ಜಾರ್ಖಂಡ್‌: ಒಮ್ಮೊಮ್ಮೆ ಮನುಷ್ಯನ ಮನಸ್ಸು ಎಷ್ಟು ವಿಕೃತಕ್ಕೆ ಹೋಗುತ್ತದೆ ಎನ್ನುವುದಕ್ಕೆ ಜಾರ್ಖಂಡ್‌ನಲ್ಲಿ ನಡೆದಿರುವ ಈ ಭಯಾನಕ ಘಟನೆಯೇ ಸಾಕ್ಷಿ.
35 ವರ್ಷದ ಯುವಕನೊಬ್ಬ ತನ್ನ ತಾಯಿಯನ್ನೇ ಕೊಂದು ಒಲೆಯಲ್ಲಿ ಆಕೆಯನ್ನು ಸುಟ್ಟಿದ್ದೂ ಅಲ್ಲದೇ, ಅದೇ ಚಿತೆಯಲ್ಲಿ ಚಿಕನ್‌ ರೋಸ್ಟ್‌ ಮಾಡಿ ತಿಂದಿದ್ದಾರನೆ! ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಪಶ್ಚಿಮ ಸಿಂಗಭೂಮ್ ಜಿಲ್ಲೆಯಲ್ಲಿ. ಇಂಥ ಕೃತ್ಯ ಎಸಗಿದವರು ಪ್ರಧಾನ್‌ ಎಂಬಾತ. ಈತನ ಕೃತ್ಯಕ್ಕೆ ಬಲಿಯಾದವರು 60 ವರ್ಷದ ಸುಮಿ.
ಕುಡುಕನಾಗಿರುವ ಪ್ರಧಾನ್‌ ಕಳೆದ ಭಾನುವಾರ ಕೂಡ ಕುಡಿದು ಬಂದಿದ್ದಾನೆ. ತಾಯಿ ಸುಮಿ ಅವರ ಜತೆ ಜಗಳ ತೆಗೆದಿದ್ದಾನೆ. ಕುಡಿದು ಮನೆಗೆ ಬರಬೇಡ ಎಂದು ತಾಯಿ ಹೇಳಿದ್ದರು. ಆದರೆ,ಈತ ಕುಡಿದು ಮನೆಗೆ ಬಂದಿದ್ದಕ್ಕೆ ತಾಯಿ ಬಯ್ದಿದ್ದಾರೆ. ಇದೇ ಸಿಟ್ಟಿನಲ್ಲಿದ್ದ ಆತ, ಮರದ ಕೋಲಿನಲ್ಲಿ, ತಾಯಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಅಷ್ಟಕ್ಕೇ ಸುಮ್ಮನಾಗದ ಆತ ತಾಯಿಯ ಮೃತದೇಹವನ್ನು ಒಲೆಯಲ್ಲೇ ದಹಿಸಿದ್ದಾನೆ. ಈ ವೇಳೆ ಅದೇ ಒಲೆಯ ಮೇಲೆ ಚಿಕನ್ ರೋಸ್ಟ್ ಮಾಡಿಕೊಂಡು ತಿಂದಿದ್ದಾನೆ!
ಸುಮಿ ಅವರ ಮೃತದೇಹ ಸಂಪೂರ್ಣವಾಗಿ ಸುಟ್ಟಿರಲಿಲ್ಲ. ಆದ್ದರಿಂದ ಮರುದಿನ ಅದನ್ನು ಸುಡಲು ಪ್ರಯತ್ನಿಸುತ್ತಿರುವ ವೇಳೆ, ಮನೆಗೆ ಸಹೋದರಿ ಬಂದಿದ್ದಾಳೆ. ಈ ಭಯಾನಕ ದೃಶ್ಯ ಕಂಡ ಹೌಹಾರಿದ ಆಕೆ ನೆರೆಹೊರೆಯವರನ್ನು ಕರೆದಿದ್ದಾರೆ. ಬಳಿಕ ಎಲ್ಲರೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿ ಎಲ್ಲಾ ವಿಷಯವನ್ನು ಒಪ್ಪಿಕೊಂಡಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಈತ ತನ್ನ 60 ವರ್ಷದ ತಂದೆ ಗೋಪಾಲ್ ರಾಯ್ ಅವರನ್ನೂ ಕೊಲೆ ಮಾಡಿದ್ದ ಎಂದು ತಿಳಿದುಬಂದಿದೆ.
ಅಜ್ಜನ ಆಸ್ತಿ ನನಗೆ ಸಿಕ್ಕಿದೆ, ತಂಗಿಯಂದಿರಿಗೂ ಇದರಲ್ಲಿ ಪಾಲು ಇದೆಯೆ?

ರೋಗಿಗಳ ಜತೆಯಲ್ಲಿಯೇ ಬೀದಿ ನಾಯಿಗಳ ಕಾರುಬಾರು! ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಎಡವಟ್ಟು

ಮೊದಲ ರಾತ್ರಿಯಿಂದಲೂ ಗಂಡ ತಿರುಗಿ ನೋಡಿಲ್ಲ- ಅವರ ಜತೆ ಹೇಗೆ ಬಾಳಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
