ಕೋಲ್ಕತಾ:ಹಿಂದೂಗಳ ಮತಕ್ಕಾಗಿ ಹಿಂದೂವನ್ನು ಮದುವೆಯಾಗಿರುವ ಆರೋಪದ ಜತೆ ಹುಟ್ಟಲಿರುವ ಮಗುವಿನ ಅಪ್ಪ ಯಾರೆಂಬ ಗೊಂದಲದಲ್ಲಿ ವಿವಾದಕ್ಕೀಡಾಗಿದ್ದ ಬೆಂಗಾಲಿ ನಟಿ, ಸಂಸದೆ ನುಸ್ರತ್ ಜಹಾನ್ ಇದೀಗ ಕೇಕ್‌ ಮೇಲೆ ತಮ್ಮ ಗಂಡನ ಹೆಸರನ್ನು ಬರೆದಿದ್ದಾರೆ.
ಪ್ರಿಯತಮನಾಗಿರುವ ಯಶ್‍ದಾಸ್‌ ಗುಪ್ತಾ ಅವರ ಹುಟ್ಟುಹಬ್ಬದಂದು ತರಿಸಿರುವ ಕೇಕ್‌ನಲ್ಲಿ ‘ನುಸ್ರತ್ ಜಹಾನ್ ಗಂಡ’ ಎಂದು ಬರೆದುಕೊಂಡಿರುವ ಸಂಸದೆ, ಪರೋಕ್ಷವಾಗಿ ತನ್ನ ಮಗುವಿನ ಅಪ್ಪ ಕೂಡ ಇವರೇ ಎಂದು ಹೇಳಿದ್ದಾರೆ, ಜತೆಗೆ ಇವರೊಂದಿಗೆ ಮದುವೆಯಾಗುವ ಸುಳಿವನ್ನೂ ನೀಡಿದ್ದಾರೆ.
ನುಸ್ರತ್‌ 2019ರ ಜೂನ್ ತಿಂಗಳಿನಲ್ಲಿ ನಿಖಿಲ್ ಜೈನ್ ಜತೆ ಟರ್ಕಿಯಲ್ಲಿ ಮದುವೆಯಾಗಿದ್ದರು. ಭಾರತದಲ್ಲಿ ಮದುವೆಯಾಗಲು ಒಪ್ಪದೇ ಜೈನ್‌ ಅವರನ್ನು ಟರ್ಕಿಗೆ ಕೊಂಡೊಯ್ದಿದ್ದ ಹಿಂದೆ ಉದ್ದೇಶವೇ ಬೇರೆಯಾಗಿತ್ತು ಎಂದು ಗಂಭೀರ ಆರೋಪಗಳೂ ಕೇಳಿಬಂದಿವೆ. ಆಗಿನ್ನೂ ಪಶ್ಚಿಮಬಂಗಾಳದ ಚುನಾವಣೆಗೆ ನಿಂತಿದ್ದ ನುಸ್ರತ್‌ ಹಿಂದೂಗಳ ಮತವನ್ನು ಪಡೆಯುವುದಕ್ಕಾಗಿ ಈ ರೀತಿ ಗಿಮಿಕ್‌ ಮಾಡಿದ್ದಾರೆ ಎನ್ನಲಾಗಿತ್ತು. ಏಕೆಂದರೆ ಈ ಮದುವೆಗೆ ಭಾರತದಲ್ಲಿ ಮಾನ್ಯತೆ ಇರಲಿಲ್ಲ. ಭಾರಕ್ಕೆ ಬಂದ ಮೇಲೂ ಅವರು ಇಲ್ಲಿಯ ಸಂಪ್ರದಾಯದಂತೆ ಮದುವೆಯಾಗಿರಲಿಲ್ಲ. ಕೊನೆಗೆ ಎಲ್ಲರೂ ಕೇಳಿದ್ದ ಪ್ರಶ್ನೆಗೆ ನಾವು ದಂಪತಿ ಅಲ್ಲ,ಬದಲಿಗೆನಮ್ಮದು ಲಿವ್ ಇನ್ ರಿಲೇಷನ್‌ ಎಂದು ಹೇಳಿದ್ದರು.
