ನವದೆಹಲಿ: ಮಿಸ್‌ ವರ್ಲ್ಡ್‌, ಮಿಸ್‌ ಯೂನಿವರ್ಸ್‌ ಸ್ಪರ್ಧೆಯ ಬೆನ್ನಲ್ಲೇ ಇದೀಗ ಮಿಸಸ್‌ ವರ್ಲ್ಡ್‌ ಸ್ಪರ್ಧೆಗೆ ಭರ್ಜರಿ ತಯಾರಿ ನಡೆದಿದೆ. ಇದಾಗಲೇ ಮಿಸೆಸ್‌ ವರ್ಲ್ಡ್‌ ಆಗಿ ಹೊರಹೊಮ್ಮಿರುವ ನವದೀಪ್‌ ಕೌರ್‌ ಮಿಸಸ್‌ ವರ್ಲ್ಡ್‌ ಸ್ಪರ್ಧೆಗೆ ಹೋಗಲು ಅಣಿಯಾಗಿದ್ದಾರೆ.
ಲಾಸ್ ವೇಗಾಸ್‌ನಲ್ಲಿ ನಡೆಯಲಿರುವ ಮಿಸೆಸ್ ವರ್ಲ್ಡ್ 2022 ಸ್ಪರ್ಧೆ ನಡೆಯಲಿದೆ. ಒಡಿಶಾದ ಚಿಕ್ಕ ಗ್ರಾಮದಿಂದ ಹೊರಹೊಮ್ಮಿರುವ ಪ್ರತಿಭೆ ನವದೀಪ್‌ ಕೌರ್‌. ಹೊರಜಗತ್ತಿಗೆ ಅರಿವೇ ಇಲ್ಲದ ಚಿಕ್ಕಹಳ್ಳಿಯಿಂದ ಬಂದು ಮಿಸೆಸ್‌ ಇಂಡಿಯಾ ಆಗುವ ಮೂಲಕ ಫ್ಯಾಷನ್ ಲೋಕದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿರುವ ನವದೀಪ್‌ ಕೌರ್‌ ಅವರ ಮೇಲೆ ಇಡೀ ಫ್ಯಾಷನ್‌ ಲೋಕದ ಕಣ್ಣು ನೆಟ್ಟಿದೆ.
ಯಾರೀ ನವದೀಪ್‌ ಕೌರ್‌?ಒಡಿಶಾದ ಗ್ರಾಮವೊಂದರ ನವದೀಪ್‌ ಕೌರ್‌ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರೆ. ನಂತರ ನಂತರ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ(ಎಂಬಿಎ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬ್ಯಾಂಕ್ ಒಂದರಲ್ಲಿ ವ್ಯವಸ್ಥಾಪಕರಾಗಿ ದುಡಿದು ನಂತರ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಸಾವಿರ ಮಕ್ಕಳನ್ನು ಶಿಕ್ಷಣಕ್ಕಾಗಿ ದತ್ತು ತೆಗೆದುಕೊಂಡಿರುವ ಲೇಡೀಸ್ ಕ್ಲಬ್ ಇಂಡಿಯಾದ ಸದ್ಭಾವನಾ ರಾಯಭಾರಿಯೂ ಆಗಿರುವ ಕೌರ್‌ ಅವರಿಗೆ 6 ವರ್ಷದ ಮಗಳಿದ್ದಾಳೆ. ಬಿಡುವಿನ ಸಮಯದಲ್ಲಿ ಕೌರ್ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ತೊಡಗಿಕೊಳ್ಳುತ್ತಾರೆ.
ಮಾವನ ಎದುರಾಳಿಯಾದ ಸೊಸೆ? ಬಿಜೆಪಿ ತತ್ವಕ್ಕೆ ಮನಸೋತು ಎಸ್‌ಪಿ ಬಿಟ್ಟ ಮುಲಾಯಂ ಮಗನ ಪತ್ನಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
