ನವದೆಹಲಿ:ದೆಹಲಿ ಕರ್ನಾಟಕ ಸಂಘ ರಾಜಧಾನಿ ದೆಹಲಿಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಬಾರಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಂಡು ದೆಹಲಿ ಕನ್ನಡಿಗರ ಗಮನ ಸೆಳೆದಿದ್ದಾರೆ.
ಕರ್ನಾಟಕ ಸಂಘ ಪ್ರತಿ ವರ್ಷ ಕ್ರಿಕೆಟ್ ಕೂಟ ಏರ್ಪಡಿಸುತ್ತದೆ. ಆದರೆ, ಈ ಬಾರಿ ಪ್ರಜ್ವಲ್ ರೇವಣ್ಣ ಪಾಲ್ಗೊಂಡದ್ದರಿಂದ ಪಂದ್ಯಾವಳಿಗೆ ಹೊಸ ಕಳೆ ಬಂದಿತ್ತು. ಅವರು ಕನ್ನಡ ಸಿರಿ ಎಂಬ ತಂಡದ ಸದಸ್ಯರಾಗಿ ಕಣಕ್ಕಿಳಿದು, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಪ್ರಜ್ವಲ್ ರೇವಣ್ಣ, ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು. ಸಂಸದರಾಗಿದ್ದರೂ, ನಮ್ಮೆಲ್ಲರೊಂದಿಗೆ ಸರಳತೆಯಿಂದ ಬೆರೆತು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದು ಖುಷಿ ಕೊಟ್ಟಿತು ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಸಿ.ಎಂ. ನಾಗರಾಜ್ ಹರ್ಷ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣ ಅವರು ಕ್ರಿಕೆಟ್ ಆಡುತ್ತಾರೆ ಎಂದು ಗೊತ್ತಿರಲಿಲ್ಲ. ಆದರೆ ಪಂದ್ಯಾವಳಿಗೆ 2 ದಿನಕ್ಕೆ ಮುನ್ನ ಅವರು ಹೊಳೆನರಸೀಪುರದ ಕ್ರಿಕೆಟ್ ಪಂದ್ಯವೊಂದರಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ವಿಡಿಯೋ ಬಂದಿತ್ತು. ಅದನ್ನು ನೋಡಿ ತಕ್ಷಣವೇ ಪ್ರಜ್ವಲ್ ರಿಗೆ ಫೋನ್ ಮಾಡಿ ನಮ್ಮ ತಂಡದಲ್ಲಿ ಅಡುವಂತೆ ಕೇಳಿದೆ. ಅವರು ತಕ್ಷಣವೇ ಒಪ್ಪಿ ಬರುತ್ತೇನೆ ಎಂದರು ಎಂದು ಕನ್ನಡ ಸಿರಿ ತಂಡದ ಸದಸ್ಯ ಹರೀಶ್ ತಿಳಿಸಿದರು.
ಮೈಮುಲ್​ ಚುನಾವಣೆ: ಮತದಾನ ಕೇಂದ್ರದಲ್ಲೇ ಎಚ್​ಡಿಕೆ v/s ಜಿಟಿಡಿ ಬೆಂಬಲಿಗರ ನಡುವೆ ಗಲಾಟೆ

ಮದುವೆ ಮುಗೀತಿದ್ದಂಗೆ ಪೊಲೀಸ್ರು ಕೊಟ್ರು ಎಂಟ್ರಿ- ವರನ ಕಡೆಯವರಿಗೆ ಹಾಕಿದ್ರು 50 ಸಾವಿರ ರೂ. ದಂಡ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − one =
Remember me
