ಕೈಕಾಲು ಗಟ್ಟಿಯಿದ್ದರೂಕೆಲಸ ಮಾಡದೇ ಸೋಮಾರಿಯಾಗಿರುವವರು ಒಂದೆಡೆಯಾದರೆ, ಎಷ್ಟೇ ದೈಹಿಕ ನ್ಯೂನತೆ ಇದ್ದರೂ ಸ್ವಂತ ದುಡಿಮೆಯ ಬಲದಿಂದಲೇ ಜೀವನ ನಡೆಸುತ್ತಿರುವವರು ಇನ್ನೊಂದೆಡೆ. ಅದೇ ರೀತಿ, ಹೊಟ್ಟೆಪಾಡಿಗಾಗಿ ಅತ್ಯಂತ ಕ್ಲಿಷ್ಟಕರ ಎನ್ನುವ ಕೆಲಸವನ್ನು ಮಾಡಿ ಪ್ರಾಣವನ್ನೇ ಮುಡಿಪಾಗಿರಿಸುವ ಹಲವಾರು ಉದ್ಯೋಗಗಳೂ ನಮ್ಮಲ್ಲಿ ಇವೆ.
ಅಂಥದ್ದೇ ಒಂದು ಅತ್ಯಂತ ಡೇಂಜರ್‌ ಉದ್ಯೋಗ ಎಂದರೆ 90-100 ಅಡಿ ಎತ್ತರದ ಅತ್ಯಂತ ತೆಳ್ಳಗಿನ ಮರಗಳನ್ನು ಹತ್ತಿ, ಅದೇ ರೆಂಬೆಯನ್ನು ಕತ್ತರಿಸುತ್ತಾ ಬರುವುದು!
ನೆನೆಸಿಕೊಂಡರೇನೇ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ? ಸಾಮಾನ್ಯವಾಗಿ ಅತಿ ಎತ್ತಿರದ ತೆಂಗಿನ ಮರ, ತಾಳೆ- ಅಡಿಕೆ ಮುಂತಾದ ಮರಗಳನ್ನು ಹತ್ತಿ ಅದನ್ನು ಕತ್ತರಿಸುವುದು ಎಲ್ಲೆಡೆ ಸಾಮಾನ್ಯವಾಗಿ ಕಾಣಬಹುದಾಗಿದೆ. ಅತ್ಯಂತ ಕೌಶಲಯುಕ್ತ ಕೆಲಸ ಇದಾಗಿದೆ. ಜೀವದ ಹಂಗನ್ನು ತೊರೆದು ಇಂಥ ಮರಕಡಿಯುವ ಕೆಲಸ ಮಾಡುವುದು ಇಂಥ ಕೆಲಸಗಾರರ ಹೊಟ್ಟೆಪಾಡಾಗಿದ್ದರೆ, ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಈ ಮರಗಳನ್ನು ಕಡಿಸಲೇಬೇಕಾಗಿ ಬರುವುದು ಮಾಲೀಕರ ಕರ್ತವ್ಯವಾಗಿರುತ್ತದೆ.
ಇಂಥ ಮರಗಳನ್ನು ಕಡಿಯುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿರುವವರೂ ಇದ್ದಾರೆ. ಆದರೆ ಅದೇ ರೀತಿ ಇಲ್ಲೊಂದು ಕ್ಯಾಲಿಫೋರ್ನಿಯಾದ ವಿಡಿಯೋ ಇದೀಗ ಭಾರಿ ವೈರಲ್‌ ಆಗುತ್ತಿದೆ. ಸುಮಾರು 100 ಅಡಿ ಎತ್ತರದ ತಾಳೆಮರವನ್ನು ಕಡಿಯತ್ತಿರುವ ದೃಶ್ಯ ಇದಾಗಿದೆ.
ಅತ್ಯಂತ ಡೇಂಜರ್‌ ಉದ್ಯೋಗಗಳಲ್ಲಿ ಇದೂ ಒಂದು ಎಂದು ವರ್ಣಿಸಲಾಗಿದೆ. ಆದರೆ ಕೆಲವೇ ಕೆಲವು ನುರಿತರು ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಸ್ವಲ್ಪವೇ ಎಡವಿದರೂ ಪ್ರಾಣಕ್ಕೆ ಸಂಚಕಾರ. ಮರದ ತುದಿಯನ್ನು ಕಡಿದ ಮೇಲೆ ಅದು ಅತ್ತಿತ್ತ ಓಲಾಡುವವರೆ ಸುಮ್ಮನಿದ್ದು, ಮರ ನಿಂತ ಮೇಲೆ ಮತ್ತೆ ಕೆಲಸಗಾರ ಕೆಳಕ್ಕೆ ಇಳಿದು, ಮತ್ತಷ್ಟು ಮರ ಕಡಿಯಬೇಕು. ಹೀಗೆ ಬುಡದವರೆಗೆ ಬರುವವರೆಗೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರಬೇಕು.
ನೋಡಿದವರೇ ಸುಸ್ತಾಗುವ ಈ ವಿಡಿಯೋ ನೀವೂ ನೋಡಿ.
ಅತ್ಯಂತ ಅಪಾಯಕಾರಿ ಎನ್ನುವ ಉದ್ಯೋಗ 100 ಅಡಿ ಎತ್ತರದ ಮರ ಹತ್ತಿ ಅದರ ರೆಂಬೆಯನ್ನೇ ಕಡಿಯುವುದು. ಇಲ್ಲಿದೆ ನೋಡಿ ವಿಡಿಯೋ#job#palmtree#dangourspic.twitter.com/cTv1nCA2tR
— Vijayavani (@VVani4U)January 14, 2021

ಬ್ಯೂಟಿಕ್ವೀನ್‌ ಮೇಲೆ ಗ್ಯಾಂಗ್‌ರೇಪ್‌- ಕೊಲೆ: ಶೌಚಗೃಹದಲ್ಲಿ ಸಿಕ್ಕಿತು ರಕ್ತಸಿಕ್ತ ದೇಹ

ಮಗ ಸತ್ತ ವರ್ಷದ ನಂತರ ಸಿಕ್ತು ಡೆತ್‌ನೋಟ್‌! ಅದರಲ್ಲಿತ್ತು ಪತ್ನಿಯ ಕಾಮಪುರಾಣ

ಅಯ್ಯೋ ನೆನಪಾಗ್ತಲೇ ಇಲ್ಲ ಪಾಸ್‌ವರ್ಡ್‌: ಇನ್ನೆರಡು ಸಲ ತಪ್ಪು ಟೈಪಿಸಿದರೆ ಸಾವಿರಾರು ಕೋಟಿ ಗೋವಿಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 5 =
Remember me
