ನಾಗ್ಪುರ (ಮಹಾರಾಷ್ಟ್ರ):ಮಹಾರಾಷ್ಟ್ರದ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂ ಒಂದರಲ್ಲಿ ಐದು ಪಟ್ಟು ಹೆಚ್ಚಿಗೆ ಹಣ ಬಂದಿದ್ದು, ಇದು ಸುದ್ದಿಯಾಗುತ್ತಲೇ ಎಟಿಎಂ ಎದುರು ನೂಕು ನುಗ್ಗಲಾಗಿರುವ ಘಟನೆ ನಡೆದಿದೆ.
ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಖಪರ್ಖೇಡಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದ್ದು, ಹೆಚ್ಚಿನ ಹಣ ಪಡೆಯಲು ಜನರು ಎಲ್ಲೆಡೆಯಿಂದ ಆಗಮಿಸಿದ್ದು ವರದಿಯಾಗಿದೆ.
ಆಗಿದ್ದೇನೆಂದರೆ, ಎಟಿಎಂನಿಂದ ಗ್ರಾಹಕರೊಬ್ಬರು 500 ಡ್ರಾ ಮಾಡಿದಾಗ ಅವರಿಗೆ 2,500 ರೂ ಸಿಕ್ಕಿದೆ. ಅಂದರೆ ಐದು ನೋಟು ಬಂದಿತ್ತು. ಅದು ನೂರರ ಐದು ನೋಟು ಎಂದು ಮಾಡಿದರೆ 500 ರೂಪಾಯಿಗಳ ಐದು ನೋಟು ಅದಾಗಿತ್ತು. ಈ ಸುದ್ದಿಯನ್ನು ಅವರು ತಮ್ಮ ಸ್ನೇಹಿತರ ಬಳಿ ಹೇಳಿದಾಗ ಈ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿಬಿಟ್ಟಿದೆ.
ಏನಾಶ್ಚರ್ಯ ಕೆಲವೇ ನಿಮಿಷಗಳಲ್ಲಿ ಎಟಿಎಂ ಎದುರು ಗ್ರಾಹಕರ ಕ್ಯೂ! ಕೆಲವರಿಗೆ ದುಡ್ಡು ಕೂಡ ಸಿಕ್ಕಿತು. ಇಷ್ಟೊತ್ತಿಗಾಗಲೇ ಗ್ರಾಹಕರೊಬ್ಬರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಎಟಿಎಂ ಕ್ಲೋಸ್​ ಮಾಡಿಸಿ ಬ್ಯಾಂಕ್​ಗೆ ಮಾಹಿತಿ ರವಾನಿಸಿದ್ದಾರೆ.
ನಂತರ ಗೊತ್ತಾದದ್ದು ಇಷ್ಟೇ. ತಾಂತ್ರಿಕ ದೋಷದಿಂದ ಎಟಿಎಂನಲ್ಲಿ ಹೆಚ್ಚಿನ ಹಣ ಬರುತ್ತಿತ್ತು ಎಂದು. 100 ರೂ. ಇರಿಸುವ ಜಾಗದಲ್ಲಿ 500 ರೂ. ಇರಿಸಲಾಗಿತ್ತು. ಆದ್ದರಿಂದ ಹೆಚ್ಚಿಗೆ ಹಣ ಬರುತ್ತಿದ್ದುದು ತಿಳಿದಿದೆ. ಕೂಡಲೇ ಬ್ಯಾಂಕ್​ ಸಿಬ್ಬಂದಿ ಎಟಿಎಂಗೆ ಬಂದು ಸರಿಯಾದ ಮುಖಬೆಲೆಯ ನೋಟ್​ ಹಾಕಿದ್ದಾರೆ. ಹೆಚ್ಚುವರಿ ಹಣ ಪಡೆದಿರುವ ಗ್ರಾಹಕರಿಂದ ಯಾವ ರೀತಿ ಹಣ ವಸೂಲು ಮಾಡುತ್ತಾರೋ ಕಾದು ನೋಡಬೇಕಿದೆ.
ಪಿಎಸ್​ಐ ನೇಮಕಾತಿ ಗೋಲ್​ಮಾಲ್​: ಕಲಬುರಗಿ ದಂಪತಿ ಹೈದರಾಬಾದ್​ಗೆ ಎಸ್ಕೇಪ್​- ಜಾಮೀನು ನಕಾರ

ಮಕ್ಕಳನ್ನು ಆಯಾ ಕೈಗೆ ಕೊಟ್ಟು ಹೋಗುತ್ತೀರಾ? ಈ ಭಯಾನಕ ಘಟನೆಯನ್ನೊಮ್ಮೆ ಕೇಳಿ!

ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್​: ಗಂಡ, ಮನೆಯವರಿಗೆ ಹೈಕೋರ್ಟ್​ನಿಂದ ಗುಡ್​ ನ್ಯೂಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 19 =
Remember me
