ಬಸ್ತಿ (ಉತ್ತರಪ್ರದೇಶ):ತಾಯಿಯೇ ತನ್ನ ಹೆತ್ತ ಕಂದನನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಆದರೆ ಅಚ್ಚರಿ ಎಂಬಂತೆ ಅರ್ಧಂಬರ್ಧ ಸಮಾಧಿಯಾಗಿದ್ದ ಮಗು ಪವಾಡಸದೃಶವಾಗಿ ಬದುಕಿ ಉಳಿದಿದೆ.
ಬಸ್ತಿಯ ಜಿಲ್ಲಾಸ್ಪತ್ರೆಯ ಬಳಿ ಇಂಥದ್ದೊಂದು ಘಟನೆ ನಡೆದಿದೆ. ಈ ಆಸ್ಪತ್ರೆಯಲ್ಲಿ ಹೆರಿಗೆ ನಂತರ ತಾಯಿಯೊಬ್ಬಳು ಇಂಥ ಹೀನ ಕೃತ್ಯಕ್ಕೆ ಇಳಿದಿದ್ದಾಳೆ. ಮಗು ಹೆಣ್ಣು ಎಂಬ ಕಾರಣಕ್ಕೋ ಅಥವಾ ಇನ್ನಾವ ಕಾರಣವೋ ಏನೋ ಒಟ್ಟಿನಲ್ಲಿ ಮಗು ಹುಟ್ಟಿದ ಬಳಿಕ ಅದನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದರೂ ಮಗು ಬದುಕಿ ಉಳಿದಿದೆ.
ಭೂಮಿಯನ್ನು ಅಗೆದು ಮಗುವನ್ನು ಗುಂಡಿಯೊಳಗೆ ಮುಚ್ಚಲು ಯತ್ನಿಸಿದ್ದಾಳೆ ತಾಯಿ. ಆಗ ಮಗು ಜೋರಾಗಿ ಅತ್ತಿದೆ. ಯಾರಿಗಾದರೂ ಸಂದೇಹ ಬಂದುಬಿಟ್ಟರೆ ಎಂದುಕೊಂಡ ಮಹಿಳೆ ಮಗುವನ್ನು ಅರ್ಧಂಬರ್ಧ ಮಣ್ಣಿನಿಂದ ಮುಚ್ಚಿ ಪರಾರಿಯಾಗಿದ್ದಾಳೆ. ಮಗು ಅಳುತ್ತಲೇ ಇತ್ತು. ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಅಳುವಿನ ಶಬ್ದ ಕೇಳಿದ್ದು, ಅತ್ತ ಹೋದಾಗ ಮಗು ಮಣ್ಣಿನಲ್ಲಿ ಹೂತು ಹೋಗಿರುವುದು ಕಂಡಿದೆ. ಅದರ ದೇಹದ ಅರ್ಧ ಭಾಗವು ಹೊರಗೆ ಮತ್ತು ಅರ್ಧ ನೆಲದೊಳಗೆ ಇತ್ತು.
ಮಹಿಳೆ ಕೂಡಲೇ ಜಿಲ್ಲಾಸ್ಪತ್ರೆಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಅದನ್ನು ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ದಾಖಲು ಮಾಡಲಾಯಿತು. ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿ ಮಗುವಿನ ಜೀವ ಉಳಿಸಿದ್ದಾರೆ.
ಕಾಮಗಾರಿ ಹಿನ್ನೆಲೆಯಲ್ಲಿ ಹಲವಾರು ರೈಲುಗಳ ಸಂಚಾರ ಕೆಲದಿನ ರದ್ದು: ಇಲ್ಲಿದೆ ಮಾಹಿತಿ…

ಕೆಲಸ ಬೇಕೆಂದರೆ ಸೊಸೆಯನ್ನು ಹೊರಹಾಕು ಎಂದ ದೇವಾಲಯ- ಕಲಾವಿದನ ಬಾಳಲ್ಲಿ ಇದೆಂಥ ದುರಂತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 17 =
Remember me
