ತಂಜಾವೂರು (ತಮಿಳುನಾಡು):ಮನೆಯೊಳಕ್ಕೆ ನುಗ್ಗಿ ಚಿನ್ನಾಭರಣ ಲೂಟಿ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮನುಷ್ಯ ಕಳ್ಳರು.
ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಕೋತಿಗಳ ಗುಂಪೊಂದು ಈ ಕೃತ್ಯ ಎಸಗಿದೆ! ಇಂಥದ್ದೊಂದು ಅಚ್ಚರಿಯ ಸಂಗತಿ ನಡೆದಿರುವುದು ತಮಿಳು ನಾಡಿನ ತಂಜಾವೂರಿನ ತಿರುವೈಯಾರುವಿನಲ್ಲಿ. ಈ ಪ್ರಕರಣ ಎಲ್ಲರಿಗೂ ಎಚ್ಚರಿಕೆಯ ಗಂಟೆ ಕೂಡ ಆಗಿದೆ.
ಮಂಗಗಳ ಗುಂಪೊಂದು ಮಹಿಳೆಯೊಬ್ಬರ ಮನೆಗೆ ನುಗ್ಗಿ, ಅವರು ಕೂಡಿಟ್ಟಿದ್ದ 25 ಸಾವಿರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದೆ. ತಮ್ಮ ಜೀವಿತಾವಧಿಯಲ್ಲಿ ದುಡಿದ ಹಣ ಇದಾಗಿತ್ತು ಎಂದು ಮಹಿಳೆ ಕಂಬನಿ ಮಿಡಿಯುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಮಂಗಗಳು ಲೂಟಿ ಮಾಡಲು ಬಂದದ್ದು ಚಿನ್ನಾಭರಣ ಅಥವಾ ದುಡ್ಡನ್ನಲ್ಲ. ಬದಲಿಗೆ ಅದು ಅಕ್ಕಿ ಹಾಗೂ ಬಾಳೆಹಣ್ಣನ್ನು ದೋಚಲು ಬಂದಿತ್ತು. ಆದರೆ ಅಚಾನಕ್‌ ಆಗಿ ದುಡ್ಡು, ಚಿನ್ನವೂ ಅದರ ಪಾಲಾಗಿದೆ.
ಇದನ್ನೂ ಓದಿ:ಜಿ-ಮೇಲ್‌ ವರ್ಕ್‌ ಆಗ್ತಿಲ್ಲ ಎಂದು ಗೋಳಾಡ್ತಿರುವಿರಾ? ಗೂಗಲ್‌ ನೀಡಿದೆ ಸ್ಪಷ್ಟನೆ… ನೋಡಿ…
ಅದು ಹೇಗೆಂದರೆ, ಇಲ್ಲಿನ ವೀರಮಾಂಗುಡಿ ಗ್ರಾಮದ ಕುತಿರಾಯ್‌ ಕೋವಿಳ್‌ ಬೀದಿಯಲ್ಲಿನ ಗುಡಿಸಲೊಂದರಲ್ಲಿ ವಾಸಿಸುವ ಶರತಾಂಬಳ್ ಹೆಸರಿನ ಮಹಿಳೆಯೊಬ್ಬರು ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೋತಿಗಳು ಗುಡಿಸಲೊಳಗೆ ಬಂದು ಬಕೆಟ್‌ನಲ್ಲಿ ಇಟ್ಟಿದ್ದ ಅಕ್ಕಿಯ ಬ್ಯಾಗ್‌ ಹಾಗೂ ಬಾಳೆಹಣ್ಣುಗಳನ್ನು ದೋಚಿಕೊಂಡು ಹೋಗಿವೆ. ಆದರೆ, ಆ ಅಕ್ಕಿ ಬ್ಯಾಗ್‌ನಲ್ಲಿ ಮಹಿಳೆ ತನ್ನ ಜೀವಿತದ ಉಳಿತಾಯ ಹಾಗೂ ಚಿನ್ನವನ್ನು ಇಟ್ಟಿದ್ದರು.
ಕೋತಿಗಳು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿ ಮಹಿಳೆ ಕೂಗಿಕೊಂಡಿದ್ದಾರೆ. ಕೋತಿಗಳನ್ನು ಸ್ಥಳೀಯರು ಬೆನ್ನಟ್ಟಿದಾಗ ಅವುಗಳು ಬ್ಯಾಗ್‌ನೊಂದಿಗೆ ಅಲ್ಲಿಂದ ಪರಾರಿಯಾಗಿವೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ಬಹಳ ಕಷ್ಟಪಟ್ಟು ಈ ಹಣವನ್ನು ಶರತಂಬಾಳ್ ಕೂಡಿಟ್ಟಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ನೌಕರಿ ಹುಡುಕುತ್ತಿದ್ದೀರಾ? ಉದ್ಯೋಗಾಂಕ್ಷಿಗಳಿಗೆ ಗೂಗಲ್‌ ನೀಡಿದೆ ಗುಡ್‌ ನ್ಯೂಸ್‌…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 3 =
Remember me
