ಮಿರ್ಜಾಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಸೋನಭದ್ರ ಕ್ಷೇತ್ರದ ಅಪ್ನಾದಳ್​ ಪಕ್ಷದ ಸಂಸದ ಪಕೋರಿ ಲಾಲ್ ಕೋಲ್, ಅವರ ಪತ್ನಿ ಮತ್ತು ಅವರ ಮಗ ಛನ್ಬೆ ಶಾಸಕ ರಾಹುಲ್ ಕೋಲ್ ಅವರು ಕೆಲ ವರ್ಷಗಳಿಂದ ಗಪ್​ಚುಪ್​ ಆಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.
ಬಡ ರೈತರಿಗೆ ಮೀಸಲು ಇಟ್ಟಿರುವ ಈ ಯೋಜನೆಯ ಫಲವನ್ನು ಇವರು ಪಡೆಯುತ್ತಿದ್ದು, ಆಧಾರ್​ ನಂಬರ್​ ಮತ್ತಿತರ ದಾಖಲೆಗಳಿಂದ ಇದು ಬಯಲುಗೊಂಡಿದೆ. ತಮ್ಮ ಗುರುತನ್ನು ಮರೆಮಾಚಿ ಕೆಲವು ದಾಖಲೆಗಳನ್ನು ತಿರುಚಿ ಕಿತಾಪತಿ ಮಾಡಿರುವುದು ಕೇಂದ್ರ ಸರ್ಕಾರದ ಪರಿಶೀಲನಾ ವರದಿಯಲ್ಲಿ ಬಹಿರಂಗವಾಗಿದೆ. ಆದರೆ ತಮಗೆ ಇದು ಗೊತ್ತೇ ಇಲ್ಲ ಎನ್ನುತ್ತಿದೆ ಈ ಕುಟುಂಬ!
ಮಡಿಹಾನ್ ತೆಹಸಿಲ್‌ನ ಪತೇರಾ ಕಾಲಾ ನಿವಾಸಿಗಳಾಗಿರುವ ಸಂಸದ ಪಕೋರಿ ಲಾಲ್ ಅವರು ತಮ್ಮ ಮಗ ಮತ್ತು ಪತ್ನಿ ಪನ್ನಾ ದೇವಿ ಅವರ ಹೆಸರನ್ನು 2019ರ ಆಗಸ್ಟ್​ 21ರಂದು ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಸಂಸದ ಮತ್ತು ಪತ್ನಿ ಹೆಸರಿಗೆ ಇದಾಗಲೇ ಒಂಬತ್ತು ಕಂತುಗಳ ಹಣ ಹೋಗಿದೆ. ಮಗ ಮಾತ್ರ ಇದುವರೆಗೆ ಆಧಾರ್​ ಕಾರ್ಡ್​ ಲಿಂಕ್​ ಮಾಡಿರಲಿಲ್ಲ. ಅದಕ್ಕೆ ಅವರ ಹಣ ಪೆಂಡಿಂಗ್​ನಲ್ಲಿ ಇರುವುದು ಪರಿಶೀಲನಾ ವರದಿಯಿಂದ ತಿಳಿದುಬಂದಿದೆ.
ಈ ಗೋಲ್​ಮಾಲ್​ ಕುರಿತು ಮಾತನಾಡಿರುವ ಕೃಷಿ ಇಲಾಖೆಯ ಉಪನಿರ್ದೇಶಕರು, ಶಾಸಕ ರಾಹುಲ್ ಪ್ರಕಾಶ್ ಕೋಲ್ ಅವರು ಆಧಾರ್​ ಲಿಂಕ್​ ಮಾಡಿರದ ಕಾರಣ, ಸದ್ಯ ಅವರಿಗೆ ಒಂದೇ ಒಂದು ಕಂತಿನ ಹಣವೂ ಬಿಡುಗಡೆಯಾಗಲಿಲ್ಲ. ಆದರೆ ಸಂಸದ ಮತ್ತು ಪತ್ನಿಯ ಖಾತೆಗೆ ಇದಾಗಲೇ 9 ಕಂತು ಹೋಗಿದೆ. ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಈ ವಿಷಯ ಬೆಳಕಿಗೆ ಬರುತ್ತಲೇ ಇದೇ ರೀತಿ ಮೋಸದಿಂದ ಹಣ ಪಡೆಯುತ್ತಿರುವವರ ಸಂಖ್ಯೆ ಇನ್ನೂ ಹೆಚ್ಚಿನ ರೀತಿಯಲ್ಲಿ ಇರಬಹುದು ಎಂದು ಗುಮಾನಿ ಅಧಿಕಾರಿಗಳಿಗೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಶುರು ಮಾಡಿದ್ದಾರೆ. ಇದೇ ವೇಳೆ ಸಂಸದ ಮತ್ತು ಪತ್ನಿಗೆ ನೀಡಿರುವ 9 ಕಂತುಗಳ ಹಣವನ್ನು ವಾಪಸ್​ ಪಡೆಯಲು ತೀರ್ಮಾನಿಸಲಾಗಿದೆ.
ಅನೇಕ ರೈತರ ಬಗ್ಗೆಯೂ ತನಿಖೆಯಾಗುತ್ತಿದೆ. ಯಾರು ಅನರ್ಹರು ಹಾಗೂ ಮರಣ ಹೊಂದಿರುವವರ ಖಾತೆಗೆ ಬರುತ್ತಿರುವ ಹಣವನ್ನು ನಿಲ್ಲಿಸಲಾಗುವುದು. ಇದರೊಂದಿಗೆ ಮರುಪರಿಶೀಲನೆ ಮಾಡಲಾಗುವುದು ಎಂದು ಕೃಷಿ ಇಲಾಖೆಯ ಉಪನಿರ್ದೇಶಕರು ಹೇಳಿದ್ದಾರೆ.
ಅನರ್ಹರು ನಿಧಿಯನ್ನು ದುರುಪಯೋಗಪಡಿಸಿಕೊಂಡು ಪ್ರಯೋಜನ ಪಡೆಯಬಾರದು ಎಂದು ಸರ್ಕಾರ ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರೂ ಖುದ್ದು ಸಂಸದರೇ ಇಂಥದ್ದೊಂದು ಲೋಪ ಮಾಡಿರುವುದಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ.(ಏಜೆನ್ಸೀಸ್​)
ಲಾಲ್​ಬಾಗ್​ನಲ್ಲಿ ಅಪ್ಪು ಪುತ್ಥಳಿ ಅನಾವರಣ- ಕರ್ನಾಟಕ ರತ್ನ ಪ್ರಶಸ್ತಿ ಡೇಟ್​ ಫಿಕ್ಸ್​: ಸಿಎಂ ಘೋಷಣೆ

ನಕಲಿ ಮದ್ಯ ಸೇವಿಸಿ ಏಳು ಮಂದಿ ಸಾವು: ಕಣ್ಣು ಕಳೆದುಕೊಂಡ 25ಕ್ಕೂ ಅಧಿಕ ಜನ

ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಸೋರುತಿದೆ ವಿಜಯ ಮಲ್ಯ ನೀಡಿದ್ದ ಚಿನ್ನದ ಲೇಪಿತ ಚಾವಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 2 =
Remember me
