ಕೊಚ್ಚಿ (ಕೇರಳ):ಪತ್ನಿಯನ್ನು ಅಕ್ಕ ಪಕ್ಕದ ಮಹಿಳೆಯರಿಗೆ ಅಥವಾ ಇನ್ನಾವುದೋ ಸ್ತ್ರೀಯರ ಜತೆ ಹೋಲಿಗೆ ಮಾಡಿ ವ್ಯಂಗ್ಯವಾಡುವುದು, ಇದನ್ನೇ ಮುಂದು ಮಾಡಿಕೊಂಡು ಆಕೆಯನ್ನು ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮವಾಗಿದೆ ಎಂದು ಕೇರಳ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಪತಿ ಈ ರೀತಿ ಮಾಡುತ್ತಿದ್ದರೆ ಅದನ್ನು ಪತ್ನಿಯಾದವಳು ಸಹಿಸಿಕೊಳ್ಳಬೇಕಿಲ್ಲ. ಏಕೆಂದರೆ ಇದು ಮಾನಸಿಕ ಕ್ರೌರ್ಯವಾಗಿದೆ, ಇಂಥ ಸಂದರ್ಭಗಳಲ್ಲಿ ಮದುವೆಯನ್ನು ಅನೂರ್ಜಿತಗೊಳಿಸಲಾಗುವುದು ಎಂದು ಕೋರ್ಟ್​ ಹೇಳಿದೆ.
ಕೇರಳದ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ಈ ರೀತಿಯಾಗಿ ತೀರ್ಪು ನೀಡಿದೆ. ಪತ್ನಿಯಾದವಳು ತನ್ನ ನಿರೀಕ್ಷೆಗೆ ತಕ್ಕಂತೆ ಇಲ್ಲ ಎನ್ನುವ ಕಾರಣಕ್ಕೋ ಅಥವಾ ಇನ್ನಾವುದೋ ಮಹಿಳೆಯರನ್ನು ಹೋಲಿಕೆ ಮಾಡುವ ಮೂಲಕ ಹಿಂಸೆ ನೀಡಿದರೆ ಅದನ್ನು ಪತ್ನಿ ಸಹಿಸಿಕೊಳ್ಳುವುದು ಸರಿಯಲ್ಲ ಎಂದು ಕೋರ್ಟ್​ ಹೇಳಿದೆ.
ಈ ಪ್ರಕರಣದಲ್ಲಿ ದಂಪತಿ 13 ವರ್ಷ ಬೇರೆ ಬೇರೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಕೌಟುಂಬಿಕ ಕೋರ್ಟ್​ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಈ ಆದೇಶದ ವಿರುದ್ಧ ಪತಿ ಹೈಕೋರ್ಟ್​ ಮೆಟ್ಟಿಲೇರಿದ್ದ. ಆದರೆ ಪತಿಯ ಮೇಲ್ಮನವಿಯನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ.
‘ಮದುವೆಯಾದಾಗಿನಿಂದಲೂ ನನ್ನ ಪತಿ ನನ್ನನ್ನು ಉಳಿದ ಹೆಂಗಸರಿಗೆ ಹೋಲಿಸುತ್ತಿದ್ದರು. ನಾನು ಉಳಿದ ಹೆಂಗಸರಂತೆ ಚೆನ್ನಾಗಿಲ್ಲ ಎಂದೂ, ಅವರ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಹೀಯಾಳಿಸುತ್ತಲೇ ಬಂದಿದ್ದಾರೆ. ನಾನು ನೋಡಲು ಚೆನ್ನಾಗಿ ಇಲ್ಲವೆಂದು ಅಪಹಾಸ್ಯ ಮಾಡುತ್ತಲೇ ಬಂದಿದ್ದು, ದೈಹಿಕ ಸಂಪರ್ಕವನ್ನೂ ಸರಿಯಾಗಿ ಮಾಡಲಿಲ್ಲ, ನನ್ನನ್ನು ದೂರವೇ ಇಡುತ್ತಿದ್ದರು. ಈ ಹಿನ್ನೆಲೆಯಲ್ಲಿ ದೌರ್ಜನ್ಯ ಸಹಿಸಿಕೊಳ್ಳಲು ಸಾಧ್ಯವಾಗದೇ ನಾನು ಅವರನ್ನು ಬಿಟ್ಟು ಹೋಗಿದ್ದೆ’ ಎಂದು ಪತ್ನಿ ಕೋರ್ಟ್​ಗೆ ತಿಳಿಸಿದಳು. ಇದನ್ನು ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಮತ್ತು ಸಿ.ಎಸ್. ಸುಧಾ ಅವರ ಪೀಠವು ಗಂಭೀರವಾಗಿ ಪರಿಗಣಿಸಿತು.
