ನವದೆಹಲಿ:2020… ಅತ್ಯಂತ ಕರಾಳ ವರ್ಷ ಎಂದೇ ಬಿಂಬಿತವಾಗಿರುವ ವರ್ಷವಿದು. ಈ ವರ್ಷದ ಕೊನೆಯ ದಿನದಲ್ಲಿ ನಾವಿದ್ದೇವೆ. ಕರೊನಾ ವೈರಸ್​ ಹಿನ್ನೆಲೆಯಲ್ಲಿ ಮನೆಯಿಂದ ಹೊರಕ್ಕೆ ಹೋಗದವರು ಬಹಳಷ್ಟು ಮಂದಿ. ಮೊದಲೇ ಮನೆಯ ಹೊರಗಡೆ ಹೋಗುವ ಆಲಸ್ಯದಿಂದ ಮನೆಯ ಒಳಗೇ ಕುಳಿತು ಆನ್​ಲೈನ್​ ಮೂಲಕ ತಿಂಡಿ-ತಿನಿಸುಗಳನ್ನು ತರಿಸುವವರೇ ಹೆಚ್ಚು. ಅದರಲ್ಲಿಯೂ ಈ ವರ್ಷ ಕರೊನಾ ಎಂದ ಮೇಲೆ ಕೇಳಬೇಕೆ? ಕರೊನಾ ನೆಪದಲ್ಲಿ ಆನ್​ಲೈನ್​ ಫುಡ್​ಗಳಿಗೆ ಭಾರಿ ಬೇಡಿಕೆ ಕುದುರಿದೆ.
ಅಂದ ಹಾಗೆ ಈ ವರ್ಷ ಅತಿಹೆಚ್ಚು ಆನ್​ಲೈನ್​ ಆರ್ಡರ್​ ಮಾಡಿರುವ ಪಟ್ಟಿಯನ್ನು ಜೊಮ್ಯಾಟೊ ಬಿಡುಗಡೆ ಮಾಡಿದೆ. ಅತಿ ಹೆಚ್ಚು ಆರ್ಡರ್​ ಯಾವ ಆಹಾರಕ್ಕೆ ಆಗಿರಬಹುದು ಎಂದು ನೀವೇನಾದರೂ ಊಹಿಸಬಲ್ಲಿರಾ?
ಕರೆಕ್ಟ್​ ಬಹುತೇಕ ಮಂದಿ ಅಂದುಕೊಂಡಂತೆ ಅದು ಬಿರಿಯಾನಿ. ಬಿರಿಯಾನಿ ಟಾಪ್​1 ಸ್ಥಾನದಲ್ಲಿ ಇದೆ. ಜೊಮ್ಯಾಟೊ ಒಂದರಿಂದಲೇ ಪ್ರತಿ ನಿಮಿಷಕ್ಕೆ 22 ಬಿರಿಯಾನಿ ಆರ್ಡರ್​ಗಳು ಬಂದಿವೆಯಂತೆ. ಇನ್ನು ಬೇರೆ ಬೇರೆ ಆನ್​ಲೈನ್​ ಫುಡ್​ ಕಂಪೆನಿಗಳಿಂದ ಅದೆಷ್ಟು ಬಂದಿವೆಯೋ ಗೊತ್ತಿಲ್ಲ!
ಬಿರಿಯಾನಿ ಎಂದಾಕ್ಷಣ ಚಿಕನ್​, ಮಟನ್​ ಬಿರಿಯಾನಿಗಳೇ ತಲೆಗೆ ಹೊಳೆಯುತ್ತವಲ್ಲವೆ? ಅಂದಹಾಗೆ ಜೊಮ್ಯಾಟೊದಿಂದ ತರಿಸಿಕೊಂಡಿರುವ ಬಿರಿಯಾನಿಗಳ ಪೈಕಿ ಈ ಎರಡು ಬಿರಿಯಾನಿಗಳು ಟಾಪ್​ನಲ್ಲಿ ಇದ್ದರೂ ಸುಮಾರು 19.8 ಲಕ್ಷ ಮಂದಿ ವೆಜ್​ ಬಿರಿಯಾನಿಗಳನ್ನೂ ತರಿಸಿಕೊಂಡಿದ್ದಾರಂತೆ.
ಇದು ಊಟದ ಮಾತಾಯ್ತು. ಇನ್ನು ತಿಂಡಿಯ ವಿಷಯಕ್ಕೆ ಬಂದರೆ ಟಾಪ್​1ನಲ್ಲಿ ಇರುವುದು ಪಿಜ್ಜಾ ಅಂತೆ. ಮೇ ತಿಂಗಳು ಒಂದರಲ್ಲಿಯೇ ಸುಮಾರು 4.5 ಲಕ್ಷ ಪಿಜ್ಜಾ ಆರ್ಡರ್​ ಬಂದಿದ್ದರೆ, ನವೆಂಬರ್​ವರೆಗೆ ಇದರ ಸಂಖ್ಯೆ 17 ಲಕ್ಷಕ್ಕೆ ಏರಿಕೆಯಾಗಿದೆ ಎಂದಿದೆ ಜೊಮ್ಯಾಟೊ.