ಭೋಪಾಲ್:ತಾಜ್‌ಮಹಲ್‌ ಎಂದಾಕ್ಷಣ ನೆನಪಾಗುವುದು ಪ್ರೀತಿಯ ಸಂಕೇತ. ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ನಿಧನದ ನಂತರ ಪ್ರೀತಿಯ ಸಂಕೇತವಾಗಿ ಆಗ್ರಾದಲ್ಲಿ ತಾಜ್‍ಮಹಲ್ ಕಟ್ಟಿಸಿ ಉಡುಗೊರೆಯಾಗಿ ನೀಡಿದ್ದ ಎನ್ನಲಾಗುತ್ತದೆ. ಇದೇ ರೀತಿ ಪತ್ನಿಯನ್ನು ಬಹಳವಾಗಿ ಪ್ರೀತಿಸುತ್ತಿರುವ ವ್ಯಕ್ತಿಯೊಬ್ಬರು ತಾಜ್‍ಮಹಲ್ ರೀತಿಯ ಮನೆಯನ್ನು ಕಟ್ಟಿಸಿ ಗಿಫ್ಟ್ ನೀಡಿದ್ದು, ಇದೀಗ ಭಾರಿ ಸುದ್ದಿಯಲ್ಲಿದ್ದಾರೆ.
ಇವರ ಹೆಸರು ಆನಂದ್ ಚೋಕ್ಸೆ. ಇದೇ ರೀತಿ ಮಧ್ಯಪ್ರದೇಶದ ಬುರ್ಹಾನ್‌ಪುರದ ನಿವಾಸಿಯಾಗಿರುವ ಇವರು, ಪತ್ನಿಗಾಗಿ ಥೇಟ್‌ ತಾಜ್‌ಮಹಲನ್ನೇ ಹೋಲುವ ಮನೆ ಕಟ್ಟಿಸಿದ್ದಾರೆ. ಈ ಮನೆಯ ಮೇಲಿರುವ ಗುಮ್ಮಟ 29 ಅಡಿ ಎತ್ತರವಿದ್ದು, ಇದು ತಾಜ್ ಮಹಲ್ ರೀತಿಯೇ ಗೋಪುರ ಹೊಂದಿದೆ. ಈ ಮನೆಯು 4 ಬೆಡ್ ರೂಮ್‍ಗಳದ್ದಾಗಿದ್ದು, ಮನೆ ನಿರ್ಮಾಣಕ್ಕೆ ಮೂರು ವರ್ಷ ಹಿಡಿದಿದೆ.

ಈ ಮನೆ ತಾಜ್‌ಮಹಲ್‌ ರೂಪ ಪಡೆಯಲು ಕಟ್ಟಡ ನಿರ್ಮಾಣಕಾರರು ಪಟ್ಟಿರುವ ಶ್ರಮದ ಬಗ್ಗೆ ಮಾಹಿತಿ ನೀಡುವ ಆನಂದ್‌ ಚೋಕ್ಸೆ, ‘ಮನೆ ನಿರ್ಮಿಸಲು ಮೂರು ವರ್ಷ ಬೇಕಾಯಿತು. ಥೇಟ್‌ ತಾಜ್‌ಮಹಲ್‌ ಮಾದರಿಯ ಮನೆ ಕಟ್ಟುವುದು ಸುಲಭವಲ್ಲ. ಅದಕ್ಕಾಗಿ ಇಂಜಿನಿಯರ್ ಬಹಳ ಶ್ರಮಪಟ್ಟಿದ್ದಾರೆ. ತಾಜ್‍ಮಹಲ್ ಕುರಿತಂತೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಮನೆಯೊಳಗೆ ಕೆತ್ತನೆ ಮಾಡಲು ಬಂಗಾಳ ಮತ್ತು ಇಂದೋರ್‌ನಿಂದ ಕಲಾವಿದರನ್ನು ಕರೆಸಲಾಗಿದೆ. ನೆಲವನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದ್ದು, ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೂರನೆಯ ಮದುವೆಗೆ ಆಮೀರ್‌ ರೆಡಿ- ಅಧಿಕೃತ ಘೋಷಣೆಯೊಂದೇ ಬಾಕಿ? ಮಗಳ ವಯಸ್ಸಿನವಳಾ?

ಏರ್‌ಟೆಲ್‌ ಗ್ರಾಹಕರಿಗೆ ಬಿಗ್‌ ಶಾಕ್‌- ಶೇ.20-25ರಷ್ಟು ಹೆಚ್ಚಾಯ್ತು ಕಾಲಿಂಗ್‌, ಡೇಟಾ ದರಗಳು!

Sign in to your account
Please enter an answer in digits:11 − three =
Remember me
