲಿಯೂ ಏಕೆ ನಾವು ಶಿವಲಿಂಗವನ್ನು ಹುಡುಕಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.
ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪೂರ್ವದಲ್ಲಿ ಅವರು ಹಿಂದೂಗಳೇ ಆಗಿದ್ದರು. ಆರ್‌ಎಸ್‌ಎಸ್ ಯಾವುದೇ ಮಾದರಿಯ ಆರಾಧನೆಯನ್ನು ವಿರೋಧಿಸಿಲ್ಲ. ನಾವು ಎಲ್ಲರನ್ನೂ ಒಪ್ಪಿಕೊಂಡಿದ್ದೇವೆ ಮತ್ತು ಎಲ್ಲವೂ ಪವಿತ್ರವಾದುದು ಎಂದೇ ಪರಿಗಣಿಸಿದ್ದೇವೆ. ಅವರು ಬೇರೆ ಮಾದರಿಯ ಆರಾಧನೆಯನ್ನು ಒಪ್ಪಿಕೊಂಡಿರಬಹುದು. ಆದರೆ ಅವರು ನಮ್ಮ ಋಷಿ ಮುನಿಗಳು, ಕ್ಷತ್ರಿಯರ ವಂಶಸ್ಥರು. ನಾವೆಲ್ಲರೂ ಒಂದೇ ಪೂರ್ವಜರ ವಂಶಸ್ಥರು ಎಂದು ಮೋಹನ್​ ಭಾಗ್ವತ್​ ಹೇಳಿದರು.
ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರ್‌ಎಸ್‌ಎಸ್‌ ಪಾಲ್ಗೊಂಡಿತ್ತು ನಿಜ. ಕೆಲ ಐತಿಹಾಸಿಕ ಕಾರಣ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ನಾವು ಭಾಗಿಯಾಗಿದ್ದು ನಿಜ. ಆದರೆ ಇನ್ನು ಮುಂದೆ ಈ ರೀತಿಯ ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದರು.
ಜ್ಞಾನವಾಪಿ ವಿಚಾರ ಈಗ ನಡೆಯುತ್ತಿದೆ. ನಾವು ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ. ಇಂದಿನ ಹಿಂದೂಗಳಾಗಲೀ ಅಥವಾ ಮುಸ್ಲಿಮರಾಗಲಿ ಅದನ್ನು ಸೃಷ್ಟಿಸಿದವರಲ್ಲ. ಇಸ್ಲಾಂ ದಾಳಿಕೋರರ ಮೂಲಕ ಹೊರಗಿನಿಂದ ಬಂದಿದೆ. ಈ ದಾಳಿಗಳಲ್ಲಿ, ಭಾರತದ ಸ್ವಾತಂತ್ರ್ಯವನ್ನು ಬಯಸಿದವರ ನೈತಿಕ ಸ್ಥೈರ್ಯವನ್ನು ಹಾಳು ಮಾಡಲು ದೇವಸ್ಥಾನಗಳನ್ನು ನಾಶಪಡಿಸಲಾಯಿತು. ಜ್ಞಾನವಾಪಿ ಮಸೀದಿ ವಿಚಾರವನ್ನು ಹಿಂದೂ ಹಾಗೂ ಮುಸ್ಲಿಮರು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು. ಆದರೆ ಇದು ಎಲ್ಲ ಸಮಯದಲ್ಲೂ ಸಾಧ್ಯವಾಗಲಾರದು. ಹೀಗಾಗಿ ಕೋರ್ಟ್​ನಲ್ಲಾದರೂ ತೀರ್ಪು ಬಂದಾಗ ಸ್ವೀಕಾರ ಮಾಡಬೇಕು ಎಂದು ತಿಳಿಸಿದರು.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂ ದೇವರು ಹಾಗೂ ದೇವತೆಗಳ ವಿಗ್ರಹಗಳಿದ್ದು, ಇದು ಹಿಂದೂಗಳಿಗೆ ಸೇರಿದ್ದು ಎಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಅದರ ಆಧಾರದಲ್ಲಿ ಮಸೀದಿ ಆವರಣದಲ್ಲಿ ವಿಡಿಯೋಗ್ರಫಿ ಸಮೀಕ್ಷೆ ನಡೆಸಲಾಗಿತ್ತು. ಮಸೀದಿ ಒಳಭಾಗದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು ಪ್ರತಿಪಾದಿಸಿದ್ದರು. ಈ ಕುರಿತು ಕಾನೂನು ಹೋರಾಟ ನಡೆಯುತ್ತಿದೆ.
ಅವನೂ ಬೇಡ… ಅವಳೂ ಬೇಡ… ಎಂದು ತನ್ನನ್ನು ತಾನೇ ಮದುವೆಯಾಗಿ ಹನಿಮೂನ್​ಗೂ ರೆಡಿಯಾದ ಯುವತಿ!

VIDEO: ಯುವತಿ ಜತೆ ಮಾಜಿ ಸಚಿವ ಲವ್ವಿಡವ್ವಿ: ಪತ್ನಿ ಕೈಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದು ಪೇಚಾಟ- ವಿಡಿಯೋ ವೈರಲ್

ಕೇಸರಿಧ್ವಜದ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರೋ ಈಶ್ವರಪ್ಪ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 8 =
Remember me
