ಮುಂಬೈ:ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ಅಜ್ಜ ಆಗಿದ್ದಾರೆ. ಮುಕೇಶ್​ ಮತ್ತು ನೀತಾ ಅಂಬಾನಿಯವರ ಮಗ ಆಕಾಶ್​ ಪತ್ನಿ ಶ್ಲೋಕಾ ಇಂದು ಇಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ಇವರ ವಿವಾಹವು 2019ರ ಮಾರ್ಚ್​ ತಿಂಗಳಿನಲ್ಲಿ ನಡೆದಿತ್ತು. ಇಂದು ಮಗುವಿಗೆ ಜನ್ಮ ನೀಡಿರುವ ಕುರಿತು ಮುಕೇಶ್​ ದಂಪತಿ ಸಂತಸ ಹಂಚಿಕೊಂಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇರುವುದಾಗಿ ಹೇಳಿದ್ದಾರೆ.

ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಸಂತಾನವಾಗಿದೆ ಎಂದು ಅವರು ಹೇಳಿದ್ದಾರೆ. ಇದರ ಜತೆಗೆ, ಧೀರೂಭಾಯ್ ಮತ್ತು ಕೋಕಿಲಾ ಅಂಬಾನಿ ಅವರು ತಮ್ಮ ಮರಿಮೊಮ್ಮಗನನ್ನು ತುಂಬು ಸಂತೋಷದಿಂದ ಸ್ವಾಗತಿಸಿದ್ದಾರೆ.
ಈ ನಡುವೆಯೇ, ಜನರಿಗೂ ಒಂದು ಸಂತಸ ಸುದ್ದಿ ನೀಡಿರುವ ಮುಕೇಶ್​ ಅಂಬಾನಿ, 2021ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಜಿಯೊ 5ಜಿ ಸೇವೆ ಆರಂಭಿಸಲಾಗುವುದು ಹೇಳಿದ್ದಾರೆ.
ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಜಿಯೊದ 5ಜಿ ಸೇವೆ ಒಂದು ಪುರಾವೆಯಾಗಲಿದೆ. ಮುಂದಿನ ವರ್ಷ ದೇಶದಲ್ಲಿ ಜಿಯೊ 5ಜಿ ಸೇವೆಯನ್ನು ತರುವುದು ಮಾತ್ರವಲ್ಲದೆ ಗೂಗಲ್ ಜತೆ ಸೇರಿಕೊಂಡು ಅಂಡ್ರಾಯ್ಡ್ ಫೋನ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಾಮಾನ್ಯ ಜನರ ಕೈಗೆ ಎಟಕುವ ದರದಲ್ಲಿ ಇದನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
ಗೂಗಲ್​ ಓಪನ್​ ಮಾಡಿದ ತಕ್ಷಣ ಇಂದು ಕಾಣಿಸಿಕೊಳ್ಳುತ್ತಿರುವ ವ್ಯಕ್ತಿ ಯಾರು ಗೊತ್ತಾ?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − twelve =
Remember me