ದಂಪತಿ ಸುದೀರ್ಘವಾಗಿ ಬೇರ್ಪಟ್ಟ ಕಾರಣದಿಂದ ಈ ವಿವಾಹವನ್ನು ಅನೂರ್ಜಿತಗೊಳಿಸಲಾಗುವುದು ಎಂದು ಕೌಟುಂಬಿಕ ಕೋರ್ಟ್​ ಹೇಳಿತ್ತು. ಆದರೆ ಪತಿ ನೀಡುತ್ತಿದ್ದ ಮಾನಸಿಕ ಹಿಂಸೆ ಗಮನಿಸಿದ ಹೈಕೋರ್ಟ್​, ‘ವಿವಾಹ ಅನೂರ್ಜಿತಗೊಳಿಸಿರುವ ಕೌಟುಂಬಿಕ ಕೋರ್ಟ್​ ಆದೇಶ ಸರಿಯಾಗಿಯೇ ಇದೆ, ಆದರೆ ಕಾರಣ ಅದಲ್ಲ, ಬದಲಿಗೆ ಪತ್ನಿಗೆ ಮಾನಸಿಕ ಹಿಂಸೆ ನೀಡಿರುವ ಕಾರಣದಿಂದ ವಿವಾಹವನ್ನು ಅನೂರ್ಜಿತಗೊಳಿಸಲಾಗಿದೆ’ ಎಂದು ಹೇಳಿತು.
ತನ್ನ ಹೆಂಡತಿಯು ತಾನು ಬಯಸಿದಂತೆ ಇಲ್ಲ ಎಂದು ಅರ್ಜಿದಾರನು ಪತ್ನಿಯ ವಿರುದ್ಧ ನಿರಂತರ ಮತ್ತು ಪುನರಾವರ್ತಿತವಾಗಿ ಅಪಹಾಸ್ಯ ಮಾಡಿದ್ದು ಮತ್ತು ಇತರ ಮಹಿಳೆಯರೊಂದಿಗೆ ಆಕೆಯನ್ನು ಹೋಲಿಸಿದ್ದು ಇತ್ಯಾದಿಗಳು ಖಂಡಿತವಾಗಿಯೂ ಮಾನಸಿಕ ಕ್ರೌರ್ಯವಾಗಿವೆ. ಇದನ್ನು ಹೆಂಡತಿಯಾದವಳು ಸಹಿಸಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದೂ ನ್ಯಾಯಮೂರ್ತಿಗಳು ಹೇಳಿದರು.(ಏಜೆನ್ಸೀಸ್​)
ವಿಚ್ಛೇದನಕ್ಕೆಂದು ಬಂದ ಐವರು ತುಮಕೂರಿನ ದಂಪತಿ, ಹಾರ ಬದಲಿಸಿಕೊಂಡು ಜತೆಯಾಗಿ ಹೋದರು!

ಶಿಕ್ಷೆ ವಿಧಿಸಲು ಸಂತ್ರಸ್ತರು ಸಾಯುವ ಮುನ್ನ ನೀಡುವ ಹೇಳಿಕೆಯೇ ಸಾಕು: ಹೈಕೋರ್ಟ್​ನಿಂದ ಮಹತ್ವದ ತೀರ್ಪು

ಬಿಹಾರದ ಹೊಸ ಸರ್ಕಾರ ಅಲ್ಲೋಲ ಕಲ್ಲೋಲ: ಕಾನೂನು ಸಚಿವ ಕಿಡ್ನಾಪರ್​? ಶೇ.72 ಮಂದಿ ಮೇಲೆ ಕ್ರಿಮಿನಲ್​ ಕೇಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
