ತಿರುವನಂತಪುರ (ಕೇರಳ):ಕರೊನಾದ ಅಬ್ಬರ ಕಡಿಮೆಯಾದರೂ, ಇದು ಸಂಪೂರ್ಣವಾಗಿ ತೊಲಗಲಿಲ್ಲ. ಇದರ ಬೆನ್ನಲ್ಲೇ ಇದೀಗ ಮಂಕಿಪಾಕ್ಸ್ ಮಹಾಮಾರಿ ಭೀತಿ ಶುರುವಾಗಿದೆ. ಇದಾಗಲೇ ಯೂರೋಪ್​ನಲ್ಲಿ ಭಾರೀ ಆತಂಕ ಮೂಡಿಸಿರುವ ಮಂಕಿಪಾಕ್ಸ್ ಲಕ್ಷಣಗಳು ಕೇರಳದ ವ್ಯಕ್ತಿಯೊಬ್ಬರಲ್ಲಿ ಕಂಡುಬಂದಿದೆ. ಕೇರಳ ಕರ್ನಾಟಕದ ನೆರೆಯ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಭೀತಿ ಉಂಟಾಗಿದೆ.
ಮೂರು ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್​ನಿಂದ ಕೇರಳಕ್ಕೆ ಆಗಮಿಸಿರುವ ವ್ಯಕ್ತಿಯಲ್ಲಿ ಈ ಲಕ್ಷಣ ಕಂಡುಬಂದಿದ್ದು, ಭಾರಿ ಆತಂಕ ಮೂಡಿಸಿರುವುದಾಗಿ ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಭಾರತದಲ್ಲಿ ಈವರೆಗೆ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಇದೀಗ ದೇಶದಲ್ಲೇ ಮೊದಲ ಬಾರಿಗೆ ಈ ಲಕ್ಷಣಗಳು ಗೋಚರಿಸಿವೆ. ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿದೆ. ಮಂಕಿಪಾಕ್ಸ್ ರೋಗದ ಲಕ್ಷಣಗಳು ಪತ್ತೆಯಾದ ವ್ಯಕ್ತಿಯ ಮಾದರಿಗಳನ್ನು ಪುಣೆಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಗುರುವಾರ ಸಂಜೆ ವೇಳೆಗೆ ಫಲಿತಾಂಶ ತಿಳಿಯಲಿದೆ ಎಂದು ಸಚಿವೆ ವೀಣಾ ತಿಳಿಸಿದ್ದಾರೆ.
ಜುಲೈ 11 ರ ಹೊತ್ತಿಗೆ ಯುಎಸ್ ವೈರಸ್ ಕಾಯಿಲೆಯ ಸುಮಾರು 800 ಪ್ರಕರಣಗಳನ್ನು ವರದಿ ಮಾಡಿದೆ. ಆದರೆ ಜಾಗತಿಕ ಮಟ್ಟದಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆಯು 57 ದೇಶಗಳಿಂದ 8,200 ಕ್ಕೂ ಹೆಚ್ಚು ಪ್ರಕರಣಗಳನ್ನು ತಲುಪಿದೆ.
ಈ ಸೋಂಕು ತಗುಲಿದ ವ್ಯಕ್ತಿಗಳಿಗೆ ಜ್ವರ, ತಲೆ ನೋವು, ಬೆನ್ನು ನೋವು, ಸ್ನಾಯು ನೋವು, ಚಳಿ ಹಾಗೂ ಬಳಲಿಕೆ, ಜ್ವರದೊಂದಿಗೆ ದೇಹದ ಬೇರೆ ಭಾಗಗಳಿಗೆ ಹರಡುವುದಕ್ಕೂ ಮುನ್ನ,  ಮುಖ, ಕೈ ಕಾಲುಗಳಲ್ಲಿ ದದ್ದು ಹೊರಹೊಮ್ಮುತ್ತದೆ. ಬಳಿಕ ಬಾಯಿಯ ಒಳಗೆ, ಕಾರ್ನಿಯಾ, ಜನನಾಂಗಗಳಲ್ಲೂ ಕಾಣಿಸಿಕೊಳ್ಳಬಹುದಾಗಿದೆ. ಹಲವು ಪ್ರಕರಣದಲ್ಲಿ ದೇಹದ ಚರ್ಮದ ದೊಡ್ಡ ಭಾಗಗಳು ಕಳಚಿ ಬೀಳುವ ಸಾಧ್ಯತೆ ಇದೆ.
ಮನೆಗಳ ನೆಲಸಮಕ್ಕೆ ಬುಲ್ಡೋಜರ್​ ಬದ್ಲು ಓಮ್ನಿ ಬಸ್​ ಬಳಸಲು ಆದೇಶಿಸ್ಬೇಕಾ? ‘ಸುಪ್ರೀಂ’ ತರಾಟೆ

VIDEO: ಹಿಜಾಬ್​ ವಿರುದ್ಧ ಇರಾನ್​ನಲ್ಲಿ ಪ್ರತಿಭಟನೆ- ಬಟ್ಟೆ ಕಿತ್ತೆಸೆದು ಓಪನ್ ಚಾಲೆಂಜ್!​ ಮುಸ್ಲಿಂ ರಾಷ್ಟ್ರ​ ಅಲ್ಲೋಲ ಕಲ್ಲೋಲ

ಯಾರಿಗುಂಟು, ಯಾರಿಗಿಲ್ಲ 25 ಕೋಟಿ ರೂಪಾಯಿ ಗೆಲ್ಲುವ ಅದೃಷ್ಟ: ಓಣಂ ನಿಮಿತ್ತ ಹಣದ ಹೊಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
