ಬೀಜಿಂಗ್:ಕರೊನಾ ತವರು ಚೀನಾದಿಂದ ಇದೀಗ ಮಂಕಿ ಬಿ ವೈರಸ್​ ಪತ್ತೆಯಾಗಿದೆ. ಮಾರ್ಚ್ ಆರಂಭದಲ್ಲಿ ಮೃತಪಟ್ಟ ಎರಡು ಕೋತಿಗಳನ್ನು ಅಧ್ಯಯನ ನಡೆಸಿದ್ದ ಬೀಜಿಂಗ್ ಮೂಲದ 53 ವರ್ಷದ ಪಶುವೈದ್ಯ ಈ ಸೋಂಕಿಗೆ ಬಲಿಯಾಗಿದ್ದಾರೆ.1992ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಈ ಸೋಂಕು ಮತ್ತೆ ಕಾಣಿಸಿಕೊಂಡಿದ್ದು, ಇದೀಗ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಕರೊನಾದಂತೆಯೇ ಇಡೀ ವಿಶ್ವವನ್ನು ವ್ಯಾಪಿಸಬಹುದಾದ ಈ “ಮಂಕಿ ಬಿ ವೈರಸ್” ಕುರಿತು ಸಂಶೋಧಕರು ನೀಡಿರುವ ಒಂದಿಷ್ಟು ಮಾಹಿತಿ ಇಲ್ಲಿದೆ.ಏನಿದು ವೈರಸ್?ಹಳೆಯ ಕೋತಿಗಳ ಕುಲದಿಂದ ಈ ಸೋಂಕು ಹರಡುವುದು ಸ್ಪಷ್ಟವಾಗಿದೆ. ಅದರಲ್ಲಿಯೂ ಮಕಾಕ್, ಚಿಂಪಾಂಜಿ ಮತ್ತು ಕ್ಯಾಪುಚಿನ್ ಜಾತಿಯ ಕೋತಿಗಳಲ್ಲಿ ಈ ಸೋಂಕು ಪತ್ತೆಯಾಗಿವೆ. ಮಂಕಿ ವೈರಸ್​ ಅನ್ನು ಹರ್ಪಿಸ್ ಬಿ, ಮಂಕಿ ಬಿ ವೈರಸ್, ಹರ್ಪಿಸ್ ವೈರಸ್ ಸಿಮಿಯ ಮತ್ತು ಹರ್ಪಿಸ್ ವೈರಸ್ ಬಿ ಎಂದೂ ಕರೆಯುತ್ತಾರೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ಈ ಸೋಂಕು ಮನುಷ್ಯರಿಗೆ ಅಂಟಿಕೊಳ್ಳುವುದು ತೀರಾ ವಿರಳ. 1932ರಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ಇದು ಕಾಣಿಸಿಕೊಂಡಿತ್ತು. ಇವರೆಗೆ 50 ಮಂದಿಯಲ್ಲಿ ಇದು ಕಾಣಿಸಿಕೊಂಡಿದ್ದು 21 ಮಂದಿ ಮೃತಪಟ್ಟಿದ್ದಾರೆ.ಮಂಗಗಳ ಜತೆ ಸಂಪರ್ಕದಲ್ಲಿದ್ದ ಚೀನಾದ ವೈದ್ಯ ಮೃತಪಟ್ಟಿದ್ದು, ಇವರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಯಾರೊಬ್ಬರಿಗೂ ರೋಗದ ಲಕ್ಷಣ ಕಂಡು ಬಂದಿಲ್ಲ ಎನ್ನಲಾಗಿದೆ.ಸೋಂಕು ಹರಡುವುದು ಹೇಗೆ?ಕೋತಿಗಳ ದೇಹದಲ್ಲಿ ಇರುವ ಲಾಲಾರಸ, ಮಲ, ಮೂತ್ರ, ಮೆದುಳು ಅಥವಾ ಬೆನ್ನುಹುರಿ ಅಂಗಾಂಶಗಳು ಹಾಗೂ ಮೇಲ್ಮೈ ಭಾಗಗಳಲ್ಲಿ ಈ ಸೋಂಕು ಇರುತ್ತದೆ. ಇಂಥ ತಳಿಗಳ ಕೋತಿಗಳ ಮೇಲೆ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುವವರು, ಪಶುವೈದ್ಯರು ಸೇರಿದಂತೆ ಕೋತಿಗಳಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿರುವವರಲ್ಲಿ ಇದು ತಗಲುತ್ತವೆ. ಇಲ್ಲದಿದ್ದರೆ ಇದು ಹರಡುವುದು ಅಪರೂಪ.
