ಜತಾರಾ (ಮಧ್ಯಪ್ರದೇಶ):ತನಗೆ ಇಷ್ಟವಿಲ್ಲದಿದ್ದರೂ ಗಂಡ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಬಂದ ಕಾರಣ, ಸಿಟ್ಟುಗೊಂಡ ಪತ್ನಿ ಆತನ ಮರ್ಮಾಂಗವನ್ನೇ ಕತ್ತರಿಸಿರುವ ಭಯಾನಕ ಘಟನೆ ಮಧ್ಯಪ್ರದೇಶದ ಜತಾರಾದಲ್ಲಿ ನಡೆದಿದೆ.ಟಿಕಮ್​​ಗಢ ಜಿಲ್ಲೆಯಿಂದ 40 ಕಿಮೀ​ ದೂರದ ಜತಾರಾ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮನಗರದಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ಕ್ರಿಯೆ ನಡೆಸುವುದು ಬೇಡ ಎಂದರೂ ಕೇಳದ ಪತಿ, ಇದಕ್ಕೆ ಮುಂದಾದಾಗ ಮಹಿಳೆ ಕೋಪದಿಂದ ಈ ರೀತಿ ಮಾಡಿದ್ದು, 26 ವರ್ಷದ ಪತಿ ಮರ್ಮಾಂಗ ಕಳೆದುಕೊಂಡಿದ್ದು, 24 ವರ್ಷದ ಪತ್ನಿ ವಿರುದ್ಧ ಪೊಲೀಸರಲ್ಲಿ ಗಂಡ ದೂರು ದಾಖಲು ಮಾಡಿದ್ದಾನೆ.2019ರಲ್ಲಿ ಇಬ್ಬರು ಮದುವೆಯಾಗಿದೆ. ಆದರೆ ಆರಂಭದಿಂದಲೂ ದಂಪತಿ ನಡುವೆ ಜಗಳವಾಗುತ್ತಿತ್ತು. ಆದ್ದರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೂ ಪತಿ ಲೈಂಗಿಕ ಕ್ರಿಯೆಗೆ ಬಲವಂತ ಮಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಪತ್ನಿ ಹರಿತವಾದ ಆಯುಧದರಿಂದ ಮರ್ಮಾಂಗ ಕತ್ತರಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮರ್ಮಾಂಗ ಹಿಡಿದು ಬಂದ ಪತಿ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಮುಂದುವರೆದಿದೆ. ಪತ್ನಿ ವಿರುದ್ಧ ಐಪಿಸಿ ಸೆಕ್ಷನ್​​ 324ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಪತ್ನಿ ಇನ್ನಿಲ್ಲ- ‘ನನ್ನ ತೇಜಸ್ವಿ’ ಮೂಲಕ ಮನೆಮಾತಾಗಿದ್ದ ರಾಜೇಶ್ವರಿ ಅಮ್ಮಾ: ದೇಹದಾನಕ್ಕೆ ಸಿದ್ಧತೆ
‘ಶಾಂತಿ ಮಂತ್ರ ಪಠಿಸುತ್ತಾ ಕುಳಿತುಕೊಂಡ್ರೆ ಆಗಲ್ಲ, ಗೋ ರಕ್ಷಣೆ ಮಾಡೋದಿದ್ರೆ ಕೈಯಲ್ಲಿ ತಲ್ವಾರ್‌ ಹಿಡಿಯಿರಿ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 1 =
Remember me