ಮೊಮೊಸ್ ವಿಷಯದಲ್ಲಿ, ದೆಹಲಿ, ಮುಂಬೈ, ಬೆಂಗಳೂರು ಮತ್ತು ಪುಣೆಯಿಂದ 25 ಲಕ್ಷ ಆರ್ಡರ್​ಗಳು ಬಂದಿದ್ದು ಇವು ಟಾಪ್​ ಊರುಗಳಾಗಿವೆ. ಬೆಂಗಳೂರಿನ ನಿವಾಸಿ ಯಶ್​ ಎನ್ನುವವರು ಈ ವರ್ಷ ಜೊಮ್ಯಾಟೊದಲ್ಲಿ 1,380 ಆರ್ಡರ್​ ಮಾಡಿದ್ದಾರಂತೆ! ಅಂದರೆ ದಿನವೊಂದಕ್ಕೆ ಸುಮಾರು ನಾಲ್ಕು ಆರ್ಡರ್​ ಮಾಡಿದಂತೆ ಆಗಿದೆ!
ಸಿಹಿಯ ವಿಷಯದಲ್ಲಿ ಗುಲಾಬ್​ ಜಾಮೂನ್​ ಟಾಪ್​1ರಲ್ಲಿ ಇದ್ದು, ದೀಪಾವಳಿ ಸಮಯದಲ್ಲಿ ಒಂದು ಲಕ್ಷ ಆರ್ಡರ್​ ದೆಹಲಿಯಿಂದ ಬಂದಿದೆ. ಎಲ್ಲವುಗಳಿಗಿಂತಲೂ ದಾರ್ಜಿಲಿಂಗ್​ನಿಂದ ಅತಿ ಹೆಚ್ಚು ಆರ್ಡರ್​ ಆಹಾರದ ವಿಷಯದಲ್ಲಿ ಬಂದಿದೆ ಎಂದಿದೆ ಜೊಮ್ಯಾಟೊ.
ಈ ವರ್ಷ ಟಿಪ್ಸ್​ ರೂಪದಲ್ಲಿ ಮುಂಬೈ ಒಂದರಿಂದಲೇ ಈ ವರ್ಷ 4.6 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆಯಂತೆ. ಟಿಪ್ಸ್​ ನೀಡುವಲ್ಲಿ ಮುಂಬೈ ನಿವಾಸಿಗಳು ಭಾರಿ ಮುಂದು ಎಂದಿರುವ ಜೊಮ್ಯಾಟೊ ಮುಂಬೈ ನಂತರ ಗೋವಾದವರ ವಿಶಾಲ ಹೃದಯದವರು. ಕನಿಷ್ಠ ಎರಡು ಸಾವಿರ ರೂಪಾಯಿ ಟಿಪ್ಸ್​ ನೀಡುತ್ತಾರೆ ಎಂದಿದೆ.
https://www.vijayavani.net/s-nandondu-kathe-patniya-sameepa-31-12/
ಪ್ರೇಯಸಿಯ ಬೆಡ್​ರೂಮ್​ವರೆಗೆ ಗುಟ್ಟಾಗಿ ಸುರಂಗ ತೋಡಿದ ಪತಿಮಹಾಶಯ- ಮುಂದೆ..?

ಪತ್ನಿ ದೈಹಿಕವಾಗಿ ಸಹಕರಿಸುತ್ತಿಲ್ಲವೆಂದು ನಾನೇ ‘ಟೂ ಪೀಸ್’​ ಧರಿಸುತ್ತಿದ್ದೇನೆ- ಇದು ತಪ್ಪಾ?

ಮಗನ ಬದಲು ನಾಯಿಯ ಹೆಸರಿಗೆ ಕೋಟ್ಯಂತರ ರೂಪಾಯಿ ಆಸ್ತಿ ಬರೆದ ರೈತ!

https://www.vijayavani.net/s-nandondu-kathe-patniya-sameepa-31-12/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + twenty =
Remember me
