ನವದೆಹಲಿ:ದೇಶಾದಾದ್ಯಂತ ಕರೊನಾ ಸೋಂಕು ಕ್ಷಣ ಕ್ಷಣಕ್ಕೂ ಏರುಗತಿಯಲ್ಲಿ ಸಾಗಿದೆ. ಇದೇ ಕಾರಣಕ್ಕಾಗಿ ಇದುವರೆಗೆ ಬೃಹತ್ ಸಮಾವೇಶ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೂ ಸರ್ಕಾರ ಅನುಮತಿಯನ್ನು ನೀಡಿಲ್ಲ. ಅದೇ ರೀತಿ ಈ ಬಾರಿಯ ಮೊಹರಂನಲ್ಲಿ ಮೆರವಣಿಗೆ ಮಾಡಲೂ ಅನುಮತಿ ಇಲ್ಲ.ಇದನ್ನು ಪ್ರಶ್ನಿಸಿ ಕೆಲವು ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. ಮೊಹರಂನಲ್ಲಿ ಮೆರವಣಿಗೆ ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ ತಮಗೆ ಅನುಮತಿ ನೀಡಬೇಕು ಎಂದು ಸಂಘಗಳು ಕೋರಿದ್ದವು.ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೊನಾ ಭೀತಿಯ ನಡುವೆ ಮೆರವಣಿಗೆ ನಡೆಸಿದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಅರಿತಿರುವ ಸುಪ್ರೀಂಕೋರ್ಟ್‌ ಅನುಮತಿ ನೀಡುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದೆ.ಮೆರವಣಿಗೆ ಮಾಡಲು ಅವಕಾಶ ಕೊಟ್ಟರೆ ಸೋಂಕು ಹರಡುವಿಕೆ ಹೆಚ್ಚಾಗುತ್ತದೆ. ನಂತರ ಕರೊನಾ ಹೆಚ್ಚಾದರೆ ಒಂದು ಸಮುದಾಯವನ್ನು ದೂಷಿಸಲಾಗುತ್ತದೆ. ಹೀಗಾಗಿ ಮೆರವಣಿಗೆ ಮಾಡಲು ಅವಕಾಶ ಇಲ್ಲ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ಹೇಳಿದೆ.
ಇದನ್ನೂ ಓದಿ:ಕರೊನಾ ಶ್ವಾಸಕೋಶಕ್ಕಷ್ಟೇ ಸೀಮಿತವಾಗಿಲ್ಲ: ವೈರಸ್‌ ಭಯಾನಕತೆ ಬಿಚ್ಚಿಟ್ಟಿದ್ದಾರೆ ಏಮ್ಸ್‌ ತಜ್ಞರುಎಲ್ಲಾ ರೀತಿಯ ನಿಮಯಗಳನ್ನು ಅನುಸರಿಸಿಯೇ ಮೆರವಣಿಗೆ ನಡೆಸಲಾಗುವುದು ಎಂದು ಅರ್ಜಿದಾರರು ಹೇಳಿದ್ದರು. ಅದಕ್ಕೆ ಪೀಠ, ’ಒಂದು ವೇಳೆ ನಾವು ಮೆರವಣಿಗೆಗೆ ಅನುಮತಿ ನೀಡಿದೆವು ಅಂದುಕೊಳ್ಳಿ. ಆಗ ಅವ್ಯವಸ್ಥೆ ಉಂಟಾಗುತ್ತದೆ. ಒಂದು ವೇಳೆ ಕರೊನಾ ಸೋಂಕಿನಲ್ಲಿ ವಿಪರೀತ ಏರಿಕೆ ಕಂಡುಬಂದರೆ ಒಂದು ಸಮಯದಾಯವನ್ನು ಬೊಟ್ಟು ಮಾಡಿ ತೋರಿಸಲಾಗುತ್ತದೆ, ಆ ಸಮುದಾಯವನ್ನು ಗುರಿಯಾಗಿಸಲಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮೆರವಣಿಗೆಗೆ ಅನುಮತಿ ಕೊಡುವುದಿಲ್ಲ ಎಂದು ಹೇಳಿದೆ.ಇಲ್ಲಿಯವರೆಗೆ ಭಾರತದಲ್ಲಿ 3.31 ದಶಲಕ್ಷದಷ್ಟು ಕರೊನಾ ಕೇಸು ಪತ್ತೆಯಾಗುವೆ. ಈ ಪೈಕಿ 2.52 ದಶಲಕ್ಷ ಮಂದಿ ಗುಣಮುಖರಾಗಿದ್ದರೆ, 60,472 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ದಿನವೊಂದಕ್ಕೆ ಸೋಂಕಿತರ ಪ್ರಮಾಣವೂ ಹೆಚ್ಚುತ್ತಲೇ ಸಾಗಿದೆ.
ಡ್ರಗ್ಸ್‌ ನಂಟಲ್ಲಿ ಸ್ಯಾಂಡಲ್‌ವುಡ್‌! ಕೆಲ ನಟರು, ಸಂಗೀತ ನಿರ್ದೇಶಕರ ಮೇಲೆ ಎನ್‌ಸಿಬಿ ನಿಗಾ
ನಾನು ರಾಜಕೀಯಕ್ಕೆ ಬರಲೆ? ಯದುವೀರ್‌ ಟ್ವೀಟ್‌… ಕಮೆಂಟಿಗರ ಉತ್ತರ ಏನು ಗೊತ್ತಾ?
ಕರೊನಾ ಶ್ವಾಸಕೋಶಕ್ಕಷ್ಟೇ ಸೀಮಿತವಾಗಿಲ್ಲ: ವೈರಸ್‌ ಭಯಾನಕತೆ ಬಿಚ್ಚಿಟ್ಟಿದ್ದಾರೆ ಏಮ್ಸ್‌ ತಜ್ಞರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