ಲಕ್ಷಣಗಳೇನು?ಸೋಂಕಿಗೆ ಒಳಗಾದವರಲ್ಲಿ ಒಂದು ದಿನದಿಂದ ಮೂರು ವಾರಗಳವರೆಗೂ ರೋಗ ಲಕ್ಷಣಗಳು ಗೋಚರಿಸುತ್ತವೆ. ಅವೆಂದರೆ ಜ್ವರ ಮತ್ತು ಶೀತ; ಸ್ನಾಯು ನೋವು ಆಯಾಸ; ತಲೆನೋವು; ಸೋಂಕಿತ ವ್ಯಕ್ತಿಯು ಗಾಯದಲ್ಲಿ ಸಣ್ಣ ಗುಳ್ಳೆಗಳು; ಉಸಿರಾಟದ ತೊಂದರೆ; ವಾಕರಿಕೆ ಮತ್ತು ವಾಂತಿ; ಹೊಟ್ಟೆ ನೋವು
ಆರೋಗ್ಯದ ಮೇಲೆ ಪರಿಣಾಮವಿದೆಯೆ?ಒಂದು ಬಾರಿ ಮಂಕಿ ಬಿ ವೈರಸ್ ಸೋಂಕು ಅಂಟಿಕೊಂಡ ವ್ಯಕ್ತಿಯಲ್ಲಿ ಹಲವು ರೀತಿ ಆರೋಗ್ಯ ಸಮಸ್ಯೆಗಳು ಗೋಚರಿಸುತ್ತವೆ. ಅದೇ ರೀತಿ ಸೋಂಕಿನಲ್ಲಿ ಮೆದುಳು ಮತ್ತು ಬೆನ್ನು ಹುರಿ ಊತಕ್ಕೆ ಕಾರಣವಾಗುತ್ತದೆ. ಸ್ನಾಯುಗಳ ಸಮನ್ವಯತೆ ಕೊರತೆ, ನರಮಂಡಲ ಮತ್ತು ಮೆದುಳಿಗೆ ತೀವ್ರ ಹಾನಿ ಉಂಟಾಗುವುದರಿಂದ ಸೋಂಕಿನ ಸಾವು ಸಂಭವಿಸುತ್ತದೆ.ಚಿಕಿತ್ಸೆ ಹೇಗೆ?ಸದ್ಯ ಇದಕ್ಕೆ ಲಸಿಕೆಗಳು ಮತ್ತು ಔಷಧಿಗಳನ್ನು ಕಂಡುಹಿಡಿದಿಲ್ಲ. ಪ್ರತಿಕಾಯ ವ್ಯವಸ್ಥೆಯನ್ನು (ಇಮ್ಯೂನಿಟಿ) ಹೆಚ್ಚಿಸುವ ಔಷಧಿಗಳಿಂದಲೇ ಸೋಂಕಿತರನ್ನು ಗುಣಪಡಿಸಬಹುದು. ಕೋತಿಗಳಿಂದ ಕಚ್ಚಿಸಿಕೊಂಡ ಸಂದರ್ಭದಲ್ಲಿ ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮಂಗಗಳು ಕಚ್ಚಿದರೆ ಸೋಪ್, ಡಿಟರ್ಜೆಂಟ್ ಅಥವಾ ಅಯೋಡಿನ್​ನೊಂದಿಗೆ 15 ನಿಮಿಷಗಳ ಕಾಲ ಗಾಯವನ್ನು ನಿಧಾನವಾಗಿ ತೊಳೆಯಬೇಕು. 15 ರಿಂದ 20 ನಿಮಿಷಗಳ ಕಾಲ ಗಾಯ ಅಥವಾ ಗಾಯದ ಸುತ್ತಲಿನ ಭಾಗದ ಮೇಲೆ ನೀರನ್ನು ಹಾಕಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.
ರಾಯಭಾರಿ ಮಗಳ ಕಿಡ್​ನ್ಯಾಪ್: ಜಾಗತಿಕವಾಗಿ ಪಾಕಿಸ್ತಾನ ತಲೆ ಎತ್ತದಂತೆ ಮಾಡಿದ ಅಫ್ಘಾನಿಸ್ತಾನ್​!
ಪಿಯುಸಿ ಫಲಿತಾಂಶ ಪ್ರಕಟ- ರಿಸಲ್ಟ್​ ನೋಡುವುದು ಹೇಗೆ? ಎಷ್ಟು ಮಂದಿಗೆ ಎಷ್ಟು ಅಂಕ? ಇಲ್ಲಿದೆ ಮಾಹಿತಿ…
ಚಿತ್ರಮಂದಿರ ಓಪನ್​ ಆದ ಖುಷಿಯಲ್ಲಿದ್ದ ಸಿನಿಪ್ರೇಮಿಗಳಿಗೊಂದು ಕಹಿ ಸುದ್ದಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 10 =
Remember me
