ನಾಗ್ಪುರ ​(ಮಹಾರಾಷ್ಟ್ರ):ರೈಲಿನಲ್ಲಿರುವ ಶೌಚಗೃಹಕ್ಕೆ ಹೋದ ತಾಯಿ-ಮಗು ಮೃತ‍‍ಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ತುಮ್ಸಾರ್​​ ರೈಲು ನಿಲ್ದಾಣದ ಸಮೀಪ ನಡೆದಿದೆ.
ಮೃತಪಟ್ಟವರು ಪೂಜಾ (27) ಮತ್ತು 18 ತಿಂಗಳ ಅವರ ಮಗು ಅಥರ್ವ್‌. ‍ಇವರು ಮಧ್ಯಪ್ರದೇಶದ ರೇವಾದಲ್ಲಿರುವ ಮಿಲಿಟರಿ ಕಾಲೇಜಿ​​ನ ಪ್ರಾಧ್ಯಾಪಕರಾಗಿರುವ ಪತಿ ಇಶಾಂತ್‌ ಅವರ ಜತೆ ಮಧ್ಯಪ್ರದೇಶದ ರೇವಾದಿಂದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ನಡೆದಿದೆ.
ಆಗಿದ್ದೇನು?ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ವೇಳೆ ಮಗುವಿಗೆ ಶೌಚಗೃಹಕ್ಕೆ ಹೋಗಬೇಕಿತ್ತು. ಆಗ ಮಗುವನ್ನು ಕರೆದುಕೊಂಡು ಪೂಜಾ ಹೋಗಿದ್ದಾರೆ. ಆದರೆ ಎಷ್ಟು ಹೊತ್ತಾದರೂ ವಾಪಸ್‌ ಬರಲಿಲ್ಲ. ಪತಿ ಶೌಚಗೃಹಕ್ಕೆ ಹೋಗಿ ನೋಡಿದಾಗ ಪತ್ನಿ ಮತ್ತು ಮಗು ಕಾಣಿಸಲಿಲ್ಲ. ಎಲ್ಲಿ ಹುಡುಕಾಡಿದರೂ ಸಿಗಲೇ ಇಲ್ಲ. ಆತಂಕಗೊಂಡ ಅವರು ಗೊಂಡಾ ರೈಲು ನಿಲ್ದಾಣದಲ್ಲಿ ದೂರು ದಾಖಲು ಮಾಡಿದರು.
ಪೊಲೀಸರು ತನಿಖೆ ನಡೆಸುತ್ತ ವೇಳೆಯೇ ಅವರಿಗೆ ವೈಗಂಗಾ ನದಿ ಸೇತುವೆ ಮೇಲೆ ಮಹಿಳೆಯೊಬ್ಬ ಶವ ಸಿಕ್ಕಿರುವ ಬಗ್ಗೆ ವರದಿ ಸಿಕ್ಕಿತು, ಜತೆಗೆ ನದಿಯಲ್ಲಿ ಮಗುವಿನ ಮೃತದೇಹವೂ ಇತ್ತು. ತಾಯಿ-ಮಗುವಿನ ಶವಕ್ಕೂ ಇಶಾಂತ್‌ ಅವರು ಹೇಳಿದ ಮಾಹಿತಿಗೂ ತಾಳೆ ಇದ್ದುದರಿಂದ ಮೃತದೇಹವನ್ನು ಗುರುತಿಸಲು ಕರೆದಾಗ ಅದು ತಮ್ಮ ಪತ್ನಿ ಮತ್ತು ಮಗುವಿನ ಶವ ಎಂದು ಹೇಳಿದ್ದಾರೆ ಇಶಾಂತ್‌.
ಕೊನೆಗೆ, ತಿಳಿದುಬಂದದ್ದು ಏನೆಂದರೆ ಮಗುವನ್ನು ಎತ್ತಿಕೊಂಡು ಪೂಜಾ ಅವರು ಹೋದಾಗ ಮಗು ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಅದನ್ನು ರಕ್ಷಿಸಲು ಹೋಗಿ ಪೂಜಾ ಅವರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೂ ಈ ಬಗ್ಗೆ ತನಿಖೆ ಮುಂದುವರೆದಿದೆ. ಇಷ್ಟೆಲ್ಲಾ ನಡೆದರೂ ಅಲ್ಲಿ ಯಾರೂ ಇದನ್ನು ನೋಡಲಿಲ್ಲವೇ ಎಂಬ ಪ್ರಶ್ನೆ ಉಂಟಾಗಿದೆ. ಸೂಕ್ತ ತನಿಖೆಯ ನಂತರವಷ್ಟೇ ನಿಜಾಂಶ ಬೆಳಕಿಗೆ ಬರಬೇಕಿದೆ.
ಅಪ್ಪನ ಅಣ್ಣನಿಗೆ ವಾರಸುದಾರರಿಲ್ಲದಿದ್ದರೆ ಆಸ್ತಿ ತಮ್ಮನ ಮಕ್ಕಳಿಗೆ ಬರುತ್ತಾ? ಕಾನೂನು ಏನು ಹೇಳಿದೆ ನೋಡಿ…

ಸೊಸೆಯ ಅಕ್ರಮ ಸಂಬಂಧಕ್ಕೆ ಸುಟ್ಟು ಕೊಲೆಯಾದ ಅತ್ತೆ-ಮಾವ! ಮಾಜಿ ಸೈನಿಕ ದಂಪತಿಯ ಘೋರ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 10 =
Remember me
