ನವದೆಹಲಿ: ಭಾರತದ ವಿಕೆಟ್‌ಕೀಪರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್​ಗೆ ಹರಿಯಾಣದ ಮಾಜಿ ಕ್ರಿಕೆಟಿಗ ಮೃಣಾಕ್ ಸಿಂಗ್, 1.63 ಕೋಟಿಗೂ ಅಧಿಕ ಹಣವನ್ನು ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಮೃಣಾಕ್ ಸಿಂಗ್ 1 ಕೋಟಿ 63 ಲಕ್ಷ ಚೆಕ್ ಬೌನ್ಸ್ ಮಾಡುವ ಮೂಲಕ ರಿಷಭ್ ಪಂತ್​ಗೆ ವಂಚಿಸಿದ್ದಾರೆ ಎನ್ನಲಾಗಿದೆ. ಮೃಣಾಕ್ ಸಿಂಗ್ ವಿರುದ್ಧ ಇರುವ ಬೇರೊಂದು ಆರೋಪದ ವಿಚಾರಣೆ ವೇಳೆ ಈ ಅಂಶವೀಗ ಬೆಳಕಿಗೆ ಬಂದಿದೆ. ಈ ಕುರಿತಂತೆ ರಿಷಭ್​ ಅವರು ಮ್ಯಾನೇಜರ್ ಪುನೀತ್ ಸೋಲಂಕಿ ದೂರು ಕೂಡ ದಾಖಲು ಮಾಡಿದ್ದರು ಎಂಬ ಅಂಶ ತಿಳಿದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮೃಣಾಕ್ ಸಿಂಗ್ 1 ಕೋಟಿ 63 ಲಕ್ಷ ಚೆಕ್ ಬೌನ್ಸ್ ಮಾಡುವ ಮೂಲಕ ರಿಷಭ್​ ಅವರಿಗೆ ವಂಚಿಸಿದ್ದಾರೆ ಎಂದು ಮ್ಯಾನೇಜರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ಹೇಗೆ ಬೆಳಕಿಗೆ ಬಂತು?ಮೃಣಾಕ್ ಉದ್ಯಮಿಯೊಬ್ಬರಿಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಗ್ಗದ ದರದಲ್ಲಿ ದುಬಾರಿ ವಾಚ್ ಮತ್ತು ಮೊಬೈಲ್ ಫೋನ್​ಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸಿರುವ ಆರೋಪವಿದೆ. ಆರು ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಅವರ ವಿರುದ್ಧ ಮುಂಬೈನ ಜುಹು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದರ ವಿಚಾರಣೆ ವೇಳೆ ರಿಷಭ್​ ಅವರಿಗೆ ಆಗಿರುವ ವಂಚನೆ ಪ್ರಕರಣ ಕೂಡ ಬೆಳಕಿಗೆ ಬಂದಿದೆ. ಮೃಣಾಕ್​ ಸಿಂಗ್​ ತಾನು, ಐಷಾರಾಮಿ ವಾಚ್‌ಗಳು, ಬ್ಯಾಗ್‌ಗಳು, ಆಭರಣಗಳು ಇತ್ಯಾದಿಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ರಿಷಭ್​ ಅವರು ಫ್ರಾಂಕ್ ಮುಲ್ಲರ್ ವ್ಯಾನ್‌ಗಾರ್ಡ್ ಯಾಟಿಂಗ್ ಸಿರೀಸ್‌ನಿಂದ ವಾಚ್ ಖರೀದಿಸಲು ಇಚ್ಛೆ ಪಟ್ಟಿದ್ದರು. ಅದನ್ನು ತಾನು ಕೊಡಿಸುವುದಾಗಿ ಮೃಣಾಕ್ ಸಿಂಗ್ ಹೇಳಿ, ರಿಷಭ್​ ಅವರಿಂದ 36,25,120 ರೂ. ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ಇನ್ನೊಂದು ವಾಚ್​ಗಾಗಿ 62,60,000 ರೂ. ಪಡೆದುಕೊಂಡಿದ್ದರು. ಈ ರೀತಿಯಾಗಿ ರಿಷಭ್​ ಅವರ ಜತೆಗೆ ತಮಗೂ ವಂಚಿಸಿದ್ದಾರೆ ಎಂದು ಸೋಲಂಕಿ ದೂರಿನಲ್ಲಿ ದಾಖಲು ಮಾಡಿರುವುದು ಬಹಿರಂಗಗೊಂಡಿದೆ.
ಗಂಡನ ಉಪಜಾತಿ ಬೇರೆ ಎಂದು ಗಂಡನ ಬಿಟ್ಟು ತವರು ಸೇರಿದಾಕೆಗೆ ಹೈಕೋರ್ಟ್​ನಿಂದ ಬಿತ್ತು ಭಾರಿ ದಂಡ!

ಜಿ.ಪಂ, ತಾ.ಪಂ ಚುನಾವಣೆಗೆ ಮುಹೂರ್ತ ಫಿಕ್ಸ್​: ಸರ್ಕಾರಕ್ಕೆ ಗಡುವು ನೀಡಿದ ಹೈಕೋರ್ಟ್

ಅವನನ್ನು ಅಪ್ಪಾ ಎನ್ನಲು ಹೇಸಿಗೆಯಾಗ್ತಿದೆ, ಅವನನ್ನು ಸಾಯಿಸಲು ಆಗಲ್ಲ, ನಾನೇ ಸಾಯುತ್ತಿದ್ದೇನೆ: ಬಾಲಕಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 17 =
Remember me