ಈ ನಡುವೆ ಅವರು ಗರ್ಭಿಣಿಯಾಗಿದ್ದು, ಅದರ ಫೋಟೋ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎಲ್ಲರೂ ಜೈನ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾಗ, ಬೇಸರ ವ್ಯಕ್ತ‍ಪಡಿಸಿದ್ದ ಜೈನ್‌ ಅವರು, ನಾವಿಬ್ಬರೂ ಸೇರದೇ ವರ್ಷವಾಗಿದೆ. ಅದು ನನ್ನ ಮಗು ಹೇಗಾಗುತ್ತೆ ಎಂದು ಪ್ರಶ್ನಿಸಿದ್ದರು. ಇದಾದ ಮೇಲೆ ಮತ್ತೊಂದು ವಿವಾದದಲ್ಲಿ ನುಸ್ರತ್‌ ಸಿಲುಕಿದ್ದರೂ ಮಗುವಿನ ಅಪ್ಪ ಯಾರೆಂದು ಬಾಯಿ ಬಿಟ್ಟಿರಲಿಲ್ಲ. ಆದರೆ ಇವರ ಬಹುಕಾಲದ ಗೆಳೆಯ ಯಶ್‍ದಾಸ್‌ ಗುಪ್ತಾ ಅವರ ಜತೆ ಪುನಃ ಸಂಬಂಧ ಬೆಳೆಸಿದ್ದ ಪರಿಣಾಮ ಗರ್ಭಿಣಿಯಾಗಿದ್ದಾರೆ ಎನ್ನಲಾಗಿತ್ತು. ಇದಕ್ಕೂ ನುಸ್ರತ್‌ ಮೌನವಾಗಿದ್ದರು.
ಆಗಸ್ಟ್ 26ರಂದು ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದರು.ಮಗುವಿನ ಬರ್ತ್ ಸರ್ಟಿಫಿಕೇಟ್‍ನಲ್ಲಿ ಅಪ್ಪನ ಹೆಸರು ಯಶ್ ದಾಸ್ ಗುಪ್ತಾ ಎಂದು ಉಲ್ಲೇಖಿಸಲಾಗಿತ್ತು. ಆದರೂ ಅವರು ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಆದರೆ ಅವರ ಮದುವೆ ಇನ್ನೂ ಆಗಿಲ್ಲ. ಆದರೀಗ ನುಸ್ರತ್‌ ಗಂಡ ಹಾಗೂ ಅದೇ ಕೇಕ್‌ನಲ್ಲಿ ಕೆಳಗೆ ಮಗುವಿನ ಚಿತ್ರ ಹಾಕಿ ಡ್ಯಾಡ್‌ ಎಂದು ಬರೆದುಕೊಂಡಿರುವ ಕಾರಣ, ಇದೀಗ ಯಶ್‌ ಅವರನ್ನೇ ನುಸ್ರತ್‌ ಮದುವೆಯಾಗಲಿದ್ದು, ಮಗುವಿನ ಅಪ್ಪ ಕೂಡ ಅವರೇ ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಚಿಂದಿ ಆಯುವವನಿಂದಾಗಿ ಮರುಜನ್ಮ ಪಡೆದ ಬೆಂಗಳೂರು ಮಕ್ಕಳು! ಸಾಧನೆ ಮಾಡಲು ಮನೆಬಿಟ್ಟವರು ಸಿಕ್ಕಿದ್ದೇ ರೋಚಕ

‘ನಾನು ಅಮ್ಮ ಆಗ್ಬೇಕು, ಶಕುಂತಲಾ ಬೇಗ ಮುಗಿಸಿ’ ಎಂದಿದ್ರು ಸಮಂತಾ: ಡಿವೋರ್ಸ್‌ಗೆ ನಿರ್ಮಾಪಕಿ ಅಚ್ಚರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eight =
Remember me
