ತಂಜಾವೂರು:ಮೇಲ್ಚಾವಣಿ ತೆರೆದು ಮನೆಯೊಳಕ್ಕೆ ನುಗ್ಗಿದ ಮಂಗವೊಂದು ಮನೆಯೊಳಕ್ಕೆ ಮಲಗಿದ್ದ ಎಂಟು ತಿಂಗಳ ಶಿಶುವನ್ನು ಎತ್ತಿಕೊಂಡು ಹೋಗಿರುವ ಭಯಾನಕ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ನಿನ್ನೆ ಈ ಘಟನೆ ನಡೆದಿದೆ. ಮಗು ಅಳುವ ಶಬ್ದ ಕೇಳುತ್ತಿದ್ದಂತೆಯೇ ಮಗುವಿನ ಅಮ್ಮ ಭುವನೇಶ್ವರಿ ಅವರು ಬರುವಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಮಂಗ ಹಾರಿ ಹೋಗಿದೆ. ಇದರಿಂದ ಭಯಭೀತರಾದ ಭುವನೇಶ್ವರಿಯವರು ಜೋರಾಗಿ ಕಿರುಚಿ, ಸಹಾಯಕ್ಕಾಗಿ ಅಂಗಲಾಚಿದರು.
ಅಕ್ಕಪಕ್ಕದವರೆಲ್ಲರೂ ಬಂದು ಮಂಗವನ್ನು ಓಡಿಸಿದ್ದಾರೆ. ಚೀರಾಟಕ್ಕೆ ಹೆದರಿದ ಮಂಗ ಮಗುವನ್ನು ಮೇಲಿನಿಂದ ಎಸೆದು ಬಿಟ್ಟಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ಅದಾಗಲೇ ಪ್ರಾಣ ಕಳೆದುಕೊಂಡಿತ್ತು.
ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿತ್ತು. ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ಕದ್ದೊಯ್ದಿರುವ ಘಟನೆಗಳೂ ಆಗಾಗ್ಗೆ ನಡೆಯುತ್ತಿವೆ. ಆದರೆ ಇದೀಗ ಮಗುವನ್ನು ಹೊತ್ತೊಯ್ದಿರುವುದು ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.
ಹೆಲಿಕಾಪ್ಟರ್‌ ಖರೀದಿಸಿ ಓಡಿಸಬೇಕಿದೆ… ಪ್ಲೀಸ್‌ ಪರವಾನಗಿ ನೀಡಿ: ಮಹಿಳೆಯೊಬ್ಬರಿಂದ ರಾಷ್ಟ್ರಪತಿಗೆ ಮನವಿ

VIDEO: ಪ್ರೇಮಿಗಳ ದಿನದಂದು ದರ್ಶನವಾಯ್ತು ಜ್ಯೂ. ಚಿರು ಮುದ್ದುಮುಖ- ನೀವೂ ನೋಡಿ ಪುಟಾಣಿಯ ಫೋಟೋ‌

ಲಾರಿ, ಬಸ್‌ ನಡುವೆ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: 14 ಮಂದಿ ದುರ್ಮರಣ- ಕೆಲವರ ಸ್ಥಿತಿ ಚಿಂತಾಜನಕ

ರಾಮಸೇತು ನಿರ್ಮಾಣಕ್ಕೆ 48 ಅಡಿ ಉದ್ದದ ಕೇಕ್‌ ಮೇಲೆ ಕಲ್ಲುಹೊತ್ತು ಸಾಗುತಿದೆ ವಾನರಸೇನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 4 =
Remember me
